Advertisement

India vs Germany Hockey: ಭಾರತಕ್ಕೆ ಅವಳಿ ಸೋಲಿನ ಆಘಾತ

11:11 PM Oct 23, 2024 | Team Udayavani |

ಹೊಸದಿಲ್ಲಿ/ಜೊಹೊರ್‌ ಬಹ್ರು (ಮಲೇಷ್ಯಾ): ಬುಧವಾರ ಭಾರತೀಯ ಹಾಕಿ ಪಾಲಿಗೆ ಸೋಲಿನ ದಿನವಾಗಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಮುಗ್ಗರಿಸಿದೆ. ವಿಶ್ವ ಚಾಂಪಿಯನ್‌ ಜರ್ಮನಿ ವಿರುದ್ಧದ ಮೊದಲ ಹಾಕಿ ಟೆಸ್ಟ್‌ ಪಂದ್ಯದಲ್ಲಿ ಸೀನಿಯರ್ 0-2 ಅಂತರದಿಂದ ಎಡವಿದರೆ, ಕಿರಿಯರ ತಂಡ “ಸುಲ್ತಾನ್‌ ಆಫ್ ಜೊಹೊರ್‌ ಕಪ್‌’ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ 0-4 ಅಂತರದಿಂದ ಶರಣಾಯಿತು.

Advertisement

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಜರ್ಮನಿ, ಈ ಸರಣಿಗಾಗಿ ಯುವ ಆಟಗಾರರ ತಂಡವೊಂದನ್ನು ಕಟ್ಟಿಕೊಂಡು ಬಂದಿತ್ತು. ಇವರು ಮೊದಲ ಪಂದ್ಯದಲ್ಲಿ ತಮ್ಮ ಮೇಲಿನ ನಿರೀಕ್ಷೆಯನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾದರು. 4ನೇ ನಿಮಿಷದಲ್ಲೇ ಹೆನ್ರಿಕ್‌ ಮರ್ಟ್‌ಜೆನ್ಸ್‌ ಗೋಲೊಂದನ್ನು ಬಾರಿಸಿ ಭಾರತದ ಮೇಲೆ ಒತ್ತಡ ಹೇರಿದರು. ಇನ್ನೊಂದು ಗೋಲು 30ನೇ ನಿಮಿಷದಲ್ಲಿ ಲುಕಾಸ್‌ ವಿಂಡ್‌ಫೆಡರ್‌ ಅವರಿಂದ ದಾಖಲಾಯಿತು.
ಸರಣಿಯ ದ್ವಿತೀಯ ಟೆಸ್ಟ್‌ ಗುರುವಾರ ನಡೆಯಲಿದೆ.

ಅಂಕಪಟ್ಟಿಯಲ್ಲಿ ಟಾಪರ್‌
ಜೊಹೊರ್‌ ಕಪ್‌ ಕೂಟದಲ್ಲಿ ಆಸ್ಟ್ರೇಲಿಯಕ್ಕೆ ಶರಣಾದ ಹೊರ ತಾಗಿಯೂ ಭಾರತ 9 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ನ್ಯೂಜಿ ಲ್ಯಾಂಡ್‌ 2ನೇ (8 ಅಂಕ), ಆಸ್ಟ್ರೇಲಿಯ (7 ಅಂಕ) 3ನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next