Advertisement

ಪಿಂಕ್ ಬಾಲ್ ನಲ್ಲಿ ಅಕ್ಷರ್ –ಅಶ್ವಿನ್ ಮ್ಯಾಜಿಕ್ : ಅಲ್ಪ ಮೊತ್ತಕ್ಕೆ ಕುಸಿದ ಆಂಗ್ಲರು

06:24 PM Feb 24, 2021 | Team Udayavani |

ಅಹಮದಾಬಾದ್ : ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಜೋ ರೂಟ್ ಪಡೆ , ಭಾರತದ ಸ್ಪಿನ್ನ್ ಮೋಡಿಗೆ ಅಲ್ಪ ಮೊತ್ತಕ್ಕೆ ಕುಸಿದಿದೆ.

Advertisement

ತಂಡಕ್ಕೆ ಬದಲಿ ಆಟಗಾರನಾಗಿ ಅವಕಾಶಗಿಟ್ಟಿಸಿಕೊಂಡ ಜ್ಯಾಕ್ ಕ್ರಾಲಿ ಆರಂಭಿಕ ಆಟಗಾರನಾಗಿ ಆಶದಾಯಕ ಆರಂಭ ನೀಡಿದರು. 53 ರನ್ ಪೇರಿಸಿದ ಜ್ಯಾಕ್ ಕ್ರಾಲಿ ಅಕ್ಷರ್ ಪಟೇಲ್ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಆರಂಭಿಕನಾಗಿ ಕ್ರೀಸ್ ಗಿಳಿದ ಮತ್ತೊರ್ವ ಆಟಗಾರ ಡೊಮಿನಿಕ್ ಸಿಬ್ಲಿ ಇಶಾಂತ್ ಶರ್ಮಾ ಎಸೆತದಲ್ಲಿ ವಿಕೆಟ್ ಒಪ್ಪಿಸಿ, ಶೂನ್ಯ ಸುತ್ತಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಹೊಡಿಬಡಿ ಆಟಗಾರ ಜಾನಿ ಬೆರಿಸ್ಟೋ ಅಕ್ಷರ್ ಸ್ಪಿನ್ನ್ ಮ್ಯಾಜಿಕ್ ಗೆ ಶೂನ್ಯ ಸುತ್ತಿ ವಿಕೆಟ್ ಒಪ್ಪಿಸಿದರು.

ವಿರಾಮದ ಬಳಿಕ ಬ್ಯಾಟಿಂಗ್ ಗಿಳಿದ ಇಂಗ್ಲೆಂಡ್ ಆಟಗಾರರು, ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲದೆ, ಒಂದಾದ ಮೇಲೆ ಒಂದರಂತೆ ವಿಕೆಟ್ ಕಳೆದುಕೊಳ್ಳುತ್ತಾ, ತಂಡ ಅಲ್ಪ ಮೊತ್ತಕ್ಕೆ ಕುಸಿಯಿತು. ನಾಯಕ ಜೋ ರೂಟ್ 17 ರನ್ ಗಳಿಸಿ ಅಶ್ವಿನ್ ಎಸೆತದಲ್ಲಿ ಎಲ್ ಬಿ ಡಬ್ಲ್ಯೂ ಮೂಲಕ ಔಟ್ ಆದರು. ಬೆನ್ ಸ್ಟೋಕ್ಸ್, ಒಲಿ ಪೋಪ್, ಜೋಫ್ರಾ ಆರ್ಚರ್, ಜ್ಯಾಕ್ ಲೀಚ್, ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲದೆ, ಭಾರತದ ಸ್ಪಿನ್ನ್ ಮಾಂತ್ರಿಕತೆಗೆ ಪೆವಿಲಿಯನ್ ಹಾದಿ ಹಿಡಿದರು.

ಇಂಗ್ಲೆಂಡ್  112 ರನ್ ಗೆ ಸರ್ವ ಪತನವಾಯಿತು. ಭಾರತದ ಪರ ಉತ್ತಮ ಸ್ಪೆಲ್ ಮಾಡಿದ ಅಕ್ಷರ್ ಪಟೇಲ್ 6 ವಿಕೆಟ್ ಪಡೆದು ಮಿಂಚಿದರು. ಆರ್.ಅಶ್ವಿನ್ 3 ವಿಕೆಟ್ ಪಡೆದರು. ಇಶಾಂತ್ ಶರ್ಮಾ 1 ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next