Advertisement

ಏಕದಿನ ಸರಣಿ : ಶ್ರೀಲಂಕಾ ವಿರುದ್ಧ ಧವನ್‌ ಪಡೆಗೆ 7 ವಿಕೆಟ್‌ ಜಯ

10:42 PM Jul 18, 2021 | Team Udayavani |

ಕೊಲಂಬೊ : ಸರ್ವಾಂಗೀಣ ಪ್ರದರ್ಶನ ನೀಡಿದ ಶಿಖರ್‌ ಧವನ್‌ ಸಾರಥ್ಯದ ಟೀಮ್‌ ಇಂಡಿಯಾ-2 ಶ್ರೀಲಂಕಾ ಎದುರಿನ ಏಕದಿನ ಸರಣಿಯನ್ನು 7 ವಿಕೆಟ್‌ ಗೆಲುವಿನೊಂದಿಗೆ ಆರಂಭಿಸಿದೆ.

Advertisement

ರವಿವಾರದ ಮುಖಾಮುಖೀಯಲ್ಲಿ ಶ್ರೀಲಂಕಾ 9 ವಿಕೆಟಿಗೆ 262 ರನ್‌ ಗಳಿಸಿದರೆ, ಭಾರತ ಯಾವುದೇ ಒತ್ತಡವಿಲ್ಲದೆ 36.4 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 263 ರನ್‌ ಬಾರಿಸಿತು.

24 ಎಸೆತಗಳಿಂದ 43 ರನ್‌ ಬಾರಿಸಿ ಸಿಡಿದು ನಿಂತ ಪೃಥ್ವಿ ಶಾ, ಅಜೇಯ 86 ರನ್‌ ಮಾಡಿದ ನಾಯಕ ಶಿಖರ್‌ ಧವನ್‌ (95 ಎಸೆತ, 6 ಫೋರ್‌, 1 ಸಿಕ್ಸರ್‌), ಮೊದಲ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟಿ ಏಕದಿನಕ್ಕೆ ಭರ್ಜರಿ ಪದಾರ್ಪಣೆ ಮಾಡಿದ ಬರ್ತ್‌ಡೇ ಬಾಯ್‌ ಇಶಾನ್‌ ಕಿಶನ್‌ (42 ಎಸೆತ, 59ರನ್‌, 6 ಬೌಂಡರಿ, 2 ಸಿಕ್ಸರ್‌) ಭಾರತದ ಬ್ಯಾಟಿಂಗ್‌ ಹೀರೋಗಳಾಗಿ ಮೂಡಿಬಂದರು. ಪಾಂಡೆ 26, ಸೂರ್ಯಕುಮಾರ್‌ ಅಜೇಯ 31 ರನ್‌ ಕೊಡುಗೆ ಸಲ್ಲಿಸಿದರು.

ಲಂಕಾ ಬ್ಯಾಟ್ಸ್‌ಮನ್‌ಗಳಲ್ಲಿ ಯಾರಿಂದಲೂ ಅರ್ಧ ಶತಕ ದಾಖಲಾಗಲಿಲ್ಲ. ಎಲ್ಲರೂ ಉತ್ತಮ ಆರಂಭ ಪಡೆದರಾದರೂ ಇನ್ನಿಂಗ್ಸ್‌ ಬೆಳೆಸುವಲ್ಲಿ ವಿಫ‌ಲರಾದರು. 8ನೇ ಕ್ರಮಾಂಕದ ಚಮಿಕ ಕರುಣರತ್ನೆ ಅವರ ಅಜೇಯ 43 ರನ್‌ (35 ಎಸೆತ, 2 ಸಿಕ್ಸರ್‌, 1 ಫೋರ್‌) ಲಂಕಾ ಸರದಿಯ ಅತ್ಯಧಿಕ ಗಳಿಕೆಯಾಗಿತ್ತು. ಕೊನೆಯ ಹಂತದಲ್ಲಿ ಕರುಣರತ್ನೆ ಸಿಡಿದು ನಿಂತ ಪರಿಣಾಮ ತಂಡದ ಸ್ಕೋರ್‌ ನಿರೀಕ್ಷೆಗೂ ಮೀರಿ ಬೆಳೆಯಿತು.

ಭಾರತದ ಬೌಲಿಂಗ್‌ ಸರದಿಯಲ್ಲಿ ಭುವನೇಶ್ವರ್‌ ಕುಮಾರ್‌ ಹೊರತುಪಡಿಸಿ ಉಳಿದವರೆಲ್ಲ ಗಮನಾರ್ಹ ದಾಳಿ ಸಂಘಟಿಸಿದರು. ಭುವಿ 63 ರನ್‌ ನೀಡಿ ದುಬಾರಿಯಾಗುವ ಜತೆಗೆ ವಿಕೆಟ್‌ ಲೆಸ್‌ ಎನಿಸಿದರು. ಚಹರ್‌, ಕುಲದೀಪ್‌, ಚಹಲ್‌ ತಲಾ 2 ವಿಕೆಟ್‌ ಹಾರಿಸಿದರು. ಅತ್ಯಂತ ಮಿತವ್ಯಯಿ ಎನಿಸಿದವರು ಕೃಣಾಲ್‌ ಪಾಂಡ್ಯ.

Advertisement

ತ್ರಿವಳಿ ಸ್ಪಿನ್‌ ಯಶಸ್ಸು
ಕುಲದೀಪ್‌ ಪಾಲಿಗೆ ಇದು “ಮೇಕ್‌ ಆರ್‌ ಬ್ರೇಕ್‌’ ಪಂದ್ಯವಾಗಿತ್ತು. 17ನೇ ಓವರಿನಲ್ಲಿ ಅವಳಿ ಬೇಟೆಯಾಡುವ ಮೂಲಕ ಲಂಕೆಯ ಫೋರ್ಸ್‌ಗೆ ತಡೆಯಾಗಿ ನಿಂತರು. ಜತೆಗೆ ತಮ್ಮ ಭರ್ಜರಿ ಪುನರಾಗಮನವನ್ನೂ ಸಾರಿದರು. ಭಾರತದ ತ್ರಿವಳಿ ಸ್ಪಿನ್‌ ದಾಳಿ ಉತ್ತಮ ಯಶಸ್ಸು ಕಂಡಿತು. ಮೂವರೂ ಸೇರಿ 98 ಡಾಟ್‌ ಬಾಲ್‌ (16.2 ಓವರ್‌) ಎಸೆದರು.

ಸ್ಕೋರ್‌ ಪಟ್ಟಿ
ಶ್ರೀಲಂಕಾ
ಆವಿಷ್ಕ ಫೆರ್ನಾಂಡೊ ಸಿ ಪಾಂಡೆ ಬಿ ಚಹಲ್‌ 32
ಮಿನೋದ್‌ ಭನುಕ ಸಿ ಶಾ ಬಿ ಕುಲದೀಪ್‌ 27
ಭನುಕ ರಾಜಪಕ್ಷ ಸಿ ಧವನ್‌ ಬಿ ಕುಲದೀಪ್‌ 24
ಧನಂಜಯ ಡಿ ಸಿಲ್ವ ಸಿ ಭುವನೇಶ್ವರ್‌ ಬಿ ಕೃಣಾಲ್‌ 14
ಚರಿತ ಅಸಲಂಕ ಸಿ ಇಶಾನ್‌ ಬಿ ಚಹರ್‌ 38
ದಸುನ್‌ ಶಣಕ ಸಿ ಹಾರ್ದಿಕ್‌ ಬಿ ಚಹಲ್‌ 39
ವನಿಂದು ಹಸರಂಗ ಸಿ ಧವನ್‌ ಬಿ ಚಹರ್‌ 8
ಚಮಿಕ ಕರುಣರತ್ನೆ ಔಟಾಗದೆ 43
ಇಸುರು ಉದಾನ ಸಿ ಚಹರ್‌ ಬಿ ಹಾರ್ದಿಕ್‌ 8
ದುಷ್ಮಂತ ಚಮೀರ ರನೌಟ್‌ 13

ಇತರ 16
ಒಟ್ಟು (9 ವಿಕೆಟಿಗೆ) 262
ವಿಕೆಟ್‌ ಪತನ: 1-49, 2-85, 3-89, 4-117, 5-166, 6-186, 7-205, 8-222, 9-262.
ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ 9-0-63-0
ದೀಪಕ್‌ ಚಹರ್‌ 7-1-37-2
ಹಾರ್ದಿಕ್‌ ಪಾಂಡ್ಯ 5-0-33-1
ಯಜುವೇಂದ್ರ ಚಹಲ್‌ 10-0-52-2
ಕುಲದೀಪ್‌ ಯಾದವ್‌ 9-1-48-2
ಕೃಣಾಲ್‌ ಪಾಂಡ್ಯ 10-1-26-1

ಭಾರತ
ಪೃಥ್ವಿ ಶಾ ಸಿ ಆವಿಷ್ಕ ಬಿ ಧನಂಜಯ 43
ಶಿಖರ್‌ ಧವನ್‌ ಔಟಾಗದೆ 86
ಇಶಾನ್‌ ಕಿಶನ್‌ ಸಿ ಭನುಕ ಬಿ ಸಂದಕನ್‌ 59
ಮನೀಷ್‌ ಪಾಂಡೆ ಸಿ ಶಣಕ ಬಿ ಧನಂಜಯ 26
ಸೂರ್ಯಕುಮಾರ್‌ ಔಟಾಗದೆ 31
ಇತರ 18
ಒಟ್ಟು (36.4 ಓವರ್‌ಗಳಲ್ಲಿ 3 ವಿಕೆಟಿಗೆ) 263
ವಿಕೆಟ್‌ ಪತನ: 1-58, 2-143, 3-215.
ಬೌಲಿಂಗ್‌: ದುಷ್ಮಂತ ಚಮೀರ 7-0-42-0
ಇಸುರು ಉದಾನ 2-0-27-0
ಧನಂಜಯ ಡಿ ಸಿಲ್ವ 5-0-49-2
ಲಕ್ಷಣ ಸಂದಕನ್‌ 8.4-0-53-1
ಚರಿತ ಅಸಲಂಕ 3-0-26-0
ವನಿಂದು ಹಸರಂಗ 9-1-45-0
ಚಮಿಕ ಕರುಣರತ್ನೆ 2-0-16-0

Advertisement

Udayavani is now on Telegram. Click here to join our channel and stay updated with the latest news.

Next