Advertisement

ಕಾಂಗರೂ ನಾಡಿಗೆ ಹೊರಟ ಕೊಹ್ಲಿ ಪಡೆ

06:55 AM Nov 16, 2018 | Team Udayavani |

ಮುಂಬೈ: ಭಾರತ ಕ್ರಿಕೆಟ್‌ ತಂಡ ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಆಸ್ಟ್ರೇಲಿಯ ಪ್ರವಾಸಕ್ಕೆ ಹೊರಟಿದೆ.ಆಸ್ಟ್ರೇಲಿಯದಲ್ಲಿ ಆಸ್ಟ್ರೇಲಿಯವನ್ನು ಎದುರಿಸುವುದು ವಿಶ್ವದ ಯಾವುದೇ ತಂಡಕ್ಕೂ ಸವಾಲಾದರೂ, ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಇಬ್ಬರು ದಿಗ್ಗಜರಾದ ಸ್ಟೀವ್‌ಸ್ಮಿತ್‌, ಡೇವಿಡ್‌ ವಾರ್ನರ್‌ ನಿಷೇಧದಲ್ಲಿರುವುದರಿಂದ ಆಸೀಸ್‌ ತೀರಾ ಕಳಪೆ ಫಾಮ್‌ ನಲ್ಲಿದೆ. ಭಾರತ ಗೆಲ್ಲುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ.

Advertisement

ಆಸ್ಟ್ರೇಲಿಯದಲ್ಲಿ ಭಾರತ ನ.21ರಂದು ಟಿ20 ಪಂದ್ಯವಾಡುವ ಮೂಲಕ ದ್ವಿಪಕ್ಷೀಯ ಕ್ರಿಕೆಟ್‌ ಆರಂಭವಾಗಲಿದೆ. ಅಲ್ಲಿ ಒಟ್ಟು 3 ಟಿ20, 4 ಟೆಸ್ಟ್‌, 3 ಏಕದಿನ ಪಂದ್ಯಗಳನ್ನಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next