Advertisement

ಹಾರ್ದಿಕ್‌ ಪಾಂಡ್ಯ ಆಲೌ ರೌಂಡ್ ಆಟ: ಇಂಗ್ಲೆಂಡ್‌ ವಿರುದ್ಧ ಭರ್ಜರಿ ಜಯಗಳಿಸಿದ ಭಾರತ

02:01 AM Jul 08, 2022 | Team Udayavani |

ಸೌತಾಂಪ್ಟನ್‌: ಇಂಗ್ಲೆಂಡ್‌ ವಿರುದ್ಧದ ಮೊದಲ ಟಿ- ಟ್ವಿಂಟಿ ಪಂದ್ಯದಲ್ಲಿ ಭಾರತ 50 ರನ್‌ ಗಳಿಂದ ಭರ್ಜರಿ ಜಯ ಸಾಧಿಸಿದೆ.

Advertisement

ಟಾಸ್‌ ಗೆದ್ದು ಬ್ಯಾಟ್‌ ಮಾಡಿದ ರೋಹಿತ್‌ ಪಡೆ ಆರಂಭದಲ್ಲೇ ಇಶಾನ್‌ ಕಿಶನ್‌ ವಿಕೆಟ್‌ ಕಳೆದುಕೊಂಡಿತ್ತು. ಆ ಬಳಿಕ ಕೊಂಚ ಹೊತ್ತು ಕ್ರೀಸ್‌ ನಲ್ಲಿ ನಿಂತಿದ್ದ ಕ್ಯಾಪ್ಟನ್‌ ರೋಹಿತ್‌ ಶರ್ಮಾ 24 ರನ್‌ ಗಳಿಸಿ ಮೊಯಿನ್‌ ಆಲಿ ಎಸತಕ್ಕೆ ಬಟ್ಲರ್‌ ಕೈಗೆ ಕ್ಯಾಚ್‌ ಕೊಟ್ಟು ಪೆವಿಲಿಯನ್‌ ಕಡೆ ಸಾಗಿದರು.

ಸ್ಫೋಟಕ ಆಟಗಾರ ದೀಪಕ್‌ ಹೂಡಾ ಬಿರುಸಿನ 33 ರನ್‌ ಹಾಗೂ ಸೂರ್ಯಕುಮಾರ್‌ ಯಾದವ್‌ 39 ರನ್‌ ಗಳಿಸಿ ಆಂಗ್ಲ ಬೌಲರ್‌ ಗಳನ್ನು ಕಾಡಿದರು. ಬಳಿಕ  ಬಂದ ಹಾರ್ದಿಕ್‌ ಪಾಂಡ್ಯ 6  ಬೌಂಡರಿ, 1 ಸಿಕ್ಸರ್‌ ಸಿಡಿಸಿ ಆಕರ್ಷಕ ಅರ್ಧಶತಕಗಳಿಸಿದರು. ( 51 ರನ್)‌

ಕಡೆಯ ಓವರ್‌ ಗಳಲ್ಲಿ ಭಾರತದ ವಿಕೆಟ್‌ ಗಳು ಒಂದರ ಮೇಲೆ ಒಂದಾರಂತೆ ಹೋಗಿ, ಅಂತಿಮವಾಗಿ 20 ಓವರ್‌ ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 198 ರನ್‌ ಗಳಿಸಿ 199 ರ ಬೃಹತ್‌ ಗುರಿಯನ್ನು ಬಿಟ್ಟು ಕೊಟ್ಟಿತು.

ದೊಡ್ಡ ಟಾರ್ಗೆಟ್‌ ಬೆನ್ನಟ್ಟಿದ್ದ ಇಂಗ್ಲೆಂಡ್‌ ಆರಂಭಿಕ ಓವರ್‌ ನಲ್ಲೇ ನಾಯಕ ಬಟ್ಲರ್‌ ಶೂನ್ಯ ಸುತ್ತಿ ಭುವನೇಶ್ವರ್‌ ಕುಮಾರ್‌ ಎಸತೆಕ್ಕೆ ಔಟ್‌ ಆದರು.

Advertisement

ಜೇಸನ್‌ ರಾಯ್ ಡೇವಿಡ್‌ ಮಾಲನ್‌, ಲಿವಿಂಗ್‌ ಸ್ಟೂನ್‌, ಸ್ಯಾಮ್‌ ಕರನ್ ನಿರೀಕ್ಷೆಯಷ್ಟು ಸಿಡಿಯಲಿಲ್ಲ. ಮೊಯಿನ್‌ ಆಲಿ, ಹ್ಯಾರಿ ಬ್ರೂಕ್‌ ಮೂವತ್ತರ ಮೇಲೆ ರನ್‌ ಗಳಿಸಿದರೂ ಕಡೆಯವರೆಗೆ ಸಾಗಲಿಲ್ಲ.

ಭಾರತದ ಪರವಾಗಿ ಹಾರ್ದಿಕ್‌ ಪಾಂಡ್ಯ 4 ಓವರ್‌ ನಲ್ಲಿ 4 ಮಹತ್ವದ ವಿಕೆಟ್‌ ಗಳನ್ನು ಪಡೆದು ಮಿಂಚಿದರು. ಯಜುವೇಂದ್ರ ಚಹಲ್‌ 2 ವಿಕೆಟ್‌ ಗಳನ್ನು ಪಡೆದರು.

ಇಂಗ್ಲೆಂಡ್‌ ಸರ್ವಪತನವಾಗಿ 148 ರನ್‌ ಗಳಿಸಿ ಶರಣಾಯಿತು.

Advertisement

Udayavani is now on Telegram. Click here to join our channel and stay updated with the latest news.

Next