Advertisement

India vs South Africa: 48 ವರ್ಷಗಳ ಬಳಿಕ ಚೆನ್ನೈಯಲ್ಲಿ ಮಹಿಳಾ ಟೆಸ್ಟ್‌ ಪಂದ್ಯ ಆಯೋಜನೆ

10:20 PM May 16, 2024 | Team Udayavani |

ಚೆನ್ನೈ: ಸುಮಾರು 48 ವರ್ಷಗಳ ಬಳಿಕ ಮೊದಲ ಬಾರಿಗೆ ಚೆನ್ನೈಯ ಎಂ.ಎ. ಚಿದಂಬರಂ ಮೈದಾನದಲ್ಲಿ ಮಹಿಳಾ ಟೆಸ್ಟ್‌ ಪಂದ್ಯ ನಡೆಯಲಿದೆ. ಭಾರತಕ್ಕೆ ಪ್ರವಾಸ ಬರಲಿರುವ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್‌ ತಂಡ, ಜೂ. 28ರಿಂದ ಚೆನ್ನೈಯಲ್ಲಿ 4 ದಿನಗಳ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ.

Advertisement

ಚೆನ್ನೈ ತಾಣದಲ್ಲಿ ಕೊನೆಯ ಬಾರಿ ಮಹಿಳಾ ಟೆಸ್ಟ್‌ ಪಂದ್ಯ ನಡೆದಿದ್ದು 1976ರಲ್ಲಿ. ಅಂದು ಭಾರತಕ್ಕೆ ಬಂದಿದ್ದ ವೆಸ್ಟ್‌ ಇಂಡೀಸ್‌ ಮಹಿಳಾ ತಂಡ ಇಲ್ಲಿ ಟೆಸ್ಟ್‌ ಪಂದ್ಯವನ್ನು ಆಡಿತ್ತು. ಅದಾಗಿ, ಈ ತಾಣದಲ್ಲಿ ಮಹಿಳಾ ಟೆಸ್ಟ್‌ ಪಂದ್ಯ ನಡೆದಿರಲಿಲ್ಲ.

ಜೂ.16ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವನಿತೆಯರ ಭಾರತ ಪ್ರವಾಸ ಸರಣಿಯು, 3 ಏಕದಿನ ಪಂದ್ಯಗಳು, 1 ಟೆಸ್ಟ್‌ ಮತ್ತು 3 ಟಿ20 ಪಂದ್ಯಗಳನ್ನು ಒಳಗೊಂಡಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next