Advertisement

ವನಿತಾ ಏಕದಿನ: ಆಸ್ಟ್ರೇಲಿಯಕ್ಕೆ ಸತತ 25ನೇ ಗೆಲುವು

09:44 PM Sep 21, 2021 | Team Udayavani |

ಮಕಾಯ್‌: ಬ್ಯಾಟಿಂಗ್‌ ಜತೆಗೆ ಬೌಲಿಂಗ್‌ ವಿಭಾಗದಲ್ಲೂ ಶೋಚನೀಯ ವೈಫ‌ಲ್ಯ ಅನುಭವಿಸಿದ ಭಾರತದ ವನಿತೆಯರು, ಆತಿಥೇಯ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯನ್ನು ಭಾರೀ ಸೋಲಿನೊಂದಿಗೆ ಆರಂಭಿಸಿದ್ದಾರೆ.

Advertisement

ಅಂತರ 9 ವಿಕೆಟ್‌. ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 8 ವಿಕೆಟಿಗೆ ಕೇವಲ 225 ರನ್‌ ಗಳಿಸಿದರೆ, ಆಸ್ಟ್ರೇಲಿಯ 41 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 227 ರನ್‌ ಬಾರಿಸಿತು. ಇದು ಆಸ್ಟ್ರೇಲಿಯ ದಾಖಲಿಸಿದ ಸತತ 25ನೇ ಏಕದಿನ ಗೆಲುವು. 2018ರ ಮಾರ್ಚ್‌ನಲ್ಲಿ ಕಾಂಗರೂ ವನಿತೆಯರ ಗೆಲುವಿನ ಓಟ ಆರಂಭಗೊಂಡಿತ್ತು.

ಮಿಥಾಲಿ ರಾಜ್‌ ದಾಖಲೆ: ಭಾರತದ ಬ್ಯಾಟಿಂಗ್‌ ಸರದಿಯಲ್ಲಿ ಗಮನ ಸೆಳೆದವರು ನಾಯಕಿ ಮಿಥಾಲಿ ರಾಜ್‌ ಮಾತ್ರ. ಅವರಿಂದ ಏಕೈಕ ಅರ್ಧಶತಕ ದಾಖಲಾಯಿತು. ಇದು ಅವರ ಸತತ 5ನೇ ಏಕದಿನ ಅರ್ಧಶತಕ. ಶಫಾಲಿ ವರ್ಮ (8), ಸ್ಮತಿ ಮಂಧನಾ (16) ಬೇಗನೇ ಔಟಾದುದರಿಂದ ಮಿಥಾಲಿ ತುಸು ನಿಧಾನಗತಿಯಲ್ಲಿ ಆಡಬೇಕಾಯಿತು. ಅವರ ಗಳಿಕೆ 107 ಎಸೆತಗಳಿಂದ 63 ರನ್‌. ಇದರಲ್ಲಿ ಕೇವಲ 3 ಬೌಂಡರಿ ಸೇರಿತ್ತು. ಈ ಇನಿಂಗ್ಸ್‌ ವೇಳೆ ಮಿಥಾಲಿ ರಾಜ್‌ ಕ್ರಿಕೆಟ್‌ ಬಾಳ್ವೆಯಲ್ಲಿ 20 ಸಾವಿರ ರನ್‌ ಪೂರ್ತಿಗೊಳಿಸಿದ ಸಾಧನೆಗೈದರು. ಇದರಲ್ಲಿ ಮೂರೂ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟಿನ 10,400 ರನ್‌ ಸೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next