Advertisement

ಬ್ಯಾಟಿಂಗ್‌ ಚಾಲೆಂಜ್‌ ಗೆದ್ದ ಭಾರತಕ್ಕೆ ಟಿ20 ಸರಣಿ

11:24 PM Mar 20, 2021 | Team Udayavani |

ಅಹ್ಮದಾಬಾದ್‌: ದೊಡ್ಡ ಮೊತ್ತದ ಬ್ಯಾಟಿಂಗ್‌ ಚಾಲೆಂಜ್‌ನಲ್ಲಿ ಗೆದ್ದುಬಂದ ಭಾರತ ವಿಶ್ವದ ನಂಬರ್‌ ವನ್‌ ತಂಡವಾದ ಇಂಗ್ಲೆಂಡ್‌ ಎದುರಿನ ಟಿ20 ಸರಣಿಯನ್ನು ಅಧಿಕಾರಯುತವಾಗಿ ತನ್ನದಾಗಿಸಿಕೊಂಡಿದೆ. ಶನಿವಾರದ ನಿರ್ಣಾಯಕ ಮುಖಾಮುಖೀಯಲ್ಲಿ 36 ರನ್ನುಗಳ ಗೆಲುವು ಸಾಧಿಸುವ ಮೂಲಕ ಕೊಹ್ಲಿ ಪಡೆ 3-2ರಿಂದ ಸರಣಿ ವಶಪಡಿಸಿಕೊಂಡಿತು.

Advertisement

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ಎರಡೇ ವಿಕೆಟಿಗೆ 224 ರನ್‌ ರಾಶಿ ಹಾಕಿದರೆ, ಇಂಗ್ಲೆಂಡ್‌ 8 ವಿಕೆಟಿಗೆ 188 ರನ್‌ ಗಳಿಸಿ ಶರಣಾಯಿತು.

ಜಾಸ್‌ ಬಟ್ಲರ್‌-ಡೇವಿಡ್‌ ಮಾಲನ್‌ ಸಿಡಿದು ನಿಂತಾಗ ಇಂಗ್ಲೆಂಡ್‌ ಮುಂದೆ ಗೆಲುವಿನ ಅವಕಾಶ ಉಜ್ವಲವಾಗಿತ್ತು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಭಾರತ ಸಂಪೂರ್ಣ ನಿಯಂತ್ರಣ ಸಾಧಿಸಿತು. ಮಾಲನ್‌ ಸರ್ವಾಧಿಕ 68, ಬಟ್ಲರ್‌ 52 ರನ್‌ ಬಾರಿಸಿದರು. ಈ ಜೋಡಿಯಿಂದ ದ್ವಿತೀಯ ವಿಕೆಟಿಗೆ 12.3 ಓವರ್‌ಗಳಿಂದ 130 ರನ್‌ ಒಟ್ಟುಗೂಡಿತು.

ವಿರಾಟ್‌ ಕೊಹ್ಲಿ ಓಪನಿಂಗ್‌ :

ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ ಸೇರಿದಂತೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಆವೇಶಭರಿತ ಬ್ಯಾಟಿಂಗ್‌ ಭಾರತದ ಬೃಹತ್‌ ಮೊತ್ತಕ್ಕೆ ಕಾರಣವಾಯಿತು.

Advertisement

ಕೆ.ಎಲ್‌. ರಾಹುಲ್‌ ಅವರ ಸತತ ವೈಫ‌ಲ್ಯದಿಂದಾಗಿ ಭಾರತ ಈ ಪಂದ್ಯದ ಓಪನಿಂಗ್‌ ವಿಭಾಗದಲ್ಲಿ ಮಹತ್ವದ ಬದಲಾವಣೆ ಮಾಡಿತು. ರಾಹುಲ್‌ ಬದಲು ಸ್ವತಃ ವಿರಾಟ್‌ ಕೊಹ್ಲಿಯೇ ರೋಹಿತ್‌ ಜತೆ ಆರಂಭಿಕನಾಗಿ ಇಳಿದರು. ಈ ಪ್ರಯೋಗ ಯಶಸ್ವಿಯಾಯಿತು. ಹಿಂದಿನ 4 ಪಂದ್ಯಗಳಿಂದ ಮೊದಲ ವಿಕೆಟಿಗೆ ಕೇವಲ 30 ರನ್‌ ಒಟ್ಟುಗೂಡಿಸಿದ್ದ ಭಾರತ, ಇಲ್ಲಿ ಭರ್ತಿ 9 ಓವರ್‌ ನಿಭಾಯಿಸಿ 94 ರನ್‌ ಪೇರಿಸಿತು.

ಪವರ್‌ ಪ್ಲೇಯಲ್ಲಿ ರನ್‌ ಬರಗಾಲ ಅನುಭವಿಸುತ್ತ ಬಂದಿದ್ದ ಭಾರತವಿಲ್ಲಿ 6 ಓವರ್‌ಗಳಿಂದ ಭರ್ತಿ 60 ರನ್‌ ಸೂರೆಗೈದಿತು. ರೋಹಿತ್‌, ಕೊಹ್ಲಿ ಜಿದ್ದಿಗೆ ಬಿದ್ದವರಂತೆ ಬ್ಯಾಟ್‌ ಬೀಸುತ್ತ ಹೋದರು. ವುಡ್‌, ಆರ್ಚರ್‌ ಸೇರಿದಂತೆ ಆಂಗ್ಲರ ಬೌಲಿಂಗ್‌ ದಿಕ್ಕಾಪಾಲಾಯಿತು.

ಇದು ಈ ಸರಣಿಯಲ್ಲಿ ಭಾರತದ ಪ್ರಯೋಗಿಸಿದ 4ನೇ ಓಪನಿಂಗ್‌ ಜೋಡಿಯಾಗಿತ್ತು. ಇದಕ್ಕೂ ಮೊದಲು ರಾಹುಲ್‌-ಧವನ್‌, ರಾಹುಲ್‌-ಇಶಾನ್‌, ರೋಹಿತ್‌-ರಾಹುಲ್‌ ಇನ್ನಿಂಗ್ಸ್‌ ಆರಂಭಿಸಿದ್ದರು.

ಅಬ್ಬರಿಸುತ್ತ ಸಾಗಿದ ರೋಹಿತ್‌ 30 ಎಸೆತಗಳಿಂದ ಅರ್ಧ ಶತಕ ಪೂರ್ತಿಗೊಳಿಸಿದರು. ಇದು 111ನೇ ಪಂದ್ಯದಲ್ಲಿ ರೋಹಿತ್‌ ಬಾರಿಸಿದ 22ನೇ ಫಿಫ್ಟಿ. 34 ಎಸೆತ ನಿಭಾಯಿಸಿದ ಅವರು 64 ರನ್‌ ಬಾರಿಸಿ ಸ್ಟೋಕ್ಸ್‌ಗೆ ಬೌಲ್ಡ್‌ ಆದರು. 4 ಫೋರ್‌ ಹಾಗೂ 5 ಪ್ರಚಂಡ ಸಿಕ್ಸರ್‌ ಸಿಡಿಸುವ ಮೂಲಕ ರೋಹಿತ್‌ ಇಂಗ್ಲೆಂಡ್‌ ಬೌಲರ್‌ಗಳ ಮೇಲೆ ದಂಡೆತ್ತಿ ಹೋದರು.

ಕೊಹ್ಲಿ ದಾಖಲೆಯ ಫಿಫ್ಟಿ :

ಪೋಷಕ ಪಾತ್ರಧಾರಿಯಾಗಿ ಕಾಣಿಸಿಕೊಂಡ ವಿರಾಟ್‌ ಕೊಹ್ಲಿ 28ನೇ ಅರ್ಧ ಶತಕದೊಂದಿಗೆ ಮಿಂಚಿದರು. ಪ್ರಸಕ್ತ ಸರಣಿಯಲ್ಲಿ ಕೊಹ್ಲಿ ಬಾರಿಸಿದ 3ನೇ ಫಿಫ್ಟಿ ಇದಾಗಿದೆ.

ಈ ಸಾಧನೆಯೊಂದಿಗೆ ಕೊಹ್ಲಿ ನಾಯಕನಾಗಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಧಿಕ 12 ಸಲ “50 ಪ್ಲಸ್‌’ ರನ್‌ ಬಾರಿಸಿದ ದಾಖಲೆ ಸ್ಥಾಪಿಸಿದರು. ಕೇನ್‌ ವಿಲಿಯಮ್ಸನ್‌ ದ್ವಿತೀಯ ಸ್ಥಾನಕ್ಕೆ ಇಳಿದರು (11).

ವಿರಾಟ್‌ ಕೊಹ್ಲಿ ಟಿ20ಯಲ್ಲಿ ಓಪನಿಂಗ್‌ ಮಾಡಿದ 8ನೇ ನಿದರ್ಶನ ಇದಾಗಿದೆ. ಹಿಂದಿನ 7 ಪಂದ್ಯಗಳಿಂದ 198 ರನ್‌ ಬಾರಿಸಿದ್ದರು. ಇದರಲ್ಲಿ 70 ರನ್‌ ಸರ್ವಾಧಿಕ ಮೊತ್ತವಾಗಿತ್ತು. ಈ ದಾಖಲೆಯನ್ನು ಇಲ್ಲಿ ಮುರಿದರು. ಆರಂಭಿಕನಾಗಿ ಬಂದು ಔಟಾಗದೆ ಉಳಿದ ಕೊಹ್ಲಿ ಕೊಡುಗೆ 80 ರನ್‌. ಎದುರಿಸಿದ್ದು 52 ಎಸೆತ, ಬಾರಿಸಿದ್ದು 7 ಬೌಂಡರಿ ಮತ್ತು 2 ಸಿಕ್ಸರ್‌. ಈ ಸರಣಿಯಲ್ಲಿ ಕೊಹ್ಲಿ ಗಳಿಕೆ 231ಕ್ಕೆ ಏರಿತು. ಇದು ದ್ವಿಪಕ್ಷೀಯ ಸರಣಿಯೊಂದರಲ್ಲಿ ದಾಖಲಾದ ಅತ್ಯಧಿಕ ಗಳಿಕೆಯಾಗಿದೆ.

ಸೂರ್ಯ, ಪಾಂಡ್ಯ ಮಿಂಚು :

ಸೂರ್ಯಕುಮಾರ್‌ ಯಾದವ್‌ ಇಲ್ಲಿ ಎದುರಿಸಿದ 2ನೇ ಹಾಗೂ 3ನೇ ಎಸೆತಗಳನ್ನೇ ಸಿಕ್ಸರ್‌ಗೆ ರವಾನಿಸಿದರು. ಅದು ಆದಿಲ್‌ ರಶೀದ್‌ ಓವರ್‌ ಆಗಿತ್ತು. ಬಳಿಕ ಜೋರ್ಡನ್‌ಗೆ

ಹ್ಯಾಟ್ರಿಕ್‌ ಫೋರ್‌ ರುಚಿ ತೋರಿಸಿದರು. ಕೊನೆಗೆ ಜೋರ್ಡನ್‌ ಅವರೇ ಅದ್ಭುತ ಫೀಲ್ಡಿಂಗ್‌ ಮೂಲಕ ಈ ವಿಕೆಟ್‌ ಪತನದಲ್ಲಿ ಮಹತ್ವದ ಪಾತ್ರ ವಹಿಸಿದರು. ಸೂರ್ಯನ ಕೊಡುಗೆ 17 ಎಸೆತಗಳಿಂದ 32 ರನ್‌. ಅನಂತರ ಕ್ರೀಸಿಗೆ ಬಂದ ಹಾರ್ದಿಕ್‌ ಪಾಂಡ್ಯ ಕೂಡ ಮುನ್ನುಗ್ಗಿ ಬೀಸತೊಡಗಿದರು. ಹೀಗಾಗಿ ಡೆತ್‌ ಓವರ್‌ಗಳಲ್ಲಿ ರನ್‌ ಸುರಿಮಳೆಯಾಯಿತು. ಅಂತಿಮ 5 ಓವರ್‌ಗಳಲ್ಲಿ ಭಾರತ ವಿಕೆಟ್‌ ನಷ್ಟವಿಲ್ಲದೆ 67 ರನ್‌ ಪೇರಿಸಿತು.

ಕೊನೆಗೂ ರಾಹುಲ್‌ ಔಟ್‌ :

ಮೊದಲ 4 ಪಂದ್ಯಗಳಿಂದ ಕೇವಲ 1, 0, 0 ಮತ್ತು 14 ರನ್‌ ಮಾಡಿದ್ದ ಕೆ.ಎಲ್‌. ರಾಹುಲ್‌ ಅವರನ್ನು ನಿರ್ಣಾಯಕ ಪಂದ್ಯದಿಂದ ಕೈಬಿಡಲಾಯಿತು. ಎಡಗೈ ವೇಗಿ ಟಿ. ನಟರಾಜನ್‌ ಸರಣಿಯಲ್ಲಿ ಮೊದಲ ಸಲ ಆಡುವ ಅವಕಾಶ ಪಡೆದರು.

ರಾಹುಲ್‌ ಗೈರಲ್ಲಿ ರೋಹಿತ್‌ ಶರ್ಮ ಅವರೊಂದಿಗೆ ನಾಯಕ ವಿರಾಟ್‌ ಕೊಹ್ಲಿಯೇ ಇನ್ನಿಂಗ್ಸ್‌ ಆರಂಭಿಸಲಿಳಿದರು. ಸೂರ್ಯಕುಮಾರ್‌ ಯಾದವ್‌ ಒನ್‌ಡೌನ್‌ನಲ್ಲಿ ಬಂದರು.

ಮೊದಲ ಪಂದ್ಯದಲ್ಲೇ ಸಿಡಿದ ಇಶಾನ್‌ ಕಿಶನ್‌ ಅವರನ್ನು ಆರಿಸದಿದ್ದುದು ಅಚ್ಚರಿಯಾಗಿ ಕಂಡಿತು. “ಫಿಟ್‌’ ಇಲ್ಲ ಎಂಬ ಕಾರಣಕ್ಕಾಗಿ ಅವರನ್ನು ಕಳೆದ ಪಂದ್ಯದಲ್ಲೇ ಹೊರಗಿಡಲಾಗಿತ್ತು.

ಇಂಗ್ಲೆಂಡ್‌ ತನ್ನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲಿಲ್ಲ.

 

ಸ್ಕೋರ್‌   ಪಟ್ಟಿ  :

ಭಾರತ :

ರೋಹಿತ್‌ ಶರ್ಮ          ಬಿ ಸ್ಟೋಕ್ಸ್‌       64

ವಿರಾಟ್‌ ಕೊಹ್ಲಿ            ಔಟಾಗದೆ         80

ಸೂರ್ಯಕುಮಾರ್‌       ಸಿ ರಾಯ್‌ ಬಿ ರಶೀದ್‌    32

ಹಾರ್ದಿಕ್‌ ಪಾಂಡ್ಯ       ಔಟಾಗದೆ         39

ಇತರ               9

ಒಟ್ಟು (ಎರಡು ವಿಕೆಟಿಗೆ)          224

ವಿಕೆಟ್‌ ಪತನ:1-94, 2-143.

ಬೌಲಿಂಗ್‌;ಆದಿಲ್‌ ರಶೀದ್‌         4-0-31-1

ಜೋಫ್ರ ಆರ್ಚರ್‌                     4-0-43-0

ಮಾರ್ಕ್‌ ವುಡ್‌             4-0-53-0

ಕ್ರಿಸ್‌ ಜೋರ್ಡನ್‌                     4-0-57-0

ಸ್ಯಾಮ್‌ ಕರನ್‌             1-0-11-0

ಬೆನ್‌ ಸ್ಟೋಕ್ಸ್‌               3-0-26-1

 

ಇಂಗ್ಲೆಂಡ್‌ :

ಜಾಸನ್‌ ರಾಯ್‌           ಬಿ ಭುವನೇಶ್ವರ್‌           0

ಜಾಸ್‌ ಬಟ್ಲರ್‌  ಸಿ ಪಾಂಡ್ಯ ಬಿ ಭುವನೆಶ್ವರ್‌       52

ಡೇವಿಡ್‌ ಮಾಲನ್‌       ಬಿ ಶಾರ್ದೂಲ್‌ 68

ಬೇರ್‌ಸ್ಟೊ  ಸಿ ಸೂರ್ಯಕುಮಾರ್‌ ಬಿ ಶಾದೂìಲ್‌           7

ಇಯಾನ್‌ ಮಾರ್ಗನ್‌    ಸಿ ರಾಹುಲ್‌ ಬಿ ಪಾಂಡ್ಯ           1

ಬೆನ್‌ ಸ್ಟೋಕ್ಸ್‌   ಸಿ ಪಂತ್‌ ಬಿ ನಟರಾಜನ್‌          14

ಜೋರ್ಡನ್‌  ಸಿ ಸೂರ್ಯಕುಮಾರ್‌ ಬಿ ಶಾರ್ದೂಲ್‌       11

ಜೋಪ್ರ ಆರ್ಚರ್‌         ರನೌಟ್‌            1

ಸ್ಯಾಮ್‌ ಕರನ್‌ ಔಟಾಗದೆ         11

ಆದಿಲ್‌ ರಶೀದ್‌ ಔಟಾಗದೆ         0

ಇತರ               20

ಒಟ್ಟು (8 ವಿಕೆಟಿಗೆ)                    188

ವಿಕೆಟ್‌ ಪತನ: 1-0, 2-130, 3-140, 4-142, 5-142, 6-165, 7-168, 8-174.

ಬೌಲಿಂಗ್‌;ಭುವನೇಶ್ವರ್‌ ಕುಮಾರ್‌        4-0-15-2

ಹಾರ್ದಿಕ್‌ ಪಾಂಡ್ಯ                   4-0-34-1

ವಾಷಿಂಗ್ಟನ್‌ ಸುಂದರ್‌             1-0-13-0

ಶಾದೂìಲ್‌ ಠಾಕೂರ್‌                4-0-45-3

ಟಿ. ನಟರಾಜನ್‌            4-0-39-1

ರಾಹುಲ್‌ ಚಹರ್‌                     3-0-33-0

Advertisement

Udayavani is now on Telegram. Click here to join our channel and stay updated with the latest news.

Next