Advertisement

ಲಂಕಾ ವಿರುದ್ಧ ಜಯ ಸಾಧಿಸಿ ಭಾರತ ಚಾಂಪಿಯನ್‌

12:06 AM Mar 22, 2021 | Team Udayavani |

ರಾಯ್‌ಪುರ: ರೋಡ್‌ ಸೇಫ್ಟಿ ವರ್ಲ್ಡ್ ಟಿ20 ಸೀರಿಸ್‌ ಫೈನಲ್‌ನಲ್ಲಿ ಶ್ರೀಲಂಕಾ ಲೆಜೆಂಡ್ಸ್‌ ವಿರುದ್ಧ ಆತಿಥೇಯ ಇಂಡಿಯಾ ಲೆಜೆಂಡ್ಸ್‌ 14 ರನ್‌ಗಳ ಗೆಲುವು ಸಾಧಿಸುವ ಮೂಲಕ ಚಾಂಪಿಯನ್‌ ಪಟ್ಟ ಅಲಂಕರಿಸಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 4 ವಿಕೆಟಿಗೆ 181 ರನ್‌ ಪೇರಿಸಿತು. ಬಳಿಕ ಗುರಿ ಬೆನ್ನತ್ತಿದ ಲಂಕಾ 20 ಓವರ್‌ಗಳಲ್ಲಿ 7 ವಿಕೆಟಿಗೆ 167 ರನ್‌ ಗಳಿಸಿ ಶರಣಾಯಿತು.

ಆರಂಭಿಕ ಆಘಾತ :

ಭಾರತ ವೀರೇಂದ್ರ ಸೆಹವಾಗ್‌ (10) ಅವರನ್ನು ಬೇಗನೆ ಕಳೆದುಕೊಂಡಿತು. ಎಸ್‌. ಬದರೀನಾಥ್‌ (7) ಕೂಡ ಹೆಚ್ಚು ಹೊತ್ತು ಉಳಿಯಲಿಲ್ಲ. ಈ ಹಂತದಲ್ಲಿ ನಾಯಕ ಸಚಿನ್‌ ತೆಂಡುಲ್ಕರ್‌ ಮತ್ತು ಯುವರಾಜ್‌ ಸಿಂಗ್‌ ಸೇರಿಕೊಂಡು ತಂಡವನ್ನು ಆಧರಿಸಿ ನಿಂತರು. ತೆಂಡುಲ್ಕರ್‌ ಕ್ಲಾಸಿಕ್‌ ಬ್ಯಾಟಿಂಗ್‌ ಪ್ರದರ್ಶನವೊಂದನ್ನು ನೀಡಿ 30 ರನ್‌ ಹೊಡೆದರು (23 ಎಸೆತ, 5 ಬೌಂಡರಿ).

ಮುಂದಿನದು ಯುವರಾಜ್‌ ಸಿಂಗ್‌ ಮತ್ತು ಯೂಸುಫ್ ಪಠಾಣ್‌ ಅವರ ಬ್ಯಾಟಿಂಗ್‌ ದರ್ಬಾರು. ಲಂಕಾ ಬೌಲರ್‌ಗಳ ಮೇಲೇರಿ ಹೋದ ಈ ಜೋಡಿ 7.5 ಓವರ್‌ಗಳಿಂದ 85 ರನ್‌ ಒಟ್ಟುಗೂಡಿಸಿತು. ಹೀಗಾಗಿ ಭಾರತ ಬೃಹತ್‌ ಮೊತ್ತ ದಾಖಲಿಸುವಂತಾಯಿತು. ಇಬ್ಬರೂ ಟೀಮ್‌ ಇಂಡಿಯಾ ದಿನಗಳ ಬ್ಯಾಟಿಂಗ್‌ ವೈಭವವನ್ನು ನೆನಪಿಸಿ ಅರ್ಧ ಶತಕ ಬಾರಿಸಿ ಮೆರೆದರು; ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದರು.

Advertisement

ಯುವರಾಜ್‌ ಸಿಂಗ್‌ 41 ಎಸೆತ ಎದುರಿಸಿ 60 ರನ್‌ ಬಾರಿಸಿದರು. ಈ ಆಕರ್ಷಕ ಇನ್ನಿಂಗ್ಸ್‌ನಲ್ಲಿ 4 ಫೋರ್‌, 4 ಸಿಕ್ಸರ್‌ ಸೇರಿತ್ತು. ಯೂಸುಫ್ ಪಠಾಣ್‌ ಅವರದು ಅಜೇಯ 62 ರನ್‌ ಕೊಡುಗೆ. 36 ಎಸೆತ ಎದುರಿಸಿದ ಅವರು 5 ಸಿಕ್ಸರ್‌, 4 ಬೌಂಡರಿ ಸಿಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next