Advertisement

27 ವರ್ಷಗಳ ಬಳಿಕ “Miss World”ಗೆ ಭಾರತ ಆತಿಥ್ಯ

09:33 PM Jun 08, 2023 | Team Udayavani |

ನವದೆಹಲಿ: ಬರೋಬ್ಬರಿ 27 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ ಆತಿಥ್ಯ ವಹಿಸುವ ಅವಕಾಶ ಭಾರತಕ್ಕೆ ದೊರೆತಿದೆ. ಪ್ರಸಕ್ತ ವರ್ಷದ ಮಿಸ್‌ ವರ್ಲ್ಡ್‌ ಸ್ಪರ್ಧೆ ಭಾರತದಲ್ಲೇ ನಡೆಯಲಿದೆ.

Advertisement

ಭಾರತವು ಈ ಹಿಂದೆ ಅಂತಾರಾಷ್ಟ್ರೀಯ ಸ್ಪರ್ಧೆಯ ಆತಿಥ್ಯ ವಹಿಸಿದ್ದು 1996ರಲ್ಲಿ. ಅದಾದ ಬಳಿಕ ಇದೇ ಮೊದಲ ಬಾರಿಗೆ ದೇಶದಲ್ಲಿ ಮಿಸ್‌ ವರ್ಲ್ಡ್‌ ಆಯೋಜನೆಯಾಗಲಿದೆ. 71ನೇ ಆವೃತ್ತಿಯ ಸೌಂದರ್ಯ ಸ್ಪರ್ಧೆಯು ನವೆಂಬರ್‌ ತಿಂಗಳಲ್ಲಿ ನಡೆಯಲಿದ್ದು, ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಗುರುವಾರ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಚಾರ ತಿಳಿಸಿದ ಮಿಸ್‌ ವವರ್ಲ್ಡ್‌ ಸಂಸ್ಥೆಯ ಸಿಇಒ ಜೂಲಿಯಾ ಮೋರ್ಲೆ, “71ನೇ ಮಿಸ್‌ ವರ್ಲ್ಡ್‌ ಫೈನಲ್‌ ಭಾರತದಲ್ಲಿ ನಡೆಯಲಿದೆ ಎಂದು ಹೇಳಲು ನಾವು ಸಂತೋಷ ಪಡುತ್ತೇನೆ. ಒಂದು ತಿಂಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು, ಸುಮಾರು 130 ದೇಶಗಳ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಪ್ರತಿಭಾ ಪ್ರದರ್ಶನ, ಕ್ರೀಡಾ ಸವಾಲುಗಳು, ದತ್ತಿ ಕಾರ್ಯಕ್ರಮಗಳಲ್ಲೂ ಇವರು ಭಾಗಿಯಾಗಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next