Advertisement
ಕತ್ತೆ ಹೈನುಗಾರಿಕೆ ಏಕೆ?ಕತ್ತೆ ಹಾಲಿನಲ್ಲಿ ಮನುಷ್ಯರಿಗೆ ಅನೇಕ ಉಪಯುಕ್ತ ಪೋಷಕಾಂಶಗಳನ್ನು ಒಳಗೊಂಡಿದೆ. ಜೊತೆಗೆ ಅದರ ಉಪಯೋಗದಿಂದ ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿ ಅಗಾಧವಾಗಿ ಹೆಚ್ಚಾಗುವುದು ಪ್ರಯೋಗಗಳಿಂದ ದೃಢಪಟ್ಟಿದೆ. ಹಾಗಾಗಿ, ಕತ್ತೆ ಹಾಲಿನ ಹೈನುಗಾರಿಕೆಗೆ ಹೊಸ ಒತ್ತು ನೀಡಲು ನಿರ್ಧರಿಸಲಾಗಿದೆ.
ಸದ್ಯಕ್ಕೆ ಮಾರುಕಟ್ಟೆಯಲ್ಲಿ ಒಂದು ಲೀಟರ್ ಕತ್ತೆ ಹಾಲಿಗೆ 2,000 ರೂ.ಗಳಿಂದ 7,000 ರೂ.ವರೆಗೆ ಬೆಲೆ ಇದೆ. ಕತ್ತೆ ಹಾಲಿನ ಹೈನುಗಾರಿಕೆ ದೇಶದ ತುಂಬೆಲ್ಲಾ ವ್ಯಾಪಿಸಿ ಅಗಾಧವಾಗಿ ಹಾಲು ಉತ್ಪಾದನೆಯಾದರೆ ಬೆಲೆ ಕಡಿಮೆಯಾಗುವ ನಿರೀಕ್ಷೆಯಿದೆ. ಹಲಾರಿ ತಳಿಯ ಮಹತ್ವವೇನು?
ಗುಜರಾತ್‌ನಲ್ಲಿ ಕಾಣಬರುವ ಈ ತಳಿಯ ಕತ್ತೆಗಳ ಹಾಲು ಔಷಧೀಯ ಅಂಶಗಳ ನಿಧಿ ಎಂದೇ ಕರೆಯಲಾಗುತ್ತದೆ. ಇದರ ಹಾಲಿನಲ್ಲಿ ಕ್ಯಾನ್ಸರ್, ಬೊಜ್ಜುತನ, ಸೋಂಕುಗಳ ವಿರುದ್ಧ ಹೋರಾಡುವ ಅಂಶಗಳಿವೆ. ಅವುಗಳ ಹಾಲನ್ನು ಮಕ್ಕಳಿಗೆ ನೀಡಿದರೆ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಒಮ್ಮೊಮ್ಮೆ ಕೆಲವು ಮಕ್ಕಳಿಗೆ ಹಸುವಿನ ಹಾಲು ಅಲರ್ಜಿಯಾದರೂ ಹಲಾರಿ ಕತ್ತೆಗಳ ಹಾಲು ಎಂದೂ ಅಲರ್ಜಿಯಾಗದು. ಈ ಹಾಲಿನಲ್ಲಿ ಆ್ಯಂಟಿ ಆಕ್ಸಿಡಂಟ್ಸ್ ಹಾಗೂ ಆ್ಯಂಟಿ ಏಜಿಂಗ್ ಅಂಶ ಅಲ್ಪ ಪ್ರಮಾಣದಲ್ಲಿರುತ್ತವೆ. ಹಾಗಾಗಿ, ಇದು ಸೋಪು, ಲಿಪ್ ಬಾಮ್, ಬಾಡಿ ಲೋಷನ್, ಕಾಸ್ಮೆಟಿಕ್ಸ್‌ಗಳ ತಯಾರಿಕೆಯಲ್ಲಿಯೂ ಬಳಕೆಯಾಗುತ್ತದೆ.