Advertisement

ಪಾಕ್‌ ವಿರುದ್ಧ ಗೆದ್ದ ಭಾರತಕ್ಕೆ ಬಾಲಿವುಡ್‌ ಪ್ರಶಂಸೆ

03:45 AM Jul 04, 2017 | Team Udayavani |

ನವದೆಹಲಿ: ಲಂಡನ್‌ನಲ್ಲಿ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದೆ. ಇದಕ್ಕೆ ಬಾಲಿವುಡ್‌ ದಿಗ್ಗಜರು ಟ್ವೀಟರ್‌ನಲ್ಲಿ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

Advertisement

ಬಾಲಿವುಡ್‌ ಸೂಪರ್‌ ಸ್ಟಾರ್‌ ಅಮಿತಾಭ್‌ ಬಚ್ಚನ್‌, ಅನಿಲ್‌ ಕಪೂರ್‌, ಅನುಪಮ್‌ ಖೇರ್‌ ಮತ್ತು ಅಭಿಷೇಕ್‌ ಬಚ್ಚನ್‌ ಟ್ವೀಟರ್‌ನಲ್ಲಿ ಭಾರತ ತಂಡವನ್ನು ಅಭಿನಂದಿಸಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 169 ರನ್‌ ಬಾರಿಸಿತ್ತು. ಗುರಿ ಬೆನ್ನುಹತ್ತಿದ ಪಾಕ್‌ ತಂಡವನ್ನು ಭಾರತ 74 ರನ್‌ಗೆ ಆಲೌಟ್‌ ಮಾಡಿ 95 ರನ್‌ಗಳಿಂದ ಜಯ ಸಾಧಿಸಿತು. ಕೂಟದಲ್ಲಿ ಭಾರತ ಇಂಗ್ಲೆಂಡ್‌, ವೆಸ್ಟ್‌ ಇಂಡೀಸ್‌, ಪಾಕ್‌ ವಿರುದ್ಧ ಜಯ ದಾಖಲಿಸಿದೆ. ಯಾವುದೇ ಪಂದ್ಯದಲ್ಲಿ ಸೋತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next