Advertisement

ಕೊಹ್ಲಿಗೆ ರೆಸ್ಟ್‌? ಕಾರ್ತಿಕ್‌ ಬದಲು ಪಂತ್‌?

06:00 AM Oct 11, 2018 | |

ಹೈದರಾಬಾದ್‌: ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯಲಿರುವ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಗಾಗಿ ಗುರುವಾರ ಸಂಜೆ ಭಾರತ ತಂಡ ಪ್ರಕಟಗೊಳ್ಳಲಿದ್ದು, ಆಯ್ಕೆ ಸಮಿತಿಯ ಮುಂದೆ ಅನೇಕ ಸವಾಲುಗಳಿವೆ. ಭಾರತ-ವೆಸ್ಟ್‌ ಇಂಡೀಸ್‌ ನಡುವೆ 5 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಾಗುವುದು. ಎಲ್ಲ 5 ಏಕದಿನ ಪಂದ್ಯಗಳಿಗೆ ಒಮ್ಮೆಲೇ ತಂಡ ಗಳನ್ನು ಪ್ರಕಟಿಸಲಾಗುವುದೋ ಅಥವಾ ಮೊದಲು 3 ಪಂದ್ಯಗಳಿಗಷ್ಟೇ ಆರಿಸಲಾಗು ವುದೋ ಎಂಬುದು ಖಚಿತಗೊಂಡಿಲ್ಲ. ಅ. 21ರಿಂದ ಏಕದಿನ ಸರಣಿ ಆರಂಭವಾಗಲಿದೆ.

Advertisement

ಕೊಹ್ಲಿ ಆಡದಿದ್ದರೆ ರೋಹಿತ್‌ ನಾಯಕ
ಕಳೆದ ಏಶ್ಯ ಕಪ್‌ ವೇಳೆ ವಿಶ್ರಾಂತಿ ಯಲ್ಲಿದ್ದ ನಾಯಕ ವಿರಾಟ್‌ ಕೊಹ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಏಕದಿನ ಸರಣಿ ಆಡುವರೇ ಅಥವಾ ಬಿಡುವಿಲ್ಲದಷ್ಟು ಕ್ರಿಕೆಟ್‌ನಿಂದಾಗಿ ಅವರಿಗೆ ಹೆಚ್ಚಿನ ವಿಶ್ರಾಂತಿ ನೀಡ ಲಾಗುವುದೇ ಎಂಬುದು ಆಯ್ಕೆ ವೇಳೆ ಪ್ರಮುಖ ವಾಗಿ ಚರ್ಚೆಗೆ ಬರಲಿದೆ. ಅಕಸ್ಮಾತ್‌ ಕೊಹ್ಲಿ ಹೊರಗುಳಿದರೆ ರೋಹಿತ್‌ ಶರ್ಮ ನಾಯಕರಾಗಿ ಆಯ್ಕೆಯಾಗಲಿದ್ದಾರೆ. ವಿರಾಟ್‌ ಕೊಹ್ಲಿ ಮರಳಿದರೂ ಅಂಬಾಟಿ ರಾಯುಡು ಸ್ಥಾನ ಉಳಿಸಿಕೊಳ್ಳುವ ಬಗ್ಗೆ ಅನುಮಾನ ವಿಲ್ಲ. ಆಗ ಮನೀಷ್‌ ಪಾಂಡೆ ಸ್ಥಾನಕ್ಕೆ ಕುತ್ತು ಬರಬಹುದು. ಇಂಗ್ಲೆಂಡ್‌ ವಿರುದ್ಧ ಕೇವಲ ಒಂದೇ ಪಂದ್ಯವಾಡಿ ಕ್ಲಿಕ್‌ ಆಗಿದ್ದ ಕೆ.ಎಲ್‌. ರಾಹುಲ್‌ ಅವಕಾಶದ ಕೊರತೆ ಎದುರಿಸುತ್ತಿದ್ದಾರೆ.

ಧೋನಿ; ಕಳಪೆ ಬ್ಯಾಟಿಂಗ್‌ ಫಾರ್ಮ್
ಮಹೇಂದ್ರ ಸಿಂಗ್‌ ಧೋನಿ ಅವರ ಬ್ಯಾಟಿಂಗ್‌ ಫಾರ್ಮ್ ಕೂಡ ಚಿಂತೆಯ ಸಂಗತಿಯಾಗಿದೆ.  ಹೆಚ್ಚುವರಿ ಕೀಪರ್‌ ದಿನೇಶ್‌ ಕಾರ್ತಿಕ್‌ ಬದಲು  ರಿಷಬ್‌ ಪಂತ್‌ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. 

Advertisement

Udayavani is now on Telegram. Click here to join our channel and stay updated with the latest news.

Next