Advertisement
ರೋಹಿತ್ ಮತ್ತು ಕೊಹ್ಲಿ ಅವರ ಅಮೋಘ ಶತಕದಿಂದ ಭಾರತ ಆರು ವಿಕೆಟಿಗೆ 337 ರನ್ನುಗಳ ದಾಖಲೆಯ ಮೊತ್ತ ಪೇರಿಸಿದರೆ ನ್ಯೂಜಿಲ್ಯಾಂಡ್ ಗೆಲುವಿನ ಸನಿಹಕ್ಕೆ ಬಂದರೂ ಅಂತಿಮ ಹಂತದಲ್ಲಿ ಜಸ್‌ಪ್ರೀತ್ ಬುಮ್ರಾ ಅವರ ದಾಳಿಯಿಂದ ಒತ್ತಡಕ್ಕೆ ಒಳಗಾಗಿ 7 ವಿಕೆಟಿಗೆ 331 ರನ್ ಗಳಿಸಲಷ್ಟೇ ಶಕ್ತವಾಗಿ ವೀರೋಚಿತ ಸೋಲನ್ನು ಕಂಡಿತು.
ಭಾರತ
ರೋಹಿತ್ ಶರ್ಮ ಸಿ ಸೌಥಿ ಬಿ ಸ್ಯಾಂಟ್ನರ್ 147
ಶಿಖರ್ ಧವನ್ ಸಿ ವಿಲಿಯಮ್ಸನ್ ಬಿ ಸೌಥಿ 14
ವಿರಾಟ್ ಕೊಹ್ಲಿ ಸಿ ವಿಲಿಯಮ್ಸನ್ ಬಿ ಸೌಥಿ 113
ಹಾರ್ದಿಲ್ ಪಾಂಡ್ಯ ಸಿ ಸೌಥಿ ಬಿ ಸ್ಯಾಂಟ್ನರ್ 8
ಎಂ.ಎಸ್. ಧೋನಿ ಸಿ ಮುನ್ರೊ ಬಿ ಮಿಲೆ° 25
ಕೇದಾರ್ ಜಾಧವ್ ಸಿ ಗಪ್ಟಿಲ್ ಬಿ ಮಿಲೆ° 18
ದಿನೇಶ್ ಕಾರ್ತಿಕ್ ಔಟಾಗದೆ 4
ಇತರ 8
ಒಟ್ಟು (50 ಓವರ್‌ಗಳಲ್ಲಿ 6 ವಿಕೆಟಿಗೆ) 337
ವಿಕೆಟ್ ಪತನ: 1-29, 2-259, 3-273, 4-302, 5-331, 6-337.
ಬೌಲಿಂಗ್:
ಟಿಮ್ ಸೌಥಿ 10-0-66-2
ಟ್ರೆಂಟ್ ಬೌಲ್ಟ್ 10-0-81-0
ಆ್ಯಡಂ ಮಿಲೆ° 10-0-64-2
ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 8-0-57-0
ಮಿಚೆಲ್ ಸ್ಯಾಂಟ್ನರ್ 10-0-58-2
ಕಾಲಿನ್ ಮುನ್ರೊ 2-0-10-0
Related Articles
ಮಾರ್ಟಿನ್ ಗಪ್ಟಿಲ್ ಸಿ ಕಾರ್ತಿಕ್ ಬಿ ಬುಮ್ರಾ 10
ಕಾಲಿನ್ ಮುನ್ರೊ ಬಿ ಚಾಹಲ್ 75
ಕೇನ್ ವಿಲಿಯಮ್ಸನ್ ಸಿ ಧೋನಿ ಬಿ ಚಾಹಲ್ 64
ರಾಸ್ ಟಯ್ಲರ್ ಸಿ ಜಾಧವ್ ಬಿ ಬುಮ್ರಾ 39
ಟಾಮ್ ಲಾಥಂ ರನೌಟ್ 65
ಹೆನ್ರಿ ನಿಕೋಲ್ಸ್ ಬಿ ಕುಮಾರ್ 37
ಗ್ರ್ಯಾಂಡ್‌ಹೋಮ್ ಔಟಾಗದೆ 8
ಮಿಚೆಲ್ ಸ್ಯಾಂಟ್ನರ್ ಸಿ ಧವನ್ ಬಿ ಬುಮ್ರಾ 9
ಟಿಮ್ ಸೌಥಿ ಔಟಾಗದೆ 4
ಇತರ: 20
ಒಟ್ಟು (50 ಓವರ್‌ಗಳಲ್ಲಿ 7 ವಿಕೆಟಿಗೆ) 331
ವಿಕೆಟ್ ಪತನ: 1-44, 2-153, 3-168, 4-247, 5-306, 6-312, 7-326
ಬೌಲಿಂಗ್:
ಭುವನೇಶ್ವರ್ ಕುಮಾರ್ 10-0-92-1
ಜಸ್‌ಪ್ರೀತ್ ಬುಮ್ರಾ 10-0-47-3
ಹಾರ್ದಿಕ್ ಪಾಂಡ್ಯ 5-0-47-0
ಅಕ್ಷರ್ ಪಟೇಲ್ 7-0-40-0
ಕೇಧಾರ್ ಜಾಧವ್ 8-0-54-0
ಯುಜ್ವೇಂದ್ರ ಚಾಹಲ್ 10-0-47-2
ಪಂದ್ಯಶ್ರೇಷ್ಠ: ರೋಹಿತ್ ಶರ್ಮ
ಸರಣಿಶ್ರೇಷ್ಠ: ವಿರಾಟ್ ಕೊಹ್ಲಿ
Advertisement
ಭಾರತದ ಇನ್ನಿಂಗ್ಸ್ರೋಹಿತ್, ಕೊಹ್ಲಿ ಶತಕ ಸಂಭ್ರಮ
ಶಿಖರ್ ಧವನ್ (14) ಅವರನ್ನು ಅಗ್ಗಕ್ಕೆ ಕಳೆದುಕೊಂಡ ಭಾರತಕ್ಕೆ ರೋಹಿತ್ ಶರ್ಮ-ವಿರಾಟ್ ಕೊಹ್ಲಿ ಜೋಡಿಯ ಮ್ಯಾರಥಾನ್ ಇನ್ನಿಂಗ್ಸ್ ಆಧಾರವಾಯಿತು. ಇವರಿಬ್ಬರೂ ವೈಯಕ್ತಿಕ ಶತಕಗಳೊಂದಿಗೆ ರಂಜಿಸುವ ಜತೆಗೆ, ದ್ವಿತೀಯ ವಿಕೆಟಿಗೆ ದ್ವಿಶತಕದ ಜತೆಯಾಟ ನಡೆಸಿ “ಗ್ರೀನ್‌ಪಾರ್ಕ್’ನಲ್ಲಿ ಮೆರೆದರು. 7ನೇ ಓವರಿನ ಆರಂಭದಲ್ಲಿ ಜತೆಯಾದ ರೋಹಿತ್-ಕೊಹ್ಲಿ 42ನೇ ಓವರ್ ತನಕ ನ್ಯೂಜಿಲ್ಯಾಂಡ್ ದಾಳಿಯನ್ನು ದಂಡಿಸುತ್ತ ಸಾಗಿದರು, 2ನೇ ವಿಕೆಟಿಗೆ 230 ರನ್ ಪೇರಿಸಿದರು. ಹೀಗಾಗಿ ಭಾರತದ ಮೊತ್ತ 337ರ ತನಕ ಬೆಳೆಯಿತು. ಇದು ಕಾನ್ಪುರದ ಏಕದಿನ ಪಂದ್ಯದಲ್ಲಿ ದಾಖಲಾದ ಅತ್ಯಧಿಕ ರನ್. 2015ರಲ್ಲಿ ದಕ್ಷಿಣ ಆಫ್ರಿಕಾ 5ಕ್ಕೆ 303 ರನ್ ಪೇರಿಸಿದ ದಾಖಲೆ ಪತನಗೊಂಡಿತು. ಇವರಲ್ಲಿ ಮೊದಲ ಶತಕ ರೋಹಿತ್ ಶರ್ಮ ಅವರಿಂದ ದಾಖಲಾಯಿತು. 106 ಎಸೆತಗಳಿಂದ 15ನೇ ಸೆಂಚುರಿ ಪೂರೈಸಿದ ರೋಹಿತ್ 147ರ ತನಕ ಬೆಳೆದರು. 138 ಎಸೆತಗಳ ಈ ಬ್ಯಾಟಿಂಗ್ ವೈಭವದ ವೇಳೆ 18 ಬೌಂಡರಿ, 2 ಸಿಕ್ಸರ್ ಸಿಡಿಯಿತು. ಕಳೆದ ಸಲ ದಕ್ಷಿಣ ಆಫ್ರಿಕಾ ವಿರುದ್ಧ ಕಾನ್ಪುರದಲ್ಲಿ ಆಡಿದ ವೇಳೆ ರೋಹಿತ್ 150 ರನ್ ಬಾರಿಸಿದ್ದರು. ರವಿವಾರವೂ “ಫುಲ್ ಫ್ಲೋ’ನಲ್ಲಿದ್ದ ರೋಹಿತ್, ಇನ್ನೇನು ಈ ಗಡಿ ಮುಟ್ಟಲಿದ್ದಾರೆ ಎನ್ನುವಷ್ಟರಲ್ಲಿ ಸ್ಯಾಂಟ್ನರ್ ಮೋಡಿಗೆ ಸಿಲುಕಿದರು. ಮುಂಬಯಿಯಲ್ಲಿ 121 ರನ್ ಮಾಡಿ ಶತಕವೀರರ ಯಾದಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ ಕೊಹ್ಲಿ, ಕಾನ್ಪುರದಲ್ಲಿ 113 ರನ್ ಬಾರಿಸಿದರು. ಅವರ 100 ರನ್ 96 ಎಸೆತಗಳಲ್ಲಿ ಬಂತು. ಒಟ್ಟು 106 ಎಸೆತ ಎದುರಿಸಿ 9 ಬೌಂಡರಿ, ಒಂದು ಸಿಕ್ಸರ್ ಸಿಡಿಸಿದರು. ಈ ಸಾಧನೆಯ ವೇಳೆ ಅವರು ಏಕದಿನದಲ್ಲಿ 9 ಸಾವಿರ ರನ್ ಪೂರ್ತಿಗೊಳಿಸಿದರು. ಆರಂಭದಲ್ಲಿ ರೋಹಿತ್-ಕೊಹ್ಲಿ ಎಚ್ಚರಿಕೆಯ ಆಟವಾಡಿದರು. 100 ರನ್ನಿಗೆ 18.4 ಓವರ್ ಬೇಕಾಯಿತು. ಕಾನ್ಪುರ ಟ್ರ್ಯಾಕ್ ಬ್ಯಾಟಿಂಗಿಗೆ ಸಹಕರಿಸಲಿದೆ ಎಂಬುದು ಖಾತ್ರಿಯಾದ ಬಳಿಕ ಬಿರುಸಿನ ಆಟಕ್ಕಿಳಿದರು. 200 ರನ್ 35.1 ಓವರ್‌ಗಳಿಂದ ಹರಿದು ಬಂತು. ರೋಹಿತ್ ನಿರ್ಗಮನದ ಬಳಿಕ ಭಡ್ತಿ ಪಡೆದು ಬಂದ ಹಾರ್ದಿಕ್ ಪಾಂಡ್ಯ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೇವಲ 8 ರನ್ ಮಾಡಿ ವಾಪಸಾದರು. ಧೋನಿ 17 ಎಸೆತಗಳಿಂದ 25 ರನ್ ಬಾರಿಸಿದರೆ (3 ಬೌಂಡರಿ), ಅಂತಿಮ ಎಸೆತದಲ್ಲಿ ಔಟಾದ ಜಾಧವ್ 10 ಎಸೆತ ಎದುರಿಸಿ 18 ರನ್ ಹೊಡೆದರು (1 ಬೌಂಡರಿ, 1 ಸಿಕ್ಸರ್). ನ್ಯೂಜಿಲ್ಯಾಂಡ್ ಪರ ಸೌಥಿ, ಮಿಲೆ° ಮತ್ತು ಸ್ಯಾಂಟ್ನರ್ ತಲಾ 2 ವಿಕೆಟ್ ಉರುಳಿಸಿದರು.