ಜಕಾರ್ತ : ಏಷ್ಯಾಕಪ್ ಹಾಕಿ ಪಂದ್ಯಾವಳಿಯಲ್ಲಿ ಸೋಮವಾರ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ 1-1 ಡ್ರಾದಲ್ಲಿ ಅಂತ್ಯಗೊಂಡಿದೆ. ಭಾರತ ಪರ ಸೆಲ್ವಂ ಕಾರ್ತಿ ಗೋಲು ಗಳಿಸಿದರೆ, ಪಾಕಿಸ್ತಾನ ಪರ ಅಬ್ದುಲ್ ರಾಣಾ ಗೋಲು ಗಳಿಸಿದರು.
ಭಾರತ ಪುರುಷರ ಹಾಕಿ ತಂಡವು ದಲ್ಲಿ ಬದ್ದ ಎದುರಾಳಿ ಪಾಕಿಸ್ತಾನದ ವಿರುದ್ಧ 1-1 ಡ್ರಾ ಸಾಧಿಸುವ ಮೂಲಕ ಅಭಿಯಾನವನ್ನು ಪ್ರಾರಂಭಿಸಿತು. ಎಂಟನೇ ನಿಮಿಷದಲ್ಲಿ ಕಾರ್ತಿ ಸೆಲ್ವಂ ಚೊಚ್ಚಲ ಗೋಲು ಗಳಿಸುವ ಮೂಲಕ ಹಾಲಿ ಚಾಂಪಿಯನ್ಸ್ 1-0 ಮುನ್ನಡೆ ಸಾಧಿಸಿತು.
ಭಾರತ ತಂಡವು ಮಂಗಳವಾರ ಎರಡನೇ ಎ ಗುಂಪಿನ ಪಂದ್ಯದಲ್ಲಿ ಜಪಾನ್ ವಿರುದ್ಧ ಮತ್ತು ಮೇ 26 ರಂದು ಆತಿಥೇಯ ಇಂಡೋನೇಷ್ಯಾವನ್ನು ಎದುರಿಸಲಿದೆ.
ಮಲೇಷ್ಯಾ, ಕೊರಿಯಾ, ಓಮನ್ ಮತ್ತು ಬಾಂಗ್ಲಾದೇಶಗಳು ಬಿ ಗುಂಪಿನಲ್ಲಿ ಸೇರಿವೆ.