Advertisement

ವಾಷಿಂಗ್‌ ಮಷಿನ್‌ನಲ್ಲಿ  ಈಗ ಹೊಸ ಕರ್ರಿ ಬಟನ್‌!

03:45 AM Mar 11, 2017 | |

ನವದೆಹಲಿ: ಜನಪ್ರಿಯ ಎಲೆಕ್ಟ್ರಾನಿಕ್‌ ಕಂಪನಿ ಪೆನಾಸಾನಿಕ್‌ ಈಗ ತಂತ್ರಜ್ಞಾನದ ವಿಶೇಷ ಆಯ್ಕೆಯೊಂದನ್ನು ಹೊಂದಿರುವ ವಾಷಿಂಗ್‌ ಮಷಿನ್‌ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ವಿಶೇಷ ಆಯ್ಕೆಗೆ ಕರ್ರಿ ಎಂದು ಹೆಸರಿಟ್ಟಿದ್ದು, ಆಹಾರ ಪದಾರ್ಥಗಳ ಕಲೆಯನ್ನು ಹೋಗಲಾಡಿಸುತ್ತದೆ ಎಂದು ಹೇಳಿಕೊಂಡಿದೆ. 

Advertisement

ಬಟ್ಟೆಗಳನ್ನು ಸ್ವತ್ಛಗೊಳಿಸುವ ಬೇರೆ ಬೇರೆ ಸ್ಪರ್ಧಾತ್ಮಕ ಹಂತಗಳನ್ನು ಪರಿಚಯಿಸಿರುವ ಪ್ರತಿಷ್ಠಿತ ಕಂಪನಿ, ಗ್ರಾಹಕರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಕರ್ರಿ ಬಟನ್‌ ನೀಡುವ ಮೂಲಕ ಎಂತಹುದೇ ಕಲೆಗಳನ್ನು ಹೋಗಲಾಡಿಸುವಂಥ ವ್ಯವಸ್ಥೆಯನ್ನು ಅಳವಡಿಸಿ ಪರಿಚಯಿಸಿದೆ. ನೀರಿನ ಉಷ್ಣತೆಯ ಪ್ರಮಾಣ ಮತ್ತು ನೀರು ಪೂರೈಕೆಯ ಪ್ರಮಾಣದಲ್ಲಿಯೂ ಬೇರೆ ಆಗಿರುವಂತೆ ಅಭಿವೃದ್ಧಿ ಪಡಿಸಿ ಪರಿಚಯಿಸಿದೆ. ಭಾರತೀಯ ಗ್ರಾಹಕರನ್ನೇ ಗುರಿಯಾಗಿಸಿಕೊಂಡು ಈ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡು ವರ್ಷಗಳ ನಿರಂತರ ಅಧ್ಯಯನ ಪ್ರಕ್ರಿಯೆಯ ಬಳಿಕ ಅಂತಿಮವಾಗಿ ಈ ಆಪ್ಶನ್‌ ಅಳವಡಿಸಲಾಗಿದೆ. ಈ ವಿನೂತನ ವಾಷಿಂಗ್‌ ಮಷಿನ್‌ನಲ್ಲಿ ಒಟ್ಟು ಐದು ಬೇರೆ ಬೇರೆ ಹಂತದಲ್ಲಿ ಬಟ್ಟೆಗಳನ್ನು ಒಗೆಯುವ ವ್ಯವಸ್ಥೆಗಳಿವೆ. 

1990ರಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ ಪೆನಾಸಾನಿಕ್‌ ಈಗಾಗಲೇ 5 ಸಾವಿರ ಮಷಿನ್‌ಗಳನ್ನು ಮಾರಾಟ ಮಾಡಿದ್ದು, ಮುಂದಿನ ಮಾರ್ಚ್‌ ವೇಳೆಗೆ 30,000 ಮಷಿನ್‌ ಮಾರಾಟದ ಗುರಿ ಹೊಂದಿದೆ. ಈ ಅತ್ಯಾಧುನಿಕ ವಾಷಿಂಗ್‌ ಮಷಿನ್‌ನ ಬೆಲೆ 22 ಸಾವಿರು ರೂಪಾಯಿ.

Advertisement

Udayavani is now on Telegram. Click here to join our channel and stay updated with the latest news.

Next