Advertisement

ಭಾರತ ವನಿತೆಯರ ಅಸಾಮಾನ್ಯ ಪರಾಕ್ರಮ

09:29 PM Sep 22, 2022 | Team Udayavani |

ಕ್ಯಾಂಟರ್‌ಬರಿ: ಭಾರತೀಯ ವನಿತಾ ಕ್ರಿಕೆಟಿಗರಿಂದ ಅಸಾ ಮಾನ್ಯ ಸಾಹಸವೊಂದು ದಾಖ ಲಾಗಿದೆ. ದ್ವಿತೀಯ ಪಂದ್ಯವನ್ನು 88 ರನ್ನುಗಳಿಂದ ಗೆದ್ದು ಇಂಗ್ಲೆಂಡ್‌ ನೆಲದಲ್ಲಿ 1999ರ ಬಳಿಕ ಏಕದಿನ ಸರಣಿಯನ್ನು ವಶಪಡಿಸಿಕೊಂಡು ಸಂಭ್ರಮಿಸಿದೆ. ಇದರೊಂದಿಗೆ ಕೊನೆಯ ಏಕದಿನ ಸರಣಿ ಆಡುತ್ತಿರುವ ವೇಗಿ ಜೂಲನ್‌ ಗೋಸ್ವಾಮಿ ಅವರಿಗೆ ಒಂದು ಹಂತದ ಶುಭ ವಿದಾಯ ಲಭಿಸಿದಂತಾಯಿತು.

Advertisement

3 ಪಂದ್ಯಗಳ ಸರಣಿಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಪಡೆ 2-0 ಮುಂದಿದೆ. ಹೋವ್‌ನಲ್ಲಿ ನಡೆದ ಮೊದಲ ಪಂದ್ಯವನ್ನು 7 ವಿಕೆಟ್‌ಗಳಿಂದ ಜಯಿಸಿತ್ತು. ಸರಣಿಯ ಅಂತಿಮ ಪಂದ್ಯ ಶನಿವಾರ ಐತಿಹಾಸಿಕ ಲಾರ್ಡ್ಸ್‌ ಅಂಗಳದಲ್ಲಿ ನಡೆಯಲಿದೆ.

ಕೌರ್‌ 143, ಭಾರತ 333:

ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರ ಸ್ಫೋಟಕ ಶತಕದಿಂದ ಭಾರತ 5 ವಿಕೆಟಿಗೆ 333 ರನ್‌ ರಾಶಿ ಹಾಕಿತು. ಇದರಲ್ಲಿ ಕೌರ್‌ ಕೊಡುಗೆ ಅಜೇಯ 143 ರನ್‌ (111 ಎಸೆತ, 18 ಬೌಂಡರಿ, 4 ಸಿಕ್ಸರ್‌). ಹಲೀìನ್‌ ದೇವಲ್‌ ಮೊದಲ ಅರ್ಧ ಶತಕ (58), ಮಂಧನಾ 40 ರನ್‌ ಹೊಡೆದರು. ಕೌರ್‌-ದೀಪ್ತಿ ಶರ್ಮ (ಅಜೇಯ 15) ಕೇವಲ 24 ಎಸೆತಗಳಿಂದ 71 ರನ್‌ ಜತೆಯಾಟ ನಿಭಾಯಿಸಿದರು. ಜವಾಬಿತ್ತ ಇಂಗ್ಲೆಂಡ್‌ 44.2 ಓವರ್‌ಗಳಲ್ಲಿ 245ಕ್ಕೆ ಸರ್ವಪತನ ಕಂಡಿತು. ವೇಗಿ ರೇಣುಕಾ ಸಿಂಗ್‌ 4 ವಿಕೆಟ್‌ ಕಿತ್ತು ಆಂಗ್ಲರಿಗೆ ಆಘಾತವಿಕ್ಕಿದರು. ಡೇನಿಯಲ್‌ ವ್ಯಾಟ್‌ ಅವರದು ಸರ್ವಾಧಿಕ ಗಳಿಕೆ (65).

ಇದು ಏಕದಿನದಲ್ಲಿ ಭಾರತದ 2ನೇ ಅತ್ಯಧಿಕ ಸ್ಕೋರ್‌. 2017ರ ಐರ್ಲೆಂಡ್‌ ಎದುರಿನ ಪಂದ್ಯದಲ್ಲಿ 2ಕ್ಕೆ 358 ರನ್‌ ಬಾರಿಸಿದ್ದು ದಾಖಲೆ. ಹಾಗೆಯೇ ಇಂಗ್ಲೆಂಡ್‌ ಎದುರು ಭಾರತ ಮೊದಲ ಸಲ ಮುನ್ನೂರರ ಗಡಿ ದಾಟಿತು. ಡರ್ಬಿಯಲ್ಲಿ ನಡೆದ 2017ರ ವಿಶ್ವಕಪ್‌ ಪಂದ್ಯದಲ್ಲಿ 3ಕ್ಕೆ 281 ರನ್‌ ಹೊಡೆದದ್ದು ಹಿಂದಿನ ದಾಖಲೆ.

Advertisement

ಇದು ಇಂಗ್ಲೆಂಡ್‌ ವಿರುದ್ಧ ದಾಖಲಾದ 2ನೇ ಅತ್ಯಧಿಕ ಗಳಿಕೆ. ಇದೇ ವರ್ಷ ಆಸ್ಟ್ರೇಲಿಯ 5ಕ್ಕೆ 356 ರನ್‌ ಪೇರಿಸಿದ್ದು ದಾಖಲೆ.

ಇದು ಹರ್ಮನ್‌ಪ್ರೀತ್‌ ಅವರ 6ನೇ ಅಂತಾರಾಷ್ಟ್ರೀಯ ಶತಕ. ಏಕದಿನದಲ್ಲಿ 5ನೆಯದು. ಇಂಗ್ಲೆಂಡ್‌ ವಿರುದ್ಧ ಸರ್ವಾಧಿಕ ಗಳಿಕೆ. 2013ರ ಮುಂಬಯಿ ಪಂದ್ಯದಲ್ಲಿ ಅಜೇಯ 107 ರನ್‌ ಹೊಡೆದದ್ದು ಹಿಂದಿನ ಅತ್ಯುತ್ತಮ ಸಾಧನೆ. ಇಂಗ್ಲೆಂಡ್‌ ನೆಲದಲ್ಲಿ ಅತ್ಯಧಿಕ ವೈಯಕ್ತಿಕ ರನ್‌ ಬಾರಿಸಿದ ವಿದೇಶಿ ಆಟಗಾರ್ತಿ ಎಂಬ ಹಿರಿಮೆಯೂ ಕೌರ್‌ ಪಾಲಾಯಿತು. 1996ರಲ್ಲಿ ಆಸ್ಟ್ರೇಲಿಯದ ಡಾಬಿ ಹಾಕ್ಲಿ ಅಜೇಯ 117 ರನ್‌ ಹೊಡೆದ ದಾಖಲೆ ಪತನಗೊಂಡಿತು.

ಇಂದು ಕೌರ್‌, ಅಂದು ಕೌಲ್‌ :

ಭಾರತ 23 ವರ್ಷಗಳ ಹಿಂದೆ (1999) ಇಂಗ್ಲೆಂಡ್‌ ನೆಲದಲ್ಲಿ ಕೊನೆಯ ಸಲ ಸರಣಿ ಜಯಿಸಿತ್ತು. ಅಂತರ 2-1. ಅಂದಿನ ನಾಯಕಿ ಚಂದ್ರಕಾಂತಾ ಕೌಲ್‌.

ಮ್ಯಾಂಚೆಸ್ಟರ್‌ನಲ್ಲಿ ನಡೆದ ಪಂದ್ಯವನ್ನು ಭಾರತ ಒಂದು ವಿಕೆಟ್‌ ಅಂತರದಿಂದ ರೋಚಕವಾಗಿ ಗೆದ್ದು ಮುನ್ನಡೆ ಸಾಧಿಸಿತು. ಇಂಗ್ಲೆಂಡ್‌ 8ಕ್ಕೆ 128, ಭಾರತ 49.3 ಓವರ್‌ಗಳಲ್ಲಿ 9 ವಿಕೆಟಿಗೆ 132 ರನ್‌ ಮಾಡಿತು. ಅಂಜುಮ್‌ ಚೋಪ್ರಾ ಅವರ ಅರ್ಧ ಶತಕ (52) ಭಾರತದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ದ್ವಿತೀಯ ಪಂದ್ಯವನ್ನು 86 ರನ್ನುಗಳಿಂದ ಗೆಲ್ಲುವ ಮೂಲಕ ಭಾರತ ಸರಣಿ ವಶಪಡಿಸಿಕೊಂಡಿತು. ಅಂಜುಮ್‌ ಚೋಪ್ರಾ ಅವರ ಶತಕ (100), ಓಪನರ್‌ ಅಂಜು ಜೈನ್‌ ಅವರ ಅರ್ಧ ಶತಕದ ನೆರವಿನಿಂದ (54) ಭಾರತ 7ಕ್ಕೆ 213 ರನ್‌ ಗಳಿಸಿತು. ಇಂಗ್ಲೆಂಡ್‌ 43.5 ಓವರ್‌ಗಳಲ್ಲಿ 127ಕ್ಕೆ ಕುಸಿಯಿತು.

ಇಲ್ಲೇ ನಡೆದ 3ನೇ ಮುಖಾಮುಖೀಯನ್ನು ಇಂಗ್ಲೆಂಡ್‌ 3 ವಿಕೆಟ್‌ಗಳಿಂದ ಗೆದ್ದು ವೈಟ್‌ವಾಶ್‌ ಅವಮಾನದಿಂದ ಪಾರಾಯಿತು. ಭಾರತ 5ಕ್ಕೆ 220 ರನ್‌ ಮಾಡಿದರೆ, ಇಂಗ್ಲೆಂಡ್‌ ಅಂತಿಮ ಎಸೆತದಲ್ಲಿ ಗೆಲುವಿನ ರನ್‌ ಬಾರಿಸಿತು. ನಾಯಕಿ ಕರೆನ್‌ ಸ್ಮಿತ್ಸ್ ಅವರ ಅಜೇಯ 110 ರನ್‌ ಇಂಗ್ಲೆಂಡ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಸಂಕ್ಷಿಪ್ತ ಸ್ಕೋರ್‌ : ಭಾರತ-5 ವಿಕೆಟಿಗೆ 333 (ಹರ್ಮನ್‌ಪ್ರೀತ್‌ ಕೌರ್‌ ಅಜೇಯ 143, ಹಲೀìನ್‌ ದೇವಲ್‌ 58, ಸ್ಮತಿ ಮಂಧನಾ 40, ಚಾರ್ಲೋ ಟ್‌ ಡೀನ್‌ 39ಕ್ಕೆ 1). ಇಂಗ್ಲೆಂಡ್‌ 44.2 ಓವರ್‌ಗಳಲ್ಲಿ 245 (ಡೇನಿಯಲ್‌ ವ್ಯಾಟ್‌ 65, ಅಲೈಸ್‌ ಕ್ಯಾಪ್ಸಿ 39, ಆ್ಯಮಿ ಜೋನ್ಸ್‌ 39, ಚಾರ್ಲೋಟ್‌ ಡೀನ್‌ 37, ರೇಣುಕಾ ಸಿಂಗ್‌ 57ಕ್ಕೆ 4, ಡಿ. ಹೇಮಲತಾ 6ಕ್ಕೆ 2). ಪಂದ್ಯಶ್ರೇಷ್ಠ: ಹರ್ಮನ್‌ಪ್ರೀತ್‌.

Advertisement

Udayavani is now on Telegram. Click here to join our channel and stay updated with the latest news.

Next