ದುಬಾೖ: ಏಷ್ಯಾ ಕಪ್ ಕ್ರಿಕೆಟ್ ಕೂಟದ ಆರಂಭಿಕ ಪಂದ್ಯದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನ ವನ್ನು ಐದು ವಿಕೆಟ್‌ಗಳಿಂದ ಬಗ್ಗುಬಡಿದ ಭಾರತವು ಬುಧವಾರ ನಡೆಯುವ ಲೀಗ್ ಹಂತದ ಇನ್ನೊಂದು ಪಂದ್ಯ ದಲ್ಲಿ ಹಾಂಕಾಂಗ್ ತಂಡವನ್ನು ಎದುರಿಸಲಿದೆ. ಅಷ್ಟೊಂದು ಬಲಿಷ್ಠವಲ್ಲದ ಹಾಂಕಾಂಗ್ ವಿರುದ್ಧ ಭಾರತೀಯ ಆಟಗಾರರಿಗೆ ತಮ್ಮ ಶಕ್ತಿ, ಸಾಮರ್ಥ್ಯವನ್ನು ಪ್ರದರ್ಶಿಸಲು ಒಳ್ಳೆಯ ವೇದಿಕೆ ಸಿಕ್ಕಿದೆ.
ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಈ ಹಿಂದಿನ ಪಂದ್ಯಗಳಲ್ಲಿ ವೈಫಲ್ಯ ಅನು ಭವಿಸಿದ ಆಟಗಾರರು ಇಲ್ಲಿ ಭರ್ಜರಿ ಪ್ರದರ್ಶನ ನೀಡುವ ಸಾಧ್ಯತೆಯಿದೆ. ಕೆ.ಎಲ್. ರಾಹುಲ್, ಕೊಹ್ಲಿ ಮುಂತಾದ ಆಟಗಾರರಿಗೆ ತಮ್ಮ ಲಯವನ್ನು ಮರಳಿ ಪಡೆಯಲು ಇದಕ್ಕಿಂತ ಸುಲಭವಾದ ಎದುರಾಳಿ ಸಿಗುವ ಸಾಧ್ಯತೆಯಿಲ್ಲ.
ಈ ಪಂದ್ಯ ರೋಹಿತ್ ಶರ್ಮ ಪಡೆಗೆ ಬಲುದೊಡ್ಡ ನೆಟ್ ಅಭ್ಯಾ ಸವೆಂದು ಹೇಳಬಹುದು. ಹೆಚ್ಚಾಗಿ ಪಾಕಿಸ್ಥಾನ ಮತ್ತು ಭಾರತೀಯ ವಲಸಿಗರನ್ನು ಒಳಗೊಂಡ ಈ ತಂಡವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ ಅನುಭವವನ್ನು ಪಡೆದಿಲ್ಲ. ಭಾರತೀಯ ಆಟಗಾರರು ಯಾವ ರೀತಿ ಆಡುತ್ತಾರೆ ಎಂಬುದೇ ಇಲ್ಲಿ ಮುಖ್ಯವಾಗಿದೆ.
ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಬಹಳಷ್ಟು ಪ್ರಾಮುಖ್ಯ ಪಡೆಯುತ್ತದೆ. ಎದುರಾಳಿ ತಂಡದ ರನ್‌ವೇಗಕ್ಕೆ ಕಡಿವಾಣ ಹಾಕಲು ತಂಡ ಯಶಸ್ವಿಯಾಗುವುದು ಅತೀ ಮುಖ್ಯವಾಗಿದೆ. ಇದೇ ವೇಳೆ ಬ್ಯಾಟ್ಸ್‌ಮನ್‌ಗಳು ಕೂಡ ಎದುರಾಳಿ ತಂಡದ ಬೌಲಿಂಗ್ ದಾಳಿಯನ್ನು ನಿಭಾಯಿಸಿ ವೇಗವಾಗಿ ರನ್ ಪೇರಿ ಸುವುದು ಅಗತ್ಯವಾಗಿದೆ. ಇಲ್ಲಿ ಆಟಗಾರರ ಗುಣಮಟ್ಟದ ಆಟವು ಪ್ರಮುಖ ಪಾತ್ರ ವಹಿಸುತ್ತದೆ. ಮುಂದೆ ಟಿ20 ವಿಶ್ವಕಪ್ ಇರುವ ಕಾರಣ ಭಾರತ ಈ ಪಂದ್ಯವನ್ನು ಕೂಡ ಗಂಭೀರವಾಗಿ ಪರಿಗಣಿಸಿ ಅಮೋಘ ಪ್ರದರ್ಶನ ನೀಡುವುದು ಅತೀ ಮುಖ್ಯ ಎನಿಸುತ್ತದೆ.
ನಿಸ್ಸಂಶಯವಾಗಿ ಹಾಂಕಾಂಗ್‌ನ ಬೌಲಿಂಗ್ ಗುಣಮಟ್ಟ ಪಾಕಿ ಸ್ಥಾನ ದಷ್ಟು ನಿಖರವಾಗಿಲ್ಲ. ಆದರೆ ಅವರ ದಾಳಿಯನ್ನು ಹಗುರವಾಗಿ ಕಾಣುವ ಸಾಧ್ಯತೆಯಿಲ್ಲ. ಅವರು ಯಾವ ರೀತಿ ಬೌಲಿಂಗ್ ಮಾಡುತ್ತಾರೆಂದು ನಿಖರವಾಗಿ ತಿಳಿದಿಲ್ಲ ವಾದ್ದರಿಂದ ಆಟಗಾರರು ಎಚ್ಚರಿಕೆ ಯಿಂದ ಆಡುವುದು ಅತೀ ಅಗತ್ಯ ವಾಗಿದೆ. ಹೀಗಾಗಿ ರಾಹುಲ್ ಸಹಿತ ಎಲ್ಲ ಆಟಗಾರರು ಬಹಳಷ್ಟು ಎಚ್ಚರಿಕೆ ಯಿಂದ ಆಡಿ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಬೇಕಾಗಿದೆ.
ಪಾಕ್ ವಿರುದ್ಧ ಗೆಲುವಿನ ರೂವಾರಿ ಯಲ್ಲಿ ಒಬ್ಬರಾಗಿದ್ದ ರವೀಂದ್ರ ಜಡೇಜ 4ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಯಿದೆ ಎಂಬುದು ಆಸಕ್ತಿಯ ವಿಷಯ ವಾಗಿದೆ. ಇದೇ ವೇಳೆ ಕಾರ್ತಿಕ್‌ಗೆ ವಿಶ್ರಾಂತಿ ನೀಡಿ ಪಂತ್ ಅವರನ್ನು ಆಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಇಂದಿನ ಪಂದ್ಯ
ಭಾರತ-ಹಾಂಕಾಂಗ್
ಸ್ಥಳ: ದುಬಾೖ
ಆರಂಭ: 7.30
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್