Advertisement
ಮೊದಲ ಆಯ್ಕೆಯ ಆರಂಭಿಕ ಮುರಳಿ ವಿಜಯ್ ಗಾಯದಿಂದಾಗಿ ಹೊರಬಿದ್ದ ಬಳಿಕ ತಂಡಕ್ಕೆ ಮರಳಿದ್ದ ಶಿಖರ್ ಧವನ್ ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ ಸುದುಪಯೋಗಪಡಿಸಿಕೊಂಡರು. ಏಕದಿನ ಶೈಲಿಯಲ್ಲಿ ಬ್ಯಾಟಿಂಗ್ ವೈಭವ ಪ್ರದರ್ಶಿಸಿದ 168 ಎಸೆತಗಳಲ್ಲಿ 190 ರನ್ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಇದು ಅವರ ಐದನೇ ಟೆಸ್ಟ್ ಶತಕವಾಗಿದೆ.
Related Articles
Advertisement
ಭರ್ಜರಿ ಫಾರ್ಮ್ನಲ್ಲಿರುವ ಪೂಜಾರ ತಾಳ್ಮೆಯ ಆಟವಾಡಿ ತಂಡವನ್ನು ಆಧರಿಸಿದರು. ಧವನ್ ಮತ್ತು ಪೂಜಾರ ಜತೆಯಾಟ ಮುರಿದ ಬಳಿಕ ನಾಯಕ ವಿರಾಟ್ ಕೊಹ್ಲಿ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ವಿಫಲರಾದರೂ ಪೂಜಾರ ಗಟ್ಟಿಯಾಗಿ ನಿಂತು ಇನ್ನಷ್ಟು ಕುಸಿತ ಆಗದಂತೆ ನೋಡಿಕೊಂಡರು. ಅಜಿಂಕ್ಯ ರಹಾನೆ ಮುರಿಯದ ನಾಲ್ಕನೇ ವಿಕೆಟಿಗೆ ಈಗಾಗಲೇ 113 ರನ್ ಪೇರಿಸಲು ನೆರವಾದ ಪೂಜಾರ ದ್ವಿಶತಕದತ್ತ ದಾಪುಗಾಲು ಹಾಕಿದ್ದಾರೆ. ದ್ವಿತೀಯ ದಿನ ತಂಡದ ಮೊತ್ತವನ್ನು ಇನ್ನಷ್ಟು ಏರಿಸುವ ವಿಶ್ವಾಸದಲ್ಲಿದ್ದಾರೆ. 247 ಎಸೆತ ಎದುರಿಸಿದ ಅವರು 12 ಬೌಂಡರಿ ಬಾರಿಸಿದ್ದಾರೆ. ಧವನ್ ಅವರ ಆಟವನ್ನು ಗಮನಿಸಿದರೆ ಪೂಜಾರ ಅವರ ಆಟ ನಿಧಾನಗತಿಯಲ್ಲಿತ್ತು. ಇದು ಅವರ 12ನೇ ಟೆಸ್ಟ್ ಶತಕವಾಗಿದೆ.
ಗುಣರತ್ನೆಗೆ ಗಾಯಧವನ್ ನೀಡಿದ ಕ್ಯಾಚನ್ನು ಪಡೆಯುವ ಯತ್ನದ ವೇಳೆ ದ್ವಿತೀಯ ಸ್ಲಿಪ್‌ನಲ್ಲಿದ್ದ ಅಸೇಲ ಗುಣರತ್ನೆ ಅವರ ಎಡ ಹೆಬ್ಬರಳಿಗೆ ಗಾಯವಾಗಿದೆ. ಇದರಿಂದ ಅವರು ಮೈದಾನ ತೊರೆಯಬೇಕಾಯಿತು. ಅವರು ಟೆಸ್ಟ್ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಹಾರ್ದಿಕ್, ಗುಣತಿಲಕ ಪಾದಾರ್ಪಣೆ
ಭಾರತ ಪರ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಶ್ರೀಲಂಕಾದ ದನುಷ್ಕ ಗುಣತಿಲಕ ಈ ಪಂದ್ಯದ ಮೂಲಕ ಟೆಸ್ಟ್‌ಗೆ ಪಾದಾರ್ಪಣೆಗೈದಿದ್ದಾರೆ. ಶ್ರೀಲಂಕಾ ಪರ ನುವಾನ್ ಪ್ರದೀಪ್ ಮಾತ್ರ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಐದು ಮಂದಿ ದಾಳಿ ನಡೆಸಿದ್ದರೂ ಪ್ರದೀಪ್ ಮಾತ್ರ ವಿಕೆಟ್ ಪಡೆಯಲು ಯಶಸ್ವಿಯಾಗಿದ್ದಾರೆ. ಉರುಳಿದ ಮೂರು ವಿಕೆಟನ್ನು ಪ್ರದೀಪ್ ಪಡೆದಿದ್ದಾರೆ. ಅವರು ತನ್ನ 18 ಓವರ್‌ಗಳ ದಾಳಿಯಲ್ಲಿ ಕೇವಲ 64 ರನ್ ಬಿಟ್ಟುಕೊಟ್ಟಿದ್ದರು. ಸ್ಕೋರುಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್
ಶಿಖರ್ ಧವನ್ ಸಿ ಮ್ಯಾಥ್ಯೂಸ್ ಬಿ ಪ್ರದೀಪ್ 190
ಅಭಿನವ್ ಮುಕುಂದ್ ಸಿ ಡಿಕ್ವೆಲ್ಲ ಬಿ ಪ್ರದೀಪ್ 12
ಚೇತೇಶ್ವರ ಪೂಜಾರ ಔಟಾಗದೆ 144
ವಿರಾಟ್ ಕೊಹ್ಲಿ ಸಿ ಡಿಕ್ವೆಲ್ಲ ಬಿ ಪ್ರದೀಪ್ 3
ಅಜಿಂಕ್ಯ ರಹಾನೆ ಔಟಾಗದೆ 39
ಇತರ: 11
ಒಟ್ಟು (ಮೂರು ವಿಕೆಟಿಗೆ) 399
ವಿಕೆಟ್ ಪತನ: 1-27, 2-280, 3-286
ಬೌಲಿಂಗ್:
ನುವಾನ್ ಪ್ರದೀಪ್ 18-1-64-3
ಲಹಿರು ಕುಮಾರ 16-0-95-0
ದಿಲುÅವಾನ್ ಪೆರೆರ 25-1-103-0
ರಂಗನ ಹೆರಾತ್ 24-4-92-0
ದನುಷ್ಕ ಗುಣತಿಲಕ 7-0-41-0 ಎಕ್ಸ್‌ಟ್ರಾ ಇನ್ನಿಂಗ್ಸ್
ಗಾಲೆಯಲ್ಲಿ ಶಿಖರ್ ಧವನ್ ಊಟ ಮತ್ತು ಟೀ ವಿರಾಮದ ನಡುವಣ ಅವಧಿಯಲ್ಲಿ 126 ರನ್ ಪೇರಿಸಿರುವುದು ಭಾರತೀಯ ಆಟಗಾರನೊಬ್ಬ ಒಂದು ಅವಧಿಯ ಆಟದ ವೇಳೆ ಪೇರಿಸಲ್ಪಟ್ಟ ಎರಡನೇ ಗರಿಷ್ಠ ಮೊತ್ತವಾಗಿದೆ. ವೀರೇಂದ್ರ ಸೆಹವಾಗ್ ಈ ಹಿಂದೆ 2009ರಲ್ಲಿ ಬ್ರಬೋರ್ನ್ನಲ್ಲಿ ಶ್ರೀಲಂಕಾ ವಿರುದ್ಧ ಅಂತಿಮ ಅವಧಿಯ ಆಟದ ವೇಳೆ 133 ರನ್ ಪೇರಿಸಿದ್ದು ಗರಿಷ್ಠ ಮೊತ್ತವಾಗಿದೆ. ಇಲ್ಲಿ ಧವನ್ ಊಟದ ಬಳಿಕ 64 ರಿಂದ ಆಟ ಆರಂಭಿಸಿ ಟೀ ವೇಳೆಗೆ 190 ರನ್ ಗಳಿಸಿದ್ದರು. ಮಧ್ಯದ ಅವಧಿಯಲ್ಲಿ ಧವನ್ ಅವರಿಗಿಂತ ಹೆಚ್ಚಿನ ಮೊತ್ತವನ್ನು ಮೂವರು ಕ್ರಿಕೆಟಿಗರು ಹೊಡೆದಿದ್ದಾರೆ. 173 ರನ್ ಗಳಿಸಿದ ಡೆನಿಸ್ ಕಾಂಪ್ಟನ್ ಗರಿಷ್ಠ ಮೊತ್ತ ಹೊಡೆದ ದಾಖಲೆ ಹೊಂದಿದ್ದಾರೆ. 1954ರಲ್ಲಿ ಟ್ರೆಂಟ್‌ಬ್ರಿಡ್ಜ್ನಲ್ಲಿ ಪಾಕಿಸ್ಥಾನ ವಿರುದ್ಧ ಅವರು ಈ ಮೊತ್ತ ಹೊಡೆದಿದ್ದರು. ಭಾರತ ಪರ ಈ ಹಿಂದಿನ ಗರಿಷ್ಠ ಮೊತ್ತ 110 ರನ್ ಹೊಡೆದ ಪಾಲಿ ಉಮ್ರಿಗಾರ್ ಹೆಸರಲ್ಲಿದೆ. 168 ಎಸೆತಗಳಲ್ಲಿ 190 ರನ್ ಸಿಡಿಸಿದ ಧವನ್ 113.09 ಸ್ಟ್ರೆ çಕ್‌ರೇಟ್ ಹೊಂದಿದ್ದಾರೆ. 150 ಪ್ಲಸ್ ರನ್ ಗಳಿಸಿ ವೇಳೆ ಇದು ಭಾರತ ಪರ ಎರಡನೇ ಗರಿಷ್ಠ ಸಾಧನೆಯಾಗಿದೆ. ಸೆಹವಾಗ್ 293 ರನ್ ಹೊಡೆದ ವೇಳೆ 115.35 ಸ್ಟ್ರೆ çಕ್‌ರೇಟ್ ಹೊಂದಿದ್ದರು. ಧವನ್ ಅವರ ಈ ಹಿಂದಿನ ಗರಿಷ್ಠ ಮೊತ್ತ 187 ರನ್ ಆಗಿದೆ. 2012-13ರಲ್ಲಿ ಮೊಹಾಲಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಈ ಮೊತ್ತ ಹೊಡೆದಿದ್ದರು. ಇದು ಅವರ ಐದನೇ ಶತಕ ಮತ್ತು ಮೂರನೇ 150 ಪ್ಲಸ್ ಮೊತ್ತವಾಗಿದೆ. ಟೆಸ್ಟ್‌ನಲ್ಲಿ 190ರ ಆಸುಪಾಸಿನಲ್ಲಿ ಔಟಾದ ಐದನೇ ಆಟಗಾರ ಧವನ್ ಆಗಿದ್ದಾರೆ. ಕಳೆದ ವರ್ಷ ಚೆನ್ನೈಯಲ್ಲಿ ಇಂಗ್ಲೆಂಡ್ ವಿರುದ್ಧ ಕೆಎಲ್ ರಾಹುಲ್ 199 ರನ್ನಿಗೆ ಔಟಾಗಿದ್ದರು. ಶ್ರೀಲಂಕಾ ವಿರುದ್ಧ ಧವನ್ 4 ಶತಕ ಹೊಡೆದಿದ್ದಾರೆ. ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ ಅವರು ಎರಡು ಶತಕ ಹೊಡೆದಿದ್ದರೆ ಏಕದಿನ ಪಂದ್ಯವೊಂದರಲ್ಲಿ 125 ರನ್ ಬಾರಿಸಿದ್ದರು.