Advertisement
ಆದರೆ ಅಂತಿಮ ದಿನದಾಟಕ್ಕೆ ಮಳೆ ಭೀತಿ ಎದುರಾ ಗಿದ್ದು, ಮಳೆ ಸಹಕರಿಸಿದಷ್ಟೇ ಟೀಮ್ ಇಂಡಿಯಾದ ಗೆಲುವನ್ನು ನಿರೀಕ್ಷಿಸಬಹುದು. ಹಾಗೆಯೇ ದಕ್ಷಿಣ ಆಫ್ರಿಕಾ ಸೋಲಿನ ಕಂಟಕದಿಂದ ಪಾರಾಗಬೇಕಾದರೆ ಮಳೆಯಿಂದ ಮಾತ್ರ ಸಾಧ್ಯ ಎಂಬುದು ಸದ್ಯದ ಲೆಕ್ಕಾಚಾರ!
Related Articles
4ನೇ ದಿನದಾಟದಲ್ಲೂ ಪಿಚ್ ಸಂಪೂರ್ಣವಾಗಿ ವೇಗಿಗಳಿಗೆ ನೆರವಾಯಿತು. ಬ್ಯಾಟ್ಸ್‌ಮನ್‌ಗಳ ಪರದಾಟ ಮುಂದುವರಿಯಿತು. ಒಂದಕ್ಕೆ 16 ರನ್ ಮಾಡಿದ್ದ ಭಾರತ, ಬುಧವಾರ ಸುಮಾರು ಮೂರೂವರೆ ಗಂಟೆಗಳ ಕಾಲವಷ್ಟೇ ಬ್ಯಾಟಿಂಗ್ ನಡೆಸಿ 174ಕ್ಕೆ ಆಲೌಟ್ ಆಯಿತು. 158 ರನ್ ಅಂತರದಲ್ಲಿ ಉಳಿದೆಲ್ಲ ವಿಕೆಟ್‌ಗಳು ಉದುರಿದವು. ರಬಾಡ ಮತ್ತು ಜಾನ್ಸೆನ್ ತಲಾ 4, ಎನ್‌ಗಿಡಿ 2 ವಿಕೆಟ್ ಕೆಡವಿದರು. ಇದರೊಂದಿಗೆ ಪಂದ್ಯದ ಮೊದಲ 3 ಇನ್ನಿಂಗ್ಸ್‌ಗಳ ಎಲ್ಲ ವಿಕೆಟ್‌ಗಳನ್ನು ವೇಗಿಗಳೇ ಉದುರಿಸಿದಂತಾಯಿತು.
Advertisement
ಲಂಚ್ ವೇಳೆ 3ಕ್ಕೆ 79 ರನ್ ಮಾಡಿದ ಟೀಮ್ ಇಂಡಿಯಾ ಇನ್ನೂರರ ಗಡಿ ದಾಟುವ ಸೂಚನೆ ನೀಡಿತ್ತು. ಆದರೆ ದ್ವಿತೀಯ ಅವಧಿಯಲ್ಲಿ ಕುಸಿತ ತೀವ್ರಗೊಂಡಿತು. ಯಾರಿಂದಲೂ ಕ್ರೀಸ್ ಆಕ್ರಮಿಸಿಕೊಳ್ಳಲಾಗಲಿಲ್ಲ, ದೊಡ್ಡ ಜತೆಯಾಟಗಳೂ ದಾಖಲಾಗಲಿಲ್ಲ. ಎಸೆತಕ್ಕೊಂದರಂತೆ 34 ರನ್ ಮಾಡಿದ ರಿಷಭ್ ಪಂತ್ ಅವರೇ ಟಾಪ್ ಸ್ಕೋರರ್. ಮೊದಲ ಇನ್ನಿಂಗ್ಸ್‌ನಲ್ಲಿ 123 ರನ್ ಬಾರಿಸಿದ್ದ ರಾಹುಲ್ ಇಲ್ಲಿ 23ಕ್ಕೆ ಔಟಾದರು. ಪಂತ್ ಹೊರತುಪಡಿಸಿದರೆ ರಾಹುಲ್ ಅವರದೇ ಹೆಚ್ಚಿನ ಗಳಿಕೆ.
ಇದನ್ನೂ ಓದಿ:ಬೆಂಗಾಲ್ ಕದನ ಗೆದ್ದ ದಿಲ್ಲಿ; ಮತ್ತೆ ನವೀನ್ ಕುಮಾರ್ ಆರ್ಭಟ
ಸ್ಕೋರ್ 34ಕ್ಕೆ ಏರಿದಾಗ ನೈಟ್ ವಾಚ್‌ಮನ್ ಠಾಕೂರ್ (10) ಅವರನ್ನು ಔಟ್ ಮಾಡಿದ ರಬಾಡ ಭಾರತದ ಕುಸಿತಕ್ಕೆ ಚಾಲನೆ ಕೊಟ್ಟರು. ರಾಹುಲ್ ವಿಕೆಟ್ ಎನ್‌ಗಿಡಿ ಪಾಲಾಯಿತು. ಲಂಚ್ ಮುಗಿಸಿ ಬಂದ ಕೊಹ್ಲಿ (18) ಮೊದಲ ಎಸೆತದಲ್ಲೇ ಔಟಾದುದು ಅಚ್ಚರಿಯಾಗಿ ಕಂಡಿತು. ಶಾಟ್ ಆಯ್ಕೆಯಲ್ಲಿ ಎಡವಟ್ಟು ಮಾಡಿಕೊಂಡ ಅವರು ಜಾನ್ಸೆನ್ ಎಸೆತವನ್ನು ಕೀಪರ್ ಡಿ ಕಾಕ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. 2018ರ ಪ್ರವಾಸದ ವೇಳೆ ಜಾನ್ಸೆನ್ ನೆಟ್ಸ್‌ನಲ್ಲಿ ಕೊಹ್ಲಿಗೆ ಬೌಲಿಂಗ್ ಮಾಡಿದ್ದರು. 3 ವರ್ಷಗಳ ಬಳಿಕ ತಮ್ಮ ಪದಾರ್ಪಣ ಟೆಸ್ಟ್‌ನಲ್ಲೇ ಅವರು ಕೊಹ್ಲಿ ವಿಕೆಟ್ ಹಾರಿಸಿದ್ದು ವಿಶೇಷವಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ರನ್ ಗಳಿಸಲು ವಿಫಲರಾಗಿದ್ದ ಪೂಜಾರ ಇಲ್ಲಿ 64 ಎಸೆತ ನಿಭಾಯಸಿ 16 ರನ್ ಮಾಡಿದರು.
ತಮ್ಮ ಎಂದಿನ ಶೈಲಿಗೆ ವಿರುದ್ಧವಾಗಿದ್ದ ರಹಾನೆ ಆಕ್ರಮಣಕಾರಿ ಮೂಡ್‌ನಲ್ಲಿದ್ದರು. ಆದರೆ ಇನ್ನಿಂಗ್ಸ್ ವಿಸ್ತರಿಸಲು ಅವರಿಂದಾಗಲಿಲ್ಲ. 23 ಎಸೆತಗಳಿಂದ 20 ರನ್ ಮಾಡಿ ವಾಪಸಾದರು. 3 ಬೌಂಡರಿ ಜತೆಗೆ ಒಂದು ಸಿಕ್ಸರ್ ಕೂಡ ಬಾರಿಸಿದರು.
ವಿರಾಟ್ ಕೊಹ್ಲಿ ಶತಕ ಕಾಣದ ಮತ್ತೊಂದುವರ್ಷದ್ವಿತೀಯ ಇನ್ನಿಂಗ್ಸ್‌ನಲ್ಲಿ 18 ರನ್ನಿಗೆ ಔಟಾಗುವುದರೊಂದಿಗೆ ವಿರಾಟ್ ಕೊಹ್ಲಿ ಟೆಸ್ಟ್ ಶತಕ ಕಾಣದ ಮತ್ತೂಂದು ವರ್ಷವನ್ನು ಮುಗಿಸಿದರು. ಅವರು ಕಳೆದ ವರ್ಷವೂ ಟೆಸ್ಟ್ ಸೆಂಚುರಿ ಬಾರಿಸಿರಲಿಲ್ಲ. ಇದರೊಂದಿಗೆ ಮೊದಲ ಸಲ ಸತತ ಎರಡು ವರ್ಷ ಶತಕ ಹೊಡೆಯದೆ ಟೆಸ್ಟ್ ಋತುವನ್ನು ಮುಗಿಸಿದರು. ಈ ವರ್ಷದ 11 ಟೆಸ್ಟ್‌ಗಳಲ್ಲಿ ಕೊಹ್ಲಿ ಗಳಿಸಿದ್ದು ಕೇವಲ 536 ರನ್. ಸರಾಸರಿ 28.21. ಇದರಲ್ಲಿ 4 ಅರ್ಧ ಶತಕಗಳಷ್ಟೇ ಸೇರಿವೆ. 2019ರ ವರ್ಷಾಂತ್ಯ ಬಾಂಗ್ಲಾದೇಶ ವಿರುದ್ಧದ ಕೋಲ್ಕತಾ ಟೆಸ್ಟ್ ಪಂದ್ಯದಲ್ಲಿ 136 ರನ್ ಬಾರಿಸಿದ ಬಳಿಕ ಕೊಹ್ಲಿ ಶತಕ ಬಾರಿಸಿಲ್ಲ. ಗಂಟೆ ಬಾರಿಸಿದ ದ್ರಾವಿಡ್
ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಸೆಂಚುರಿಯನ್‌ನ “ಸೂಪರ್ ನ್ಪೋರ್ಟ್ ಪಾರ್ಕ್ ಸ್ಟೇಡಿಯಂ’ನ ಗಂಟೆ ಬಾರಿಸುವ ಮೂಲಕ 4ನೇ ದಿನದಾಟಕ್ಕೆ ಚಾಲನೆ ನೀಡಿದರು. ಟೆಸ್ಟ್ ಪಂದ್ಯಕ್ಕೂ ಮುನ್ನ ಗಂಟೆ ಬಾರಿಸುವ ಸಂಪ್ರದಾಯ ಮೊದಲ ಸಲ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಆರಂಭವಾಗಿತ್ತು. ಬಳಿಕ ಕೋಲ್ಕತಾ ಈಡನ್ ಗಾರ್ಡನ್ಸ್‌ನಲ್ಲೂ ಈ ಸಂಪ್ರದಾಯ ಜಾರಿಗೆ ಬಂತು. ಇದೀಗ ದಕ್ಷಿಣ ಆಫ್ರಿಕಾದಲ್ಲೂ ಕಂಡುಬಂದಿದೆ. “ಸೂಪರ್ ಸ್ಪೋರ್ಟ್ಸ್ ಪಾರ್ಕ್ ಸಂಪ್ರದಾಯದಂತೆ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ನಾಲ್ಕನೇ ದಿನದ ಪಂದ್ಯದಾರಂಭಕ್ಕೂ ಮುನ್ನ ಗಂಟೆ ಹೊಡೆದರು’ ಎಂದು ಟ್ವೀಟ್ ಮಾಡಿರುವ ಬಿಸಿಸಿಐ, ಇದರ ಚಿತ್ರವನ್ನೂ ಪೋಸ್ಟ್ ಮಾಡಿದೆ. ಸೆಂಚುರಿಯನ್
ಚೇಸಿಂಗ್ ದಾಖಲೆ
ಸೆಂಚುರಿಯನ್ ಟೆಸ್ಟ್ ಪಂದ್ಯದ 4ನೇ ಇನ್ನಿಂಗ್ಸ್‌ನಲ್ಲಿ ಈ ವರೆಗಿನ ಯಶಸ್ವಿ ಚೇಸಿಂಗ್ ದಾಖಲೆಯೆಂದರೆ 251 ರನ್. 2000-01ರಲ್ಲಿ ಪ್ರವಾಸಿ ಇಂಗ್ಲೆಂಡ್ ಈ ಸಾಧನೆಗೈದಿತ್ತು. ತವರಿನ ಟೆಸ್ಟ್ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಈವರೆಗೆ ಒಮ್ಮೆಯಷ್ಟೇ 300 ಪ್ಲಸ್ ಮೊತ್ತವನ್ನು ಚೇಸ್ ಮಾಡಿ ಗೆದ್ದಿದೆ. 2000-01ರ ಆಸ್ಟ್ರೇಲಿಯ ಎದುರಿನ ಡರ್ಬನ್ ಟೆಸ್ಟ್ ಪಂದ್ಯದಲ್ಲಿ 335 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು. ಹಾಗೆಯೇ ಭಾರತದೆದುರು ಈ ತನಕ ಒಮ್ಮೆ ಮಾತ್ರ ತಂಡವೊಂದು 300 ಪ್ಲಸ್ ರನ್ ಮೊತ್ತವನ್ನು ಚೇಸ್ ಮಾಡಿ ಗೆದ್ದಿದೆ. ಈ ಹೆಗ್ಗಳಿಕೆ ಆಸ್ಟ್ರೇಲಿಯದ್ದಾಗಿದೆ. ಅದು 1977-78ರರ ಪರ್ತ್ ಟೆಸ್ಟ್ ಪಂದ್ಯದಲ್ಲಿ 339 ರನ್ ಹೊಡೆದು ಜಯಿಸಿತ್ತು. ಸ್ಕೋರ್ ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್ 327
ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್ 197
ಭಾರತ ದ್ವಿತೀಯ ಇನ್ನಿಂಗ್ಸ್
ಕೆ.ಎಲ್. ರಾಹುಲ್ ಸಿ ಎಲ್ಗರ್ ಬಿ ಎನ್‌ಗಿಡಿ 23
ಮಾಯಾಂಕ್ ಅಗರ್ವಾಲ್ ಸಿ ಡಿ ಕಾಕ್ ಬಿ ಜೆನ್ಸೆನ್ 4
ಶಾದೂìಲ್ ಠಾಕೂರ್ ಸಿ ಮುಲ್ಡರ್ ಬಿ ರಬಾಡ 10
ಚೇತೇಶ್ವರ್ ಪೂಜಾರ ಸಿ ಡಿ ಕಾಕ್ ಬಿ ಎನ್‌ಗಿಡಿ 16
ವಿರಾಟ್ ಕೊಹ್ಲಿ ಸಿ ಡಿ ಕಾಕ್ ಬಿ ಜೆನ್ಸೆನ್ 18
ಅಜಿಂಕ್ಯ ರಹಾನೆ ಸಿ ಡುಸೆನ್ ಬಿ ಜೆನ್ಸೆನ್ 20
ರಿಷಭ್ ಪಂತ್ ಸಿ ಎನ್‌ಗಿಡಿ ಬಿ ರಬಾಡ 34
ಆರ್. ಅಶ್ವಿನ್ ಸಿ ಪೀಟರ್‌ಸನ್ ಬಿ ರಬಾಡ 14
ಮೊಹಮ್ಮದ್ ಶಮಿ ಸಿ ಮುಲ್ಡರ್ ಬಿ ರಬಾಡ 1
ಜಸ್‌ಪ್ರೀತ್ ಬುಮ್ರಾ ಔಟಾಗದೆ 7
ಮೊಹಮ್ಮದ್ ಸಿರಾಜ್ ಬಿ ಜೆಸ್ಸೆನ್ 0
ಇತರ 27
ಒಟ್ಟು (ಆಲೌಟ್) 174
ವಿಕೆಟ್ ಪತನ:1-12, 2-34, 3-54, 4-79, 5-109, 6-111, 7-146, 8-166, 9-169.
ಬೌಲಿಂಗ್;
ಕಾಗಿಸೊ ರಬಾಡ 17-4-42-4
ಲುಂಗಿ ಎನ್‌ಗಿಡಿ 0-2-31-2
ಮಾರ್ಕೊ ಜೆನ್ಸೆನ್ 13.3-4-55-4
ವಿಯಾನ್ ಮುಲ್ಡರ್ 10-4-25-0
ದಕ್ಷಿಣ ಆಫ್ರಿಕಾ ದ್ವಿತೀಯ ಇನ್ನಿಂಗ್ಸ್
ಐಡೆನ್ ಮಾರ್ಕ್‌ರಮ್ ಬಿ ಶಮಿ 1
ಡೀನ್ ಎಲ್ಗರ್ ಬ್ಯಾಟಿಂಗ್ 52
ಪೀಟರ್‌ಸನ್ ಸಿ ಪಂತ್ ಬಿ ಸಿರಾಜ್ 17
ಡುಸೆನ್ ಬಿ ಬುಮ್ರಾ 11
ಕೇಶವ್ ಮಹರಾಜ್ ಬಿ ಬುಮ್ರಾ 8
ಇತರ 5
ಒಟ್ಟು (4 ವಿಕೆಟಿಗೆ) 94
ವಿಕೆಟ್ ಪತನ:1-1, 2-34, 3-74, 4-94.
ಬೌಲಿಂಗ್;
ಜಸ್‌ಪ್ರೀತ್ ಬುಮ್ರಾ 11.5-2-22-2
ಮೊಹಮ್ಮದ್ ಶಮಿ 9-2-29-1
ಮೊಹಮ್ಮದ್ ಸಿರಾಜ್ 11-4-25-1
ಶಾದೂìಲ್ ಠಾಕೂರ್ 5-0-11-0
ಆರ್. ಅಶ್ವಿನ್ 4-1-6-0