Advertisement
ಭಾರತದ ಮೊತ್ತವನ್ನು ಸರಿದೂಗಿಸಲು ಇನ್ನೂ 572 ರನ್ ಪೇರಿಸಬೇಕಿರುವ ಶ್ರೀಲಂಕಾ, ಫಾಲೋಆನ್‌ನಿಂದ ಪಾರಾಗಲು ಒಟ್ಟು 422 ರನ್ ಗಳಿಸಬೇಕಾದ ಒತ್ತಡಲ್ಲಿದೆ. 3ನೇ ದಿನವಾದ ಶನಿವಾರ ಆತಿಥೇಯರು ಕ್ರೀಸ್ ಆಕ್ರಮಿಸಿಕೊಳ್ಳಲು ವಿಫಲರಾದರೆ ಗಾಲೆ ಟೆಸ್ಟ್ ಪಂದ್ಯದ ಫಲಿತಾಂಶ ಪುನರಾವರ್ತನೆಯಾಗುವುದರಲ್ಲಿ ಅನುಮಾನವಿಲ್ಲ. ಫಾಲೋಆನ್ ಹೇರದೆಯೂ ಭಾರತವಿಲ್ಲಿ ಗೆದ್ದು, ಸರಣಿ ವಶಪಡಿಸಿಕೊಳ್ಳುವ ಅವಕಾಶ ಮುಕ್ತವಾಗಿದೆ.3 ವಿಕೆಟಿಗೆ 344 ರನ್ ಗಳಿಸಿದಲ್ಲಿಂದ ಶುಕ್ರವಾರದ ಆಟ ಆರಂಭಿಸಿದ ಭಾರತ, ಚಹಾ ವಿರಾಮ ಕಳೆದ ಬಳಿಕ 9ಕ್ಕೆ 622 ರನ್ ಮಾಡಿ ಡಿಕ್ಲೇರ್ ಮಾಡಿತು. ಶತಕವೀರರಾದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಮೊದಲ ಅವಧಿಯಲ್ಲೇ ಔಟಾದರು. 128 ರನ್ ಮಾಡಿದ್ದ ಪೂಜಾರ ತಮ್ಮ ಮೊತ್ತಕ್ಕೆ ಪೇರಿಸಿದ್ದು 5 ರನ್ ಮಾತ್ರ. ಒಟ್ಟು 133 ರನ್ ಮಾಡಿ ಕರುಣರತ್ನೆ ಅವರಿಗೆ ಲೆಗ್ ಬಿಫೋರ್ ಆದರು. ಆಗ ಮೊತ್ತ ಭರ್ತಿ 350 ರನ್ ಆಗಿತ್ತು. 232 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ, ಒಂದು ಸಿಕ್ಸರ್ ಒಳಗೊಂಡಿತ್ತು. 4ನೇ ವಿಕೆಟಿಗೆ ಒಟ್ಟುಗೂಡಿದ ರನ್ 217.103 ರನ್ ಮಾಡಿ ಆಡುತ್ತಿದ್ದ ಅಜಿಂಕ್ಯ ರಹಾನೆ 132ರ ತನಕ ಸಾಗಿದರು. ಪುಷ್ಪಕುಮಾರ ಅವರ ಎಸೆತವೊಂದನ್ನು ಮುನ್ನುಗ್ಗಿ ಬಾರಿಸುವ ಯತ್ನದಲ್ಲಿ ಸ್ಟಂಪ್ಡ್ ಆದರು. ಅವರ 222 ಎಸೆತಗಳ ಬ್ಯಾಟಿಂಗ್ ವೇಳೆ ಚೆಂಡು 14 ಸಲ ಬೌಂಡರಿ ಗೆರೆ ದಾಟಿತ್ತು.
Related Articles
ಪೂಜಾರ ಮತ್ತು ರಹಾನೆ ಬೇಗ ನಿರ್ಗಮಿಸಿದ್ದನ್ನು ಕಂಡಾಗ ಭಾರತ 600ರ ಗಡಿ ದಾಟೀತೆಂದು ಯಾರೂ ಭಾವಿಸಿರಲಿಲ್ಲ. ಆದರೆ ಸ್ಪಿನ್‌ದ್ವಯರಾದ ಅಶ್ವಿನ್, ಜಡೇಜ ಹಾಗೂ ಕೀಪರ್ ಸಾಹಾ ಕೂಡ ಲಂಕಾ ಬೌಲರ್‌ಗಳನ್ನು ಬೆದರಿಸುತ್ತ ಸಾಗಿದರು; ಇವರೆಲ್ಲರೂ ಅರ್ಧ ಶತಕ ದಾಖಲಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಪಾಂಡ್ಯ ಎಸೆತಕ್ಕೊಂದರಂತೆ 20 ರನ್, ಶಮಿ ಎಂಟೇ ಎಸೆತಗಳಿಂದ 19 ರನ್ ಮಾಡಿದರು.
Advertisement
ಅಶ್ವಿನ್ ಗಳಿಕೆ 92 ಎಸೆತಗಳಿಂದ 54 ರನ್ (5 ಬೌಂಡರಿ, 1 ಸಿಕ್ಸರ್). ಇದು ಅವರ 11ನೇ ಶತಕಾರ್ಧ. ಈ ಅವಧಿಯಲ್ಲಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 2 ಸಾವಿರ ರನ್ ಪೂರ್ತಿಗೊಳಿಸಿದರು. ಜತೆಗೆ 2 ಸಾವಿರ ರನ್, 200 ವಿಕೆಟ್ ಸಾಧನೆಗೈದ ಭಾರತದ 4ನೇ ಕ್ರಿಕೆಟಿಗನೆನಿಸಿ ಕಪಿಲ್‌ದೇವ್, ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್ ಸಾಲಿನಲ್ಲಿ ಕಾಣಿಸಿಕೊಂಡರು.ಭಾರತ ಪ್ರಥಮ ಇನ್ನಿಂಗ್ಸ್
(ನಿನ್ನೆ 3 ವಿಕೆಟಿಗೆ 344)
ಚೇತೇಶ್ವರ್ ಪೂಜಾರ ಎಲ್‌ಬುಡಬ್ಲ್ಯು ಕರುಣರತ್ನೆ 133
ಅಜಿಂಕ್ಯ ರಹಾನೆ ಸ್ಟಂಪ್ಡ್ ಡಿಕ್ವೆಲ್ಲ ಬಿ ಪುಷ್ಪಕುಮಾರ 132
ಆರ್. ಅಶ್ವಿನ್ ಬಿ ಹೆರಾತ್ 54
ವೃದ್ಧಿಮಾನ್ ಸಾಹಾ ಸ್ಟಂಪ್ಡ್ ಡಿಕ್ವೆಲ್ಲ ಬಿ ಹೆರಾತ್ 67
ಹಾರ್ದಿಕ್ ಪಾಂಡ್ಯ ಸಿ ಮ್ಯಾಥ್ಯೂಸ್ ಬಿ ಪುಷ್ಪಕುಮಾರ 20
ರವೀಂದ್ರ ಜಡೇಜ ಔಟಾಗದೆ 70
ಮೊಹಮ್ಮದ್ ಶಮಿ ಸಿ ತರಂಗ ಬಿ ಹೆರಾತ್ 19
ಉಮೇಶ್ ಯಾದವ್ ಔಟಾಗದೆ 8
ಇತರ 14
ಒಟ್ಟು (9 ವಿಕೆಟಿಗೆ ಡಿಕ್ಲೇರ್) 622
ವಿಕೆಟ್ ಪತನ: 4-350, 5-413, 6-451, 7-496, 8-568, 9-598.
ಬೌಲಿಂಗ್:
ನುವಾನ್ ಪ್ರದೀಪ್ 17.4-2-63-0
ರಂಗನ ಹೆರಾತ್ 42-7-154-4
ದಿಮುತ್ ಕರುಣರತ್ನೆ 8-0-31-1
ದಿಲುÅವಾನ್ ಪೆರೆರ 40-3-147-1
ಮಲಿಂದ ಪುಷ್ಪಕುಮಾರ 38.2-2-156-2
ಧನಂಜಯ ಡಿ’ಸಿಲ್ವ 12-0-59-0 ಶ್ರೀಲಂಕಾ ಪ್ರಥಮ ಇನ್ನಿಂಗ್ಸ್
ದಿಮುತ್ ಕರುಣರತ್ನೆ ಸಿ ರಹಾನೆ ಬಿ ಅಶ್ವಿನ್ 25
ಉಪುಲ್ ತರಂಗ ಸಿ ರಾಹುಲ್ ಬಿ ಅಶ್ವಿನ್ 0
ಕುಸಲ್ ಮೆಂಡಿಸ್ ಬ್ಯಾಟಿಂಗ್ 16
ದಿನೇಶ್ ಚಂಡಿಮಾಲ್ ಬ್ಯಾಟಿಂಗ್ 8
ಇತರ 1
ಒಟ್ಟು (2 ವಿಕೆಟಿಗೆ) 50
ವಿಕೆಟ್ ಪತನ: 1-0, 2-33.
ಬೌಲಿಂಗ್:
ಮೊಹಮ್ಮದ್ ಶಮಿ 3-1-7-0
ಆರ್. ಅಶ್ವಿನ್ 10-2-38-2
ರವೀಂದ್ರ ಜಡೇಜ 7-4-4-0 ಎಕ್ಸ್‌ಟ್ರಾ ಇನ್ನಿಂಗ್ಸ್
ಭಾರತ 9ಕ್ಕೆ 622 ರನ್ ಪೇರಿಸಿ ಡಿಕ್ಲೇರ್ ಮಾಡಿತು. ಇದು ಶ್ರೀಲಂಕಾದಲ್ಲಿ ವಿದೇಶಿ ತಂಡವೊಂದರ 3ನೇ ಅತ್ಯಧಿಕ ಗಳಿಕೆ. ಇದರ ದಾಖಲೆ ಕೂಡ ಭಾರತದ ಹೆಸರಲ್ಲೇ ಇದೆ. 2010ರ ಪ್ರವಾಸದ ವೇಳೆ ಇದೇ ಅಂಗಳದಲ್ಲಿ ಭಾರತ 707 ರನ್ ಸೂರೆಗೈದಿತ್ತು. 2012-13ರ ಗಾಲೆ ಟೆಸ್ಟ್‌ನಲ್ಲಿ 638 ರನ್ ಮಾಡಿದ ಬಾಂಗ್ಲಾದೇಶಕ್ಕೆ ದ್ವಿತೀಯ ಸ್ಥಾನ. ವಿದೇಶಿ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಭಾರತದ 6 ಮಂದಿ ಆಟಗಾರರು 2ನೇ ಸಲ 50 ಪ್ಲಸ್ ರನ್ ಹೊಡೆದರು. ಇಂಗ್ಲೆಂಡ್ ಎದುರಿನ 2007ರ ಓವಲ್ ಟೆಸ್ಟ್‌ನಲ್ಲಿ ಮೊದಲ ಸಲ ಇಂಥ ಸಾಧನೆ ದಾಖಲಾಗಿತ್ತು. ಆರ್. ಅಶ್ವಿನ್ ಅತ್ಯಂತ ಕಡಿಮೆ ಟೆಸ್ಟ್‌ಗಳಲ್ಲಿ 2 ಸಾವಿರ ರನ್ ಹಾಗೂ 250 ವಿಕೆಟ್ ಪೂರ್ತಿಗೊಳಿಸಿದ ಕ್ರಿಕೆಟಿಗನೆನಿಸಿದರು. ಇದು ಅವರ 51ನೇ ಟೆಸ್ಟ್. ಇದಕ್ಕೂ ಮುನ್ನ ರಿಚರ್ಡ್ ಹ್ಯಾಡ್ಲಿ 54ನೇ ಟೆಸ್ಟ್‌ನಲ್ಲಿ, ಇಯಾಮ್ ಬೋಥಂ ಮತ್ತು ಇಮ್ರಾನ್ ಖಾನ್ 55ನೇ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ್ದರು. ಆರ್. ಅಶ್ವಿನ್ 11ನೇ ಹಾಗೂ ಶ್ರೀಲಂಕಾ ವಿರುದ್ಧ 2ನೇ ಅರ್ಧ ಶತಕ ಹೊಡೆದರು (54). 2015ರ ಕೊಲಂಬೊ ಟೆಸ್ಟ್‌ನಲ್ಲಿ (ಎಸ್‌ಎಸ್‌ಸಿ) 58 ರನ್ ಬಾರಿಸಿದ್ದು ಲಂಕಾ ವಿರುದ್ಧ ಅಶ್ವಿನ್ ಅವರ ಅತ್ಯಧಿಕ ಗಳಿಕೆಯಾಗಿದೆ. 2015ರ ಬಳಿಕ 6ನೇ ಹಾಗೂ ಇದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ವೇಳೆ ಅಶ್ವಿನ್ ಹೊಡೆದ 10ನೇ 50 ಪ್ಲಸ್ ಮೊತ್ತ ಇದಾಗಿದೆ. ಇಂಗ್ಲೆಂಡಿನ ಬೆನ್ ಸ್ಟೋಕ್ಸ್ (13), ಜಾನಿ ಬೇರ್‌ಸ್ಟೊ (11) ಮೊದಲೆರಡು ಸ್ಥಾನದಲ್ಲಿದ್ದಾರೆ. ವೃದ್ಧಿಮಾನ್ ಸಾಹಾ 5ನೇ ಹಾಗೂ ಶ್ರೀಲಂಕಾ ವಿರುದ್ಧ 3ನೇ ಅರ್ಧ ಶತಕ ಹೊಡೆದರು (67). ಇದು ಲಂಕಾ ವಿರುದ್ಧ ಸಾಹಾ ತೋರ್ಪಡಿಸಿದ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ. ರವೀಂದ್ರ ಜಡೇಜ 8ನೇ ಹಾಗೂ ಶ್ರೀಲಂಕಾ ವಿರುದ್ಧ ಮೊದಲ ಅರ್ಧ ಶತಕ ಬಾರಿಸಿದರು (ಅಜೇಯ 70).