ದ್ವಿತೀಯ ದಿನ ಬೌಲರ್‌ಗಳೇ ಮೇಲುಗೈ ಸಾಧಿಸಿದರು.
Advertisement
ಇದರಿಂದಾಗಿ ಮೊದಲ ದಿನ ಉತ್ತಮ ಸ್ಥಿತಿಯಲ್ಲಿದ್ದ ವೆಸ್ಟ್‌ಇಂಡೀಸ್ 318 ರನ್ನಿಗೆ ಆಲೌಟಾಯಿತು. ಇದಕ್ಕುತ್ತ ರವಾಗಿ ಆರಂಭದಲ್ಲಿಯೇ ಭಾರೀ ಕುಸಿತಕ್ಕೆ ಒಳಗಾದ ಭಾರತ 190 ರನ್ನಿಗೆ ಸರ್ವಪತನ ಕಂಡಿತು. ಈ ಮೂಲಕ ವೆಸ್ಟ್ ಇಂಡೀಸ್ 128 ರನ್ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸುವಂತಾಯಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ವೆಸ್ಟ್‌ಇಂಡೀಸ್ ಮತ್ತೆ ಕುಸಿದಿದ್ದು ದಿನದಾಟದ ಅಂತ್ಯಕ್ಕೆ 12 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದೆ. ಅಂದರೆ ಸದ್ಯ ವೆಸ್ಟ್‌ಇಂಡೀಸ್ 116 ರನ್ ಮುನ್ನಡೆಯಲ್ಲಿದೆ.ಮೊದಲ ದಿನ ವೆಸ್ಟ್‌ಇಂಡೀಸ್ “ಎ’ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 5 ವಿಕೆಟಿಗೆ 243 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು.
ಆಬಳಿಕ ಇನ್ನಿಂಗ್ಸ್ ಆರಂಭಿಸಿದ ಭಾರತ “ಎ’ ತಂಡದ ಸ್ಥಿತಿ ಶೋಚನೀಯವಾಗಿತ್ತು. 20 ರನ್ ಗಳಿಸುವಷ್ಟರಲ್ಲಿ ತಂಡ 5 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು.