Advertisement

Kamal Haasan: ಹೊಸ ಪೋಸ್ಟರ್‌ ಮೂಲಕ ಪ್ರೇಕ್ಷಕರಿಗೆ ವಿಶೇಷ ಅಪ್ಡೇಟ್‌ ಕೊಟ್ಟ ʼಇಂಡಿಯನ್‌-2ʼ

03:20 PM Oct 29, 2023 | Team Udayavani |

ಚೆನ್ನೈ: 1996ರಲ್ಲಿ ಎಸ್.ಶಂಕರ್ ನಿರ್ದೇಶಿಸಿದ್ದʼ ಇಂಡಿಯನ್ʼ ಸಿನಿಮಾ ಬ್ಲಾಕ್ ಬಸ್ಟರ್ ಸಿನಿಮಾ ಆಗಿ ಹೊರಹೊಮ್ಮಿ ಇತಿಹಾಸ ಸೃಷ್ಟಿಸಿದ್ದು ಗೊತ್ತೇ ಇದೆ. ಈ ಸಿನಿಮಾದ ಸೀಕ್ವೆಲ್ ಸಟ್ಟೇರಿದ ದಿನದಿಂದ ದೊಡ್ಡಮಟ್ಟದಲ್ಲಿ ನಿರೀಕ್ಷೆ ಹೆಚ್ಚಿಸಿದೆ.

Advertisement

ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುತ್ತಿದ್ದ ಕಮಲ್‌ ಹಾಸನ್‌ ಅವರ ʼಇಂಡಿಯನ್‌ -2ʼ ಹೊಸ ಅನೌನ್ಸ್‌ ಮೆಂಟ್‌ ವೊಂದನ್ನು ಮಾಡಿ, ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. ಸಿನಿಮಾದಲ್ಲಿ ಕಮಲ್‌ ಹಾಸನ್‌ ಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕಾಗಿ ವಯಸ್ಸಾದವರಂತೆ ಕಾಣಿಸಿಕೊಳ್ಳಲಿದ್ದಾರೆ. ಸಾಕಷ್ಟು ತಯಾರಿಯನ್ನು ನಡೆಸಿಕೊಂಡಿರುವ ಕಮಲ್‌ ಹಾಸನ್‌ ಅವರನ್ನು ʼಇಂಡಿಯನ್‌ -2ʼ ನಲ್ಲಿ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

ಮುಂದಿನ ತಿಂಗಳು(ನವೆಂಬರ್‌ 7 ರಂದು) ಕಮಲ್‌ ಹಾಸನ್‌ ಅವರ ಹುಟ್ಟುಹಬ್ಬವಿದೆ. ಅದಕ್ಕೂ ಮುನ್ನ ಸಿನಿಮಾ ತಂಡ ಸ್ಪೆಷೆಲ್‌ ಅಪ್ಡೇಟ್‌ ವೊಂದನ್ನು ರಿವೀಲ್‌ ಮಾಡುವುದಾಗಿ ಹೇಳಿದೆ. ಸಿನಿಮಾದ ಮೊದಲ ಗ್ಲಿಂಪ್ಸ್‌ ನ್ನು ನವೆಂಬರ್‌ 3 ರಂದು ರಿಲೀಸ್‌ ಮಾಡುವುದಾಗಿ ಲೈಕಾ ಪ್ರೊಡಕ್ಷನ್ಸ್ ಪೋಸ್ಟರ್‌ ವೊಂದನ್ನು ರಿವೀಲ್‌ ಮಾಡಿ ಹೇಳಿದೆ.

ʼಇಂಡಿಯನ್‌ -2ʼ ಸಿನಿಮಾದಲ್ಲಿ ಸಿದ್ಧಾರ್ಥ್, ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಮತ್ತು ಕಾಳಿದಾಸ್ ಜಯರಾಮ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

ಅನಿರುದ್ಧ್‌ ಅವರು ಸಿನಿಮಾಕ್ಕೆ ಮ್ಯೂಸಿಕ್‌ ನೀಡಲಿದ್ದಾರೆ. ಮುಂದಿನ ವರ್ಷ ಬಹು ನಿರೀಕ್ಷಿತ ಸಿನಿಮಾ ಬಿಡುಗಡೆ ಆಗಲಿದೆ.

Advertisement

ಇತ್ತೀಚೆಗೆ ಕಮಲ್‌ ಹಾಸನ್‌ ಅವರು ಮಣಿರತ್ನಂ ಅವರೊಂದಿಗೆ ಸಿನಿಮಾ ಮಾಡಲಿದ್ದೇನೆ ಎಂದು ಘೋಷಿಸಿದ್ದರು. ಈ ಸಿನಿಮಾಕ್ಕೆ ʼKH234ʼ ಎಂದು ಟೈಟಲ್‌ ಇಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next