ಹೊಸದಿಲ್ಲಿ: ಮುಂಬರುವ ಆಸ್ಟ್ರೇಲಿಯ ಪ್ರವಾಸಕ್ಕಾಗಿ ಭಾರತದ ವನಿತಾ ತಂಡಗಳನ್ನು ಪ್ರಕಟಿಸಲಾಗಿದೆ. ಐತಿಹಾಸಿಕ ಡೇ-ನೈಟ್ ಟೆಸ್ಟ್ ಮತ್ತು ಏಕದಿನ ಸರಣಿಗೆ ಮಿಥಾಲಿ ರಾಜ್, ಟಿ20ಗೆ ಹರ್ಮನ್ಪ್ರೀತ್ ಕೌರ್ ನಾಯಕಿಯಾಗಿದ್ದಾರೆ.
ಈ ಪ್ರವಾಸದ ವೇಳೆ ಭಾರತದ ವನಿತೆಯರು ಮೊದಲ ಬಾರಿಗೆ ಹಗಲು-ರಾತ್ರಿ ಟೆಸ್ಟ್ ಆಡಲಿರುವುದು ವಿಶೇಷ. ಉಳಿದಂತೆ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ಏರ್ಪಡಲಿದೆ.
ಕರ್ನಾಟಕದ ರಾಜೇಶ್ವರಿ ಗಾಯಕ್ವಾಡ್ ತಂಡಕ್ಕೆ ಮರಳಿದ್ದಾರೆ. ಪ್ರಿಯಾ ಪುನಿಯ, ಇಂದ್ರಾಣಿ ರಾಯ್ ಅವರನ್ನು ಕೈಬಿಡಲಾಗಿದೆ. ರೇಣುಕಾ ಸಿಂಗ್ ಠಾಕೂರ್ ಮತ್ತು ಯಾಸ್ತಿಕಾ ಭಾಟಿಯಾ ಹೊಸ ಮುಖಗಳು. ರಿಚಾ ಘೋಷ್ ಟಿ20 ಕೀಪರ್ ಆಗಿದ್ದಾರೆ.
ಟೆಸ್ಟ್, ಏಕದಿನ ತಂಡ: ಮಿಥಾಲಿ ರಾಜ್ (ನಾಯಕಿ), ಹರ್ಮನ್ಪ್ರೀತ್ ಕೌರ್, ಸ್ಮೃತಿ ಮಂಧನಾ, ಶಫಾಲಿ ವರ್ಮ, ಪೂನಂ ರಾವತ್, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮ, ಸ್ನೇಹ್ ರಾಣಾ, ಯಾಸ್ತಿಕಾ ಭಾಟಿಯಾ, ತನಿಯಾ ಭಾಟಿಯಾ, ಶಿಖಾ ಪಾಂಡೆ, ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್, ರಿಚಾ ಘೋಷ್, ಏಕ್ತಾ ಬಿಷ್ಟ್.
ಟಿ20 ತಂಡ: ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನಾ, ಶಫಾಲಿ ವರ್ಮ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮ, ಸ್ನೇಹ್ ರಾಣಾ, ಯಾಸ್ತಿಕಾ ಭಾಟಿಯಾ, ಶಿಖಾ ಪಾಂಡೆ, ಮೇಘನಾ ಸಿಂಗ್, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್, ರಿಚಾ ಘೋಷ್, ಹಲೀìನ್ ದೇವಲ್, ಅರುಂಧತಿ ರೆಡ್ಡಿ, ರಾಧಾ ಯಾದವ್, ರೇಣುಕಾ ಸಿಂಗ್ ಠಾಕೂರ್.