Advertisement

ಶ್ರೀಲಂಕಾಕ್ಕೆ ಭರ್ಜರಿ ಗೆಲುವು 

07:30 AM Mar 07, 2018 | |

ಕೊಲಂಬೊ: ಕುಸಲ್‌ ಪೆರೆರ ಅವರ ಬಿರುಸಿನ ಆಟದಿಂದಾಗಿ ಆತಿಥೇಯ ಶ್ರೀಲಂಕಾ ತಂಡವು ಭಾರತ ವಿರುದ್ಧ ಮಂಗಳವಾರ ನಡೆದ ನಿದಹಾಸ್‌ ತ್ರಿಕೋನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ. ಶಾರ್ದೂಲ್‌ ಠಾಕೂರ್‌ ಅವರ ಒಂದು ಓವರಿನಲ್ಲಿ 5 ಬೌಂಡರಿ ಸಹಿತ 27 ರನ್‌ ಸಿಡಿಸಿದ್ದ ಕುಸೆಲ್‌ ಪೆರೆರ ಅವರು ಕೇವಲ 37 ಎಸೆತಗಳಿಂದ 66 ರನ್‌ ಗಳಿಸಿದ್ದರು. ಇದರಿಂದಾಗಿ ಶ್ರೀಲಂಕಾ ತಂಡವು 18.3 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟದಲ್ಲಿ 175 ರನ್‌ ಗಳಿಸಿ ಜಯಭೇರಿ ಸಾಧಿಸಿತು. ಈ ಮೊದಲು ಶಿಖರ್‌ ಧವನ್‌ ಅವರ ಬಿರುಸಿನ ಆಟದಿಂದಾಗಿ ಭಾರತ ತಂಡವು 5 ವಿಕೆಟಿಗೆ 174 ರನ್‌ ಪೇರಿಸಿತ್ತು. ಲಂಕಾದ 70ನೇ ಸ್ವಾತಂತ್ರೊತ್ಸವದ ಸವಿನೆನಪಿಗಾಗಿ ಈ ತ್ರಿಕೋನ ಸರಣಿಯನ್ನು ಆಯೋಜಿಸಲಾಗಿದೆ. ಸರಣಿಯ ಮುಂದಿನ ಪಂದ್ಯ ಮಾ. 8ರಂದು ಭಾರತ ಬಾಂಗ್ಲಾದೇಶ ನಡುವೆ ನಡೆಯಲಿದೆ. 

Advertisement

ಆರಂಭಿಕ ಆಘಾತ
ಆರಂಭಿಕ ಆಘಾತದ ಬಳಿಕ ಧವನ್‌ ಭಾರತ ತಂಡವನ್ನು ಆಧರಿಸಿದರು. ಅವರ ಬಿರುಸಿನ ಆಟದಿಂದಾಗಿ ತಂಡ ಚೇತರಿಸು ವಂತಾಯಿತು. ಮೊದಲ ಓವರಿನ ನಾಲ್ಕನೇ ಎಸೆತದಲ್ಲಿ ನಾಯಕ ರೋಹಿತ್‌ ಔಟಾದರೆ ಮುಂದಿನ ಓವರಿನಲ್ಲಿ ರೈನಾ ಅವರು ಪ್ರದೀಪ್‌ಗೆ ಕ್ಲೀನ್‌ಬೌಲ್ಡ್‌ ಆದರು. ಆಬಳಿಕ ಧವನ್‌ ಅವರು ಮೂರನೇ ವಿಕೆಟಿಗೆ ಮನೀಷ್‌ ಪಾಂಡೆ ಜತೆಗೂಡಿ 95 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ಸುಸ್ಥಿತಿಗೆ ತಲುಪಿಸಲು ಪ್ರಯತ್ನಿಸಿದರು. ಉತ್ತಮವಾಗಿ ಆಡುತ್ತಿದ್ದ ಮನೀಷ್‌ ಪಾಂಡೆ 35 ಎಸೆತಗಳಿಂದ 37 ರನ್‌ ಹೊಡೆದರು. ಭಡ್ತಿ ಪಡೆದು ಬಂದ ರಿಷಬ್‌ ಪಂತ್‌ ಎಸೆತಕ್ಕೊಂದರಂತೆ 23 ರನ್‌ ಹೊಡೆದರು. 

ಪ್ರದೀಪ್‌ ಓವರಿನಲ್ಲಿ ಬೆನ್ನು ಬೆನ್ನಿಗೆ ಬೌಂಡರಿ ಬಾರಿಸಿದ ಧವನ್‌ ಕೇವಲ 49 ಎಸೆತಗಳಲ್ಲಿ 90 ರನ್‌ ಗಳಿಸಿ ಔಟಾದರು. ಆರು ಬೌಂಡರಿ ಮತ್ತು ಆರು ಸಿಕ್ಸರ್‌ ಬಾರಿಸಿ ಪ್ರೇಕ್ಷಕರನ್ನು ರಂಜಿಸಿದರು. ಇದು ಟ್ವೆಂಟಿ20ಯಲ್ಲಿ ಧವನ್‌ ಅವರ ಗರಿಷ್ಠ ಮೊತ್ತವಾಗಿದೆ. ಈ ಹಿಂದೆ 80 ರನ್‌ ಗಳಿಸಿದ್ದು ಅವರ ಗರಿಷ್ಠ ಮೊತ್ತವಾಗಿತ್ತು.

ಭಾರತದ ದ್ವಿತೀಯ ದರ್ಜೆಯ ತಂಡವನ್ನು ರೋಹಿತ್‌ ಶರ್ಮ ಮುನ್ನಡೆಸಿದ್ದರು. ಪಂದ್ಯ ಆರಂಭವಾಗುವ ಮೊದಲು ಆಲ್‌ರೌಂಡರ್‌ ವಿಜಯ್‌ ಶಂಕರ್‌ ಅವರಿಗೆ ಕೋಚ್‌ ರವಿಶಾಸ್ತ್ರೀ ಅವರು ಇಂಡಿಯಾ ಕ್ಯಾಪ್‌ ನೀಡಿ ತಂಡಕ್ಕೆ ಸ್ವಾಗತಿಸಿದರು. ಇದು ವಿಜಯ್‌ ಶಂಕರ್‌ ಅವರ ಚೊಚ್ಚಲ ಟ್ವೆಂಟಿ20 ಪಂದ್ಯವಾಗಿದೆ.

ಸ್ಕೋರ್‌ಪಟ್ಟಿ
ಭಾರತ

ರೋಹಿತ್‌ ಶರ್ಮ    ಸಿ ಮೆಂಡಿಸ್‌ ಬಿ ಚಮೀರ    0
ಶಿಖರ್‌ ಧವನ್‌    ಸಿ ಪೆರೆರ ಬಿ ಗುಣತಿಲಕ    90
ಸುರೇಶ್‌ ರೈನಾ    ಬಿ ಪ್ರದೀಪ್‌    1
ಮನೀಷ್‌ ಪಾಂಡೆ    ಸಿ ಗುಣತಿಲಕ ಬಿ ಮೆಂಡಿಸ್‌    37
ರಿಷಬ್‌ ಪಂತ್‌    ಸಿ ಫೆರ್ನಾಂಡೊ ಬಿ ಚಮೀರ    23
ದಿನೇಶ್‌ ಕಾರ್ತಿಕ್‌    ಔಟಾಗದೆ    13

Advertisement

ಇತರ:        10
ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ)    174
ವಿಕೆಟ್‌ ಪತನ: 1-1, 2-9, 3-104, 4-153, 5-174

ಬೌಲಿಂಗ್‌: 
ದುಷ್ಮಂತ ಚಮೀರ        4-0-33-2
ನುವಾನ್‌ ಪ್ರದೀಪ್‌        3-0-38-1
ಅಖೀಲ ಧನಂಜಯ        4-0-37-0
ತಿಸರ ಪೆರೆರ        3-0-25-0
ಜೀವನ್‌ ಮೆಂಡಿಸ್‌        3-0-21-1
ದನುಷ್ಕ ಗುಣತಿಲಕ        3-0-16-1

ಶ್ರೀಲಂಕಾ
ದನುಷ್ಕ ಗುಣತಿಲಕ    ಸಿ ಪಂತ್‌ ಬಿ ಉನಾದ್ಕತ್‌    19
ಕುಸಲ್‌ ಮೆಂಡಿಸ್‌    ಸಿ ಧವನ್‌ ಬಿ ಸುಂದರ್‌    11
ಕುಸಲ್‌ ಪೆರೆರ    ಸ್ಟಂಪ್ಡ್ ಕಾರ್ತಿಕ್‌ ಬಿ ಸುಂದರ್‌    66
ದಿನೇಶ್‌ ಚಂಡಿಮಾಲ್‌    ಬಿ ಚಾಹಲ್‌    14
ಉಪುಲ್‌ ತರಂಗ    ಬಿ ಚಾಹಲ್‌    17
ದಸುನ್‌ ಶಣಕ    ಔಟಾಗದೆ    15
ತಿಸರ ಪೆರೆರ    ಔಟಾಗದೆ    22

ಇತರ        11
ಒಟ್ಟು ( 18.3 ಓವರ್‌ಗಳಲ್ಲಿ 5 ವಿಕೆಟಿಗೆ)    175
ವಿಕೆಟ್‌ ಪತನ: 1-12, 2-70, 3-98, 4-127, 5-136

ಬೌಲಿಂಗ್‌:
ಜೈದೇವ್‌ ಉನಾದ್ಕತ್‌        3-0-35-1
ವಾಷಿಂಗ್ಟನ್‌ ಸುಂದರ್‌        4-0-28-2
ಶಾದೂìಲ್‌ ಠಾಕೂರ್‌        3.3-0-42-0
ಯಜುವೇಂದ್ರ ಚಾಹಲ್‌        4-0-37-2
ವಿಜಯ್‌ ಶಂಕರ್‌        2-0-15-0    ಸುರೇಶ್‌ ರೈನಾ        2-0-14-0

Advertisement

Udayavani is now on Telegram. Click here to join our channel and stay updated with the latest news.

Next