Advertisement

ಒಗ್ಗೂಡಿ ಶ್ರಮಿಸುವ ಭಾರತ ಸದಾ ಅಖಂಡ : ಪ್ರಧಾನಿ ಮೋದಿ

11:34 AM Feb 28, 2019 | udayavani editorial |

ಹೊಸದಿಲ್ಲಿ : ‘ಭಾರತ ಸದಾ ಒಗ್ಗೂಡಿ ಶ್ರಮಿಸುತ್ತದೆ ಮತ್ತು ಅಖಂಡವಾಗಿ ನಿಲ್ಲುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಂದು ದೃಢ ಸಂಕಲ್ಪದಿಂದ ಹೇಳಿದರು. 

Advertisement

ಭಾರತ – ಪಾಕ್‌ ಉದ್ವಿಗ್ನತೆ, ಬಿಕ್ಕಟ್ಟಿನ ನಡುವೆ ಪ್ರಧಾನಿ ಮೋದಿ ಅವರು ಇಂದು ಗುರುವಾರ ವಿಶ್ವದಲ್ಲೆ ಬೃಹತ್‌ ಎನಿಸಿರುವ ವಿಡಿಯೋ ಕಾನ್ಫರೆನ್ಸ್‌ನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. 

ಪಾಕಿಸ್ಥಾನದಲ್ಲಿನ ಜೈಶ್‌ ಉಗ್ರ ತರಬೇತಿ ಶಿಬಿರಗಳನ್ನು ನಾಶಗೈದು 350ಕ್ಕೂ ಹೆಚ್ಚು ಉಗ್ರರನ್ನು ಬಲಿ ಪಡೆದ ಭಾರತೀಯ ವಾಯು ಪಡೆಯ ಎಂಟೆದೆಯ ಸಾಹಸವನ್ನು ಕೊಂಡಾಡಿದ ಪ್ರಧಾನಿ ಮೋದಿ, ಯಾರೂ ಕೂಡ ಸೇನೆಯ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡಬಾರದು ಎಂದು ವಿಪಕ್ಷಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಪರೋಕ್ಷವಾಗಿ ಹೇಳಿದರು. 

ವಿಶ್ವದ ಅತೀ ದೊಡ್ಡ ವಿಡಿಯೋ ಕಾನ್ಫರೆನ್‌ ಮೂಲಕ ಸುಮಾರು 15,000 ತಾಣಗಳಲ್ಲಿನ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಮೇರಾ ಬೂತ್‌ ಸಬ್‌ಸೇ ಮಜ್‌ಬೂತ್‌ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next