ಗಾಲೆ : ಇಲ್ಲಿ ಅತಿಥೇಯ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 304 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಕೊಹ್ಲಿ ಪಡೆ ನಾಲ್ಕನೇ ದಿನದಾಟದ ಅಂತ್ಯದೊಳಗೆ ಗೆಲುವನ್ನು ತನ್ನದಾಗಿಸಿಕೊಂಡು ಸಂಭ್ರಮಿಸಿದೆ.
2 ನೇ ಇನ್ನಿಂಗ್ಸ್‌ನಲ್ಲಿ ಗೆಲುವಿಗಾಗಿ ಬರೊಬ್ಬರಿ 550 ರನ್‌ಗಳ ಗುರಿ ಪಡೆದ ಲಂಕಾ 245 ರನ್‌ಗಳಿಗೆ ಆಲೌಟಾಗುವ ಮೂಲಕ ಶರಣಾಯಿತು.
2 ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ಗೆ 189 ರನ್‌ಗಳಿಸಿ 498 ರನ್ ಮುನ್ನಡೆಯಲ್ಲಿದ್ದ ಭಾರತ ನಾಲ್ಕನೇ ದಿನದಾಟದಲ್ಲಿ ವಿಕೆಟ್ ನಷ್ಟವಿಲ್ಲದೆ 240 ರನ್‌ಗಳಿಗೆ ಡಿಕ್ಲೇರ್ ಮಡಿಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 3 ರನ್‌ಗೆ ಔಟಾಗಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 2 ನೇ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದ ರು .136 ಎಸೆತಗಳಲ್ಲಿ 103 ರನ್‌ಗಳಿಸಿದ ಕೊಹ್ಲಿ ಮತ್ತು 23 ರನ್‌ಗಳಿಸಿದ್ದ ರೆಹಾನೆ ಅಜೇಯರಾಗಿ ಉಳಿದರು.
ಕರುಣ ರತ್ನೆ ಶತಕ ವಂಚಿತ
ಶ್ರೀಲಂಕಾದ ಆರಂಭಿಕ ಆಟಗಾರ ಕರುಣ ರತ್ನೆ 97 ರನ್‌ಗಳಿಗೆ ಔಟಾಗಿ ನಿರಾಶರಾದರು. ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪರೇಡ್ ಮಾಡುತ್ತಿದ್ದ ವೇಳೆ ನೆಲ ಕಚ್ಚಿ ಆಡುತ್ತಿದ್ದ ಅವರನ್ನು ಅಶ್ವಿನ್ ಕ್ಲೀನ್ ಬೌಲ್ಡ್ ಮಾಡಿದರು.
ಲಂಕಾ ಪರ ಮೆಂಡಿಸ್ 36 ,ತರಂಗ 10, ಡಿಕ್‌ವೆಲ್ಲಾ 67 ಗರಿಷ್ಠ ಸ್ಕೋರ್ ಆದರೆ ಪೆರೆರಾ 21 ರನ್‌ಗಳಿಸಿ ಅಜೇಯರಾಗಿ ಉಳಿದರು.
ಭಾರತದ ಪರ 2 ನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಮತ್ತು ಜಡೇಜಾ ತಲಾ 2 ವಿಕೆಟ್ ಪಡೆದರೆ, ಶಮಿ ಮತ್ತು ಉಮೇಶ್ ಯಾದವ್ ತಲಾ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನ್ನಿಂಗ್ಸ್ 600 ಆಲೌಟ್
ಶ್ರೀಲಂಕಾ ಮೊದಲ ಇನ್ನಿಂಗ್ಸ್ 291 ಆಲೌಟ್
ಭಾರತ ದ್ವಿತೀಯ ಇನ್ನಿಂಗ್ಸ್ 240/3 ಡಿಕ್ಲೇರ್
ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್ 245 ಆಲೌಟ್