Advertisement

ಆರಂಭಕಾರ ಪೃಥ್ವಿ ಶಾ ಪರ ವೆಂಗ್‌ಸರ್ಕಾರ್‌ ಬ್ಯಾಟಿಂಗ್‌

06:00 AM Sep 06, 2018 | Team Udayavani |

ಮುಂಬಯಿ: ಆತಿಥೇಯ ಇಂಗ್ಲೆಂಡ್‌ ವಿರುದ್ಧ ಶುಕ್ರವಾರದಿಂದ ಓವಲ್‌ನಲ್ಲಿ ಆರಂಭವಾಗಲಿರುವ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಯುವ ಆರಂಭಕಾರ ಪೃಥ್ವಿ ಶಾ ಅವರನ್ನು ಆಡಿಸಬೇಕು ಎಂಬುದಾಗಿ ಮಾಜಿ ಕ್ರಿಕೆಟಿಗ ದಿಲೀಪ್‌ ವೆಂಗ್‌ಸರ್ಕಾರ್‌ ಹೇಳಿದ್ದಾರೆ. “ಪೃಥ್ವಿ ಶಾ ಅವರನ್ನು ಅಂತಿಮ 2 ಟೆಸ್ಟ್‌ ಪಂದ್ಯಗಳಿಗಾಗಿ ಆಯ್ಕೆ ಮಾಡಲಾಗಿತ್ತು. 4ನೇ ಪಂದ್ಯದಲ್ಲಿ ಅವರಿಗೆ ಅವಕಾಶ ಸಿಗಲಿಲ್ಲ. ಹೀಗಾಗಿ 5ನೇ ಟೆಸ್ಟ್‌ನಲ್ಲಾದರೂ ಕಣಕ್ಕಿಳಿಸಬೇಕು. ಇಬ್ಬರೂ ಆರಂಭಿಕರು ವಿಫ‌ಲರಾದ್ದರಿಂದ ಶಾ ಅವರನ್ನು ಆಡಿಸುವುದು ಉತ್ತಮ ನಡೆಯಾಗಲಿದೆ. ಆದರೆ ನನ್ನ ಪ್ರಕಾರ, ಈ ಎಳೆಯ ಆರಂಭಿ ಕನನ್ನು ಇಂಗ್ಲೆಂಡ್‌ನ‌ಲ್ಲಿ ಆಡಿಸುವ ಬದಲು ತವರಿನ ಸರಣಿಯಲ್ಲಿ ಅವಕಾಶ ನೀಡಬೇಕಿತ್ತು. ಏನೇ ಆಗಲಿ, ಆಯ್ಕೆಗಾರರು ಶಾ ಮೇಲೆ ವಿಶ್ವಾಸವಿರಿಸಿದ್ದಾರೆ. ಈಗಾಗಲೇ ಸರಣಿ ಸೋತಿರುವುದರಿಂದ ಇಂಥದೊಂದು ಪ್ರಯೋಗಕ್ಕೆ ಮುಂದಾ ಗಬಹುದು’ ಎಂದು ವೆಂಗ್‌ಸರ್ಕಾರ್‌ ಅಭಿಪ್ರಾಯಪಟ್ಟರು.

Advertisement

ಮುಂಬಯಿ ಆರಂಭಿಕರಾದ ಪೃಥ್ವಿ ಶಾ 2016-17ರ ರಣಜಿ ಸೆಮಿಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಪ್ರಥಮ ದರ್ಜೆ ಕ್ರಿಕೆಟಿಗೆ ಅಡಿಯಿರಿಸಿದ್ದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿ ತಮ್ಮ ಆಯ್ಕೆಯನ್ನು ಸಮರ್ಥಿ ಸಿಕೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next