Advertisement

ಭಾರತಕ್ಕೆ ಜಯದ ಬೆಳಕು

06:00 AM Nov 05, 2018 | Team Udayavani |

ಕೋಲ್ಕತಾ: ಭಾನುವಾರ ಆರಂಭವಾದ ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಿಣುಕಾಡಿ ಗೆದ್ದಿದೆ. ಗೆಲ್ಲಲು 110 ರನ್‌ಗಳ ಸುಲಭ ಗುರಿ ಪಡೆದರೂ ಅದನ್ನು ಬೆನ್ನತ್ತಲು 5 ವಿಕೆಟ್‌ ಕಳೆದುಕೊಂಡಿತು. ಸ್ವಲ್ಪ ಹೆಚ್ಚುಕಡಿಮೆಯಾಗಿದ್ದರೂ ಮೊದಲ ಪಂದ್ಯದಲ್ಲಿ ಗೆಲ್ಲುವುದು ಅನುಮಾನವೇ ಆಗಿತ್ತು!

Advertisement

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ವೆಸ್ಟ್‌ ಇಂಡೀಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 109 ರನ್‌ ಗಳಿಸಿತು. ಇದನ್ನು ಬೆನ್ನತ್ತಿದ ಭಾರತ 17.5 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 110 ರನ್‌ ಗಳಿಸಿತು.

ಒದ್ದಾಡಿದ ಭಾರತ: ಗೆಲುವಿಗೆ ಕೇವಲ 110 ರನ್‌ ಗಳಿಸಬೇಕಾದ ಅಗತ್ಯ ಹೊಂದಿದ್ದ ಭಾರತ ಅದನ್ನು ಗಳಿಸಲು ಪರದಾಡಿತು. 45 ರನ್‌ಗಳಾಗುವಾಗ 4 ವಿಕೆಟ್‌ ಕಳೆದುಕೊಂಡಿತ್ತು. ನಾಯಕ ರೋಹಿತ್‌, ಧವನ್‌, ರಾಹುಲ್‌, ರಿಷಭ್‌ ಅಲ್ಪಮೊತ್ತಕ್ಕೆ ಹೊರ ನಡೆದರು. ಅನಂತರ ಜೊತೆಗೂಡಿದ ಮನೀಶ್‌ ಪಾಂಡೆ, ದಿನೇಶ್‌ ಕಾರ್ತಿಕ್‌ 38 ರನ್‌ ಜೊತೆಯಾಟವಾಡಿದರು. ಮನೀಶ್‌ ನಂತರ ಬ್ಯಾಟ್‌ ಹಿಡಿದು ಬಂದ ಕೃಣಾಲ್‌ ಪಾಂಡ್ಯ ಪದಾರ್ಪಣೆ ಪಂದ್ಯದಲ್ಲೇ ಮಿಂಚಿ 21 ರನ್‌ ಗಳಿಸಿದರು. ಕಾರ್ತಿಕ್‌ ಅಜೇಯ 31 ರನ್‌ ಗಳಿಸಿ ತಂಡದ ಸೋಲನ್ನು ತಪ್ಪಿಸಿದರು.

ವಿಂಡೀಸ್‌ ಕುಸಿತ: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಭಾರತ ಅದಕ್ಕೆ ಸರಿಯಾದ ಫ‌ಲ ಪಡೆಯಿತು. ವಿಂಡೀಸ್‌ನ ಯಾವುದೇ ಬ್ಯಾಟ್ಸ್‌ಮನ್‌ಗಳು ಭಾರತದ ದಾಳಿಗೆ ಸೆಡ್ಡು ಹೊಡೆದು ನಿಲ್ಲದ ಪರಿಣಾಮ ಆ ತಂಡ ಕುಸಿತ ಅನುಭವಿಸಿತು. ವಿಂಡೀಸ್‌ ತಂಡದ ಭರವಸೆಯ ಆಟಗಾರರಾದ ಶೈ ಹೋಪ್‌, ಶಿಮ್ರನ್‌ ಹೆಟ್‌ಮೈರ್‌, ಕೈರನ್‌ ಪೊಲಾರ್ಡ್‌, ಕಾರ್ಲೋಸ್‌ ಬ್ರಾತ್‌ವೇಟ್‌ ಸಂಪೂರ್ಣ ವಿಫ‌ಲರಾದರು. ವಿಂಡೀಸ್‌ ಪರ ಸ್ವಲ್ಪವಾದರೂ ಉತ್ತಮವಾಗಿ ಆಡಿದ್ದು ಫ್ಯಾಬಿಯನ್‌ ಅಲೆನ್‌ ಮಾತ್ರ. ಅವರು 20 ಎಸೆತಗಳಲ್ಲಿ 4 ಬೌಂಡರಿ ಸಹಿತ 27 ರನ್‌ಗಳಿಸಿದರು. ಕಡೆಯಲ್ಲಿ ಕೀಮೊ ಪೌಲ್‌ 15 ರನ್‌ ಗಳಿಸಿ ರನ್‌ ಗತಿ ಏರಿಸಲು ಯತ್ನಿಸಿದರೂ ಅದಕ್ಕೆ ಭಾರತೀಯ ಬೌಲರ್‌ಗಳು ಅವಕಾಶ ನೀಡಲಿಲ್ಲ. ಭಾರತದ ಪರ ಕುಲದೀಪ್‌ ಯಾದವ್‌ 13 ರನ್‌ ನೀಡಿ 3 ವಿಕೆಟ್‌ ಪಡೆದು ಮಿಂಚಿದರು.

ಕೃಣಾಲ್‌, ಖಲೀಲ್‌ ಪಾದಾರ್ಪಣೆ
ಭಾರತದ ಖ್ಯಾತ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಸಹೋದರ ಕೃಣಾಲ್‌ ಪಾಂಡ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಭಾನುವಾರ ಅವರು ಟಿ20 ಮೂಲಕ ಅಂತಾರಾಷ್ಟ್ರೀಯ ಜೀವನ ಪ್ರವೇಶಿಸಿದರು. ಇನ್ನು ವೇಗಿ ಖಲೀಲ್‌ ಅಹ್ಮದ್‌ಗೂ ಇದು ಮೊದಲ ಟಿ20 ಪಂದ್ಯ. ಆದರೆ ಅವರು ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಈಗಾಗಲೇ ಆಡಿದ್ದಾರೆ.

Advertisement

ವಿಂಡೀಸ್‌ 20 ಓವರ್‌, 109/8
ಶೈ ಹೋಪ್‌ ರನೌಟ್‌    14
ದಿನೇಶ್‌ ರಾಮಿªನ್‌ ಸಿ ಕಾರ್ತಿಕ್‌ ಬಿ ಉಮೇಶ್‌    02
ಶಿಮ್ರನ್‌ ಹೆಟ್‌ಮೈರ್‌ ಸಿ ಕಾರ್ತಿಕ್‌ ಬಿ ಬುಮ್ರಾ    10
ಕೈರನ್‌ ಪೊಲಾರ್ಡ್‌ ಸಿ ಪಾಂಡೆ ಬಿ ಪಾಂಡ್ಯ    14
ಡ್ಯಾರೆನ್‌ ಬ್ರಾವೊ ಸಿ ಧವನ್‌ ಬಿ ಕುಲದೀಪ್‌    05
ರೋವ¾ನ್‌ ಪೊವೆಲ್‌ ಸಿ ಕಾರ್ತಿಕ್‌ ಬಿ ಕುಲದೀಪ್‌    04
ಕಾರ್ಲೋಸ್‌ ಬ್ರಾತ್‌ವೇಟ್‌ ಎಲ್ಬಿ ಕುಲದೀಪ್‌    04
ಫ್ಯಾಬಿಯನ್‌ ಅಲೆನ್‌ ಸಿ ಉಮೇಸ್‌ ಬಿ ಖಲೀಲ್‌    27
ಕೀಮೊ ಪೌಲ್‌ ಅಜೇಯ    15
ಖಾರಿ ಪಿಯರ್‌    ಅಜೇಯ    09
ಇತರೆ    5
ವಿಕೆಟ್‌ ಪತನ: 1-16, 2-22, 3-28, 4-47, 5-49, 6-56, 7-63, 8-87.
ಬೌಲಿಂಗ್‌
ಉಮೇಶ್‌ ಯಾದವ್‌    4    0    36    1
ಖಲೀಲ್‌ ಅಹ್ಮದ್‌    4    1    16    1
ಜಸಿøàತ್‌ ಬುಮ್ರಾ    4    0    27    1
ಕೃಣಾಲ್‌ ಪಾಂಡ್ಯ    4    0    15    1
ಕುಲದೀಪ್‌ ಯಾದವ್‌    4    0    13    3

ಭಾರತ 17.5 ಓವರ್‌, 110/5
ರೋಹಿತ್‌ ಶರ್ಮ ಸಿ ರಾಮಿªನ್‌ ಬಿ ಥಾಮಸ್‌    6
ಶಿಖರ್‌ ಧವನ್‌ ಬಿ ಥಾಮಸ್‌    3
ಕೆ.ಎಲ್‌.ರಾಹುಲ್‌ ಸಿ ಬ್ರಾವೊ    16
ರಿಷಭ್‌ ಪಂತ್‌ ಸಿ ಬ್ರಾವೊ ಬಿ ಬ್ರಾತ್‌ವೇಟ್‌    01
ಮನೀಶ್‌ ಪಾಂಡೆ ಸಿ ಮತ್ತು ಬಿ ಪಿಯರ್‌    19
ದಿನೇಶ್‌ ಕಾರ್ತಿಕ್‌ ಅಜೇಯ    31
ಕೃಣಾಲ್‌ ಪಾಂಡ್ಯ ಅಜೇಯ    21
ಇತರೆ    13
ವಿಕೆಟ್‌ ಪತನ: 1-7, 2-16, 3-35, 4-45, 5-83
ಬೌಲಿಂಗ್‌
ಒಶಾನೆ ಥಾಮಸ್‌    4    0    21    2
ಕೀಮೊ ಪೌಲ್‌    3.5    0    30    0
ಬ್ರಾತ್‌ವೇಟ್‌    4    1    11    2
ಖಾರಿ ಪಿಯರ್‌    4    0    16    1
ಕೈರನ್‌ ಪೊಲಾರ್ಡ್‌    1    0    12    0
ಫ್ಯಾಬಿಯನ್‌ ಅಲೆನ್‌    1    0    11    0

Advertisement

Udayavani is now on Telegram. Click here to join our channel and stay updated with the latest news.

Next