Advertisement

ಜು. 26ರಿಂದ ಭಾರತ-ಶ್ರೀಲಂಕಾ ಕ್ರಿಕೆಟ್‌ ಸರಣಿ

03:00 AM Jul 08, 2017 | Team Udayavani |

ಕೊಲಂಬೊ: ಪ್ರವಾಸಿ ಭಾರತ-ಶ್ರೀಲಂಕಾ ನಡುವಿನ ಕ್ರಿಕೆಟ್‌ ಸರಣಿಯ ವೇಳಾಪಟ್ಟಿಯನ್ನು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಶುಕ್ರವಾರ ಪ್ರಕಟಿಸಿದೆ.

Advertisement

ಜು. 26ರಿಂದ ಆರಂಭವಾಗಲಿರುವ ಈ ಸರಣಿಯಲ್ಲಿ 3 ಟೆಸ್ಟ್‌, 5 ಏಕದಿನ ಹಾಗೂ ಏಕೈಕ ಟಿ-20 ಪಂದ್ಯವನ್ನು ಆಡಲಾಗುವುದು. ಸೆ. 6ರ ಟಿ-20 ಪಂದ್ಯದೊಂದಿಗೆ ಸರಣಿ ಮುಗಿಯಲಿದೆ. ಆದರೆ ಈವರೆಗೆ ಭಾರತ ತಂಡಕ್ಕೆ ಯಾವುದೇ ಅಭ್ಯಾಸ ಪಂದ್ಯವನ್ನು ಅಳವಡಿಸಲಾಗಿಲ್ಲ.

ಸರಣಿಯ ಮೊದಲ ಟೆಸ್ಟ್‌ ಜು. 26ರಿಂದ ಗಾಲೆಯಲ್ಲಿ ಆರಂಭವಾಗಲಿದೆ. ದ್ವಿತೀಯ ಟೆಸ್ಟ್‌ ತಾಣ ಕೊಲಂಬೊ (ಆ. 3-7). ಅಂತಿಮ ಟೆಸ್ಟ್‌ ಪಲ್ಲೆಕಿಲೆಯಲ್ಲಿ ನಡೆಯಲಿದೆ (ಆ. 12-16). ಪಲ್ಲೆಕಿಲೆಯಲ್ಲಿ ಭಾರತ ಟೆಸ್ಟ್‌ ಪಂದ್ಯವನ್ನು ಆಡುತ್ತಿರುವುದು ಇದೇ ಮೊದಲು.

ಏಕದಿನ ಸರಣಿ ಆ. 20ರಂದು ಡಂಬುಲದಲ್ಲಿ ಮೊದಲ್ಗೊಳ್ಳಲಿದೆ. ಬಳಿಕ ಪಲ್ಲೆಕಿಲೆಯಲ್ಲಿ 2 ಪಂದ್ಯ (ಆ. 24, 27) ಹಾಗೂ ಖೇತರಾಮದಲ್ಲಿ 2 ಪಂದ್ಯಗಳನ್ನು ಆಡಲಾಗುವುದು (ಆ. 31, ಸೆ. 3). ಟಿ-20 ಪಂದ್ಯ ಕೂಡ ಖೇತರಾಮದಲ್ಲೇ ಸಾಗಲಿದೆ (ಸೆ. 6).

ಭಾರತ 2015ರಲ್ಲಿ ಕೊನೆಯ ಸಲ ಶ್ರೀಲಂಕಾ ಪ್ರವಾಸ ಕೈಗೊಂಡಿತ್ತು. ಆಗ ಕೇವಲ ಟೆಸ್ಟ್‌ ಸರಣಿಯಷ್ಟೇ ನಡೆದಿದ್ದು, ಭಾರತ ಇದನ್ನು 2-1 ಅಂತರದಿಂದ ವಶಪಡಿಸಿಕೊಂಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next