Advertisement

ವಾಯುಪಡೆ ಹೆಲಿಕಾಪ್ಟರ್‌ ಪತನ: 7 ಯೋಧರು ಹುತಾತ್ಮ

09:20 AM Oct 07, 2017 | Team Udayavani |

ಹೊಸದಿಲ್ಲಿ: ವಾಯುಪಡೆಯ ರಷ್ಯಾ ನಿರ್ಮಿತ ಎಂಐ-17 ಸುಧಾರಿತ ಹೆಲಿಕಾಪ್ಟರ್‌ವೊಂದು ಶುಕ್ರವಾರ ಅರುಣಾಚಲ ಪ್ರದೇಶದಲ್ಲಿ ಪತನಗೊಂಡಿದ್ದು, ಏಳು ಯೋಧರು ಹುತಾತ್ಮರಾಗಿದ್ದಾರೆ. ಇಬ್ಬರು ಪೈಲಟ್‌ಗಳು ಸೇರಿದಂತೆ ವಾಯುಪಡೆಯ ಐವರು ಹಾಗೂ ಸೇನೆಯ ಇಬ್ಬರು ಯೋಧರು ಅಸುನೀಗಿದ್ದಾರೆ ಎಂದು ವಾಯಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಚೀನ ಗಡಿಗೆ ಹೊಂದಿಕೊಂಡಿರುವ ತವಾಂಗ್‌ ಪ್ರದೇಶದಲ್ಲಿ ಶುಕ್ರವಾರ ಬೆಳಗಿನ ಜಾವ ಈ ದುರಂತ ಸಂಭವಿಸಿದೆ. ಇದು ರಷ್ಯಾನಿರ್ಮಿತ ಹೆಲಿಕಾಪ್ಟರ್‌ ಆಗಿದ್ದು, ಸೇನಾ ಸಿಬಂದಿಗೆ ಅಗತ್ಯ ಪರಿಕರಗಳನ್ನು ಹೊತ್ತು ಸಾಗುತ್ತಿದ್ದಾಗ ಅವಘಡ ಸಂಭವಿಸಿದೆ. ಅಪಘಾತಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next