Advertisement

ಗಡಿ ನಿಯಂತ್ರಣ ರೇಖೆ ಬದಲಾವಣೆಯನ್ನು ನಾವು ಒಪ್ಪುವುದಿಲ್ಲ: ಚೀನಾಗೆ ಭಾರತೀಯ ಸೇನೆ ಎಚ್ಚರಿಕೆ

02:54 PM Nov 06, 2020 | sudhir |

ನವದೆಹಲಿ : ಪೂರ್ವ ಲಡಾಕ್‍ನ ಇಂಡೋ-ಚೀನಾ ಗಡಿ ಭಾಗದ ವಾಸ್ತವ ನಿಯಂತರಣ ರೇಖೆ (ಎಲ್‍ಎಸಿ)ಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದ್ದು ಮುಂದಿನ ದಿನಗಳಲ್ಲಿ ಚೀನಾದೊಂದಿಗಿನ ಯುದ್ಧದ ಸಾಧ್ಯತೆಯನ್ನು ಕೂಡಾ ತಳ್ಳಿಹಾಕುವಂತಿಲ್ಲ , ಯಾವುದೇ ಕಾರಣಕ್ಕೂ ನಾವು ವಾಸ್ತವ ಗಡಿ ನಿಯಂತ್ರಣ ರೇಖೆ ಬದಲಾವಣೆಯನ್ನು ಒಪ್ಪುವುದಿಲ್ಲ ಎಂದು ಭಾರತೀಯ ರಕ್ಷಣಾ ಪಡೆ ಮುಖ್ಯಸ್ಥ ಜ.ಬಿಪಿನ್ ರಾವತ್ ಹೇಳಿದ್ದಾರೆ.

Advertisement

ಭಾರತೀಯ ಸೇನಾಪಡೆ ಪೂರ್ವ ಲಡಾಕ್ ನ ಗಡಿ ರೇಖೆ ಬಳಿ ಚೀನಾಕ್ಕೆ ನೀಡಿರುವ ದೃಢ ಮತ್ತು ಬಲವಾದ ಪ್ರತಿಕ್ರೀಯೆಗಳಿಂದಾಗಿ ಅನಿರೀಕ್ಷಿತ ಪರಿಣಾಮಗಳನ್ನು ಎದುರಿಸುವಂತಾಗಿದೆ ಎಂದು ರಕ್ಷಣಾ ಪಡೆಯ ಮುಖ್ಯಸ್ಥರು ಹೇಳಿದ್ದಾರೆ.

ಭದ್ರತಾ ಲೆಕ್ಕಾಚಾರದಲ್ಲಿ ಗಡಿಯಲ್ಲಿ ಸಂಘರ್ಷಗಳು , ಉಲ್ಲಂಘನೆ, ಅಪ್ರಚೋದಿತ ಯುದ್ಧತಂತ್ರದ ಮಿಲಿಟರಿ ಈ ಎಲ್ಲಾ ಕ್ರಮಗಳು ಸಂಘರ್ಷಕ್ಕೆ ತಿರುಗುವುದರಿಂದ ಯಾವುದೇ ರಿಯಾಯಿತಿಯನ್ನು ನೀಡಲಾಗುವುದಿಲ್ಲ “ನಮ್ಮ ನಿಲುವು ಸ್ಪಷ್ಟವಾಗಿದ್ದು ಅಲ್ಲದೆ ವಾಸ್ತವಿಕ ನಿಯಂತ್ರಣ ರೇಖೆಯ ಯಾವುದೇ ಬದಲಾವಣೆಯನ್ನು ನಾವು ಸ್ವೀಕರಿಸುವುದಿಲ್ಲ” ಎಂದು ರಾವತ್ ಹೇಳಿದರು.

ಇದನ್ನೂ ಓದಿ:ಆನ್ ಲೈನ್ ಶಿಕ್ಷಣದ ಬಗ್ಗೆ ದೂರುಗಳಿದ್ದರೆ ಸಹಾಯವಾಣಿಗೆ ತಿಳಿಸಬಹುದು: ಸುರೇಶ್ ಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next