Advertisement

ಇಂದು ಟಿ20, ಟೆಸ್ಟ್‌ ತಂಡಗಳ ಆಯ್ಕೆ

07:40 AM Oct 23, 2017 | |

ಮುಂಬಯಿ: ಪ್ರವಾಸಿ ನ್ಯೂಜಿಲ್ಯಾಂಡ್‌ ವಿರುದ್ಧ ಆಡಲಾಗುವ 3 ಪಂದ್ಯಗಳ ಟಿ20 ಸರಣಿಗೆ ಸೋಮವಾರ ಭಾರತ ತಂಡವನ್ನು ಪ್ರಕಟಿಸಲಾಗುವುದು. ಎಂ.ಎಸ್‌.ಕೆ. ಪ್ರಸಾದ್‌ ನೇತೃತ್ವದ ಆಯ್ಕೆ ಸಮಿತಿ ಬೆಳಗ್ಗೆ 11 ಗಂಟೆಗೆ ಇಲ್ಲಿನ “ಬಿಸಿಸಿಐ ಕ್ರಿಕೆಟ್‌ ಸೆಂಟರ್‌’ನಲ್ಲಿ ಸಭೆ ಸೇರಲಿದೆ ಎಂದು ಬಿಸಿಸಿಐ ಪ್ರಕಟನೆ ತಿಳಿಸಿದೆ.

Advertisement

ಟಿ20 ತಂಡದ ಜತೆಗೆ ಮುಂದಿನ ತಿಂಗಳು ಆರಂಭವಾಗಲಿರುವ ಪ್ರವಾಸಿ ಶ್ರೀಲಂಕಾ ವಿರುದ್ಧದ ಅಭ್ಯಾಸ ಪಂದ್ಯ ಹಾಗೂ 3 ಪಂದ್ಯಗಳ ಟೆಸ್ಟ್‌ ಸರಣಿಗೂ ಭಾರತ ತಂಡವನ್ನು ಪ್ರಕಟಿಸಲಾಗುವುದಾಗಿ ಬಿಸಿಸಿಐ ಹೇಳಿದೆ. ಈ ಸರಣಿ ಡಿ. 24ರ ತನಕ ನಡೆಯಲಿದೆ.

ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯಲು ನಿರ್ಧರಿಸಿರುವ ಹಿರಿಯ ಎಡಗೈ ವೇಗಿ ಆಶಿಷ್‌ ನೆಹ್ರಾ ಮೊದಲ ಪಂದ್ಯದಲ್ಲಷ್ಟೇ ಸ್ಥಾನ ಪಡೆಯಲಿದ್ದಾರೆ. ಸರಣಿಯ ಮೊದಲ ಟಿ20 ಪಂದ್ಯ ನ. ಒಂದರಂದು ಹೊಸದಿಲ್ಲಿಯ “ಫಿರೋಜ್‌ ಶಾ ಕೋಟ್ಲಾ’ದಲ್ಲಿ ನಡೆಯಲಿದ್ದು, ಇದು ನೆಹ್ರಾ ಅವರ ತವರು ಅಂಗಳವೂ ಆಗಿದೆ. ಇಲ್ಲಿಯೇ ವಿದಾಯ ಪಂದ್ಯವಾಡುವುದಾಗಿ ನೆಹ್ರಾ ಈಗಾಗಲೇ ಅಭಿಲಾಷೆ ವ್ಯಕ್ತಪಡಿಸಿದ್ದು, ಇದನ್ನು ಬಿಸಿಸಿಐ ಬೆಂಬಲಿಸುವುದರಲ್ಲಿ ಅನುಮಾನವಿಲ್ಲ. ಆದರೆ ಕಳೆದ ಆಸ್ಟ್ರೇಲಿಯ ಎದುರಿನ ಟಿ20 ಸರಣಿಗಾಗಿ ಆಯ್ಕೆಯಾಗಿದ್ದ ನೆಹ್ರಾಗೆ ಅಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next