Advertisement

India Vs Pakistan: ಅಹ್ಮದಾಬಾದ್‌ ನಲ್ಲಿ11,000 ಭದ್ರತಾ ಸಿಬಂದಿ

12:02 AM Oct 10, 2023 | Team Udayavani |

ಅಹ್ಮದಾಬಾದ್‌: ಇದೇ ಶನಿವಾರ ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಭಾರತ-ಪಾಕಿಸ್ಥಾನ ನಡುವಿನ ವಿಶ್ವಕಪ್‌ ಪಂದ್ಯಕ್ಕೆ ಖಾಲಿಸ್ಥಾನಿ ಉಗ್ರರಿಂದ ಬೆದರಿಕೆ ಬಂದಿರುವುದರಿಂದ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. 11,000ಕ್ಕೂ ಅಧಿಕ ಭದ್ರತಾ ಸಿಬಂದಿಯನ್ನು ನಿಯೋಜಿಸಲಾಗಿದೆ.

Advertisement

ಗುಜರಾತ್‌ ಪೊಲೀಸರು, ಎನ್‌ಎಸ್‌ಜಿ, ಆರ್‌ಎಎಫ್, ಗೃಹದಳವೂ ಸೇರಿ ಎಲ್ಲ ಕಡೆಯಿಂದಲೂ ತೀವ್ರ ಭದ್ರತೆಯನ್ನು ಒದಗಿಸಲಾಗಿದೆ. ಅಹ್ಮದಾಬಾದ್‌ನಲ್ಲಿ ಕಳೆದ 20 ವರ್ಷಗಳಿಂದ ಕ್ರಿಕೆಟ್‌ ಪಂದ್ಯಗಳು ನಡೆಯ್ತುದ್ದರೂ ಯಾವುದೇ ಸಂಘರ್ಷ ನಡೆದಿಲ್ಲ. ಆದರೂ ಕೋಮುಸೂಕ್ಷ್ಮ ಪ್ರದೇಶಗಳಿಗೆ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಗುಜರಾತ್‌ ಸರಕಾರವೂ ಭದ್ರತೆಯನ್ನು ಗಂಭೀರವಾಗಿ ಪರಿಗಣಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next