Advertisement

World Cup 2023: ಭಾರತ – ಇಂಗ್ಲೆಂಡ್‌ ಕದನ;‌ ಮಹತ್ವದ ಪಂದ್ಯದಲ್ಲಿ ಟಾಸ್‌ ಗೆದ್ದ ಬಟ್ಲರ್

01:35 PM Oct 29, 2023 | Team Udayavani |

ಲಕ್ನೋ: ವಿಶ್ವಕಪ್‌ ನ ಇಂಡೋ – ಆಂಗ್ಲರ ನಡುವಿನ ಕಾದಾಟದಲ್ಲಿ  ಇಂಗ್ಲೆಂಡ್‌ ಟಾಸ್‌ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ.

Advertisement

ಇಂಗ್ಲೆಂಡ್‌ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಭಾರತದಲ್ಲಿಯೂ ಯಾವುದೇ ಬದಲಾವಣೆ ಮಾಡಿಲ್ಲ. ಗಮನಿಸಬೇಕಾದ ಅಂಶವೆಂದರೆ ಭಾರತ ಈ ವಿಶ್ವಕಪ್‌ ನಲ್ಲಿ ಮೊದಲ ಬಾರಿ ಟಾಸ್‌ ಸೋತಿದೆ.

ಅಜೇಯ ಭಾರತಕ್ಕೆ ಮಾಜಿ ವಿಶ್ವಕಪ್‌ ಚಾಂಪಿಯನ್ಸ್‌  ಇಂಗ್ಲೆಂಡ್‌ ತಂಡದ ಸವಾಲು ಎದುರಾಗಲಿದೆ. ಮೇಲ್ನೋಟಕ್ಕೆ ಇಂದಿನ ಪಂದ್ಯದಲ್ಲಿ ಭಾರತವೇ ನೆಚ್ಚಿನ ತಂಡವಾಗಿರಲಿದೆ. ಅದಕ್ಕೆ ಕಾರಣ ಜಾಸ್‌ ಬಟ್ಲರ್‌ ನಾಯಕತ್ವದ ತಂಡ ನಿರಾಶದಾಯಕ ಪ್ರದರ್ಶನ ನೀಡಿರುವುದು. ಇಂಗ್ಲೆಂಡ್‌ 5 ಪಂದ್ಯಗಳಲ್ಲಿ ಗೆದ್ದದ್ದು ಒಂದನ್ನು ಮಾತ್ರ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಹೊಂದಿದೆ. ಒಂದು ವೇಳೆ ಇಂದಿನ ಪಂದ್ಯವನ್ನೂ ಇಂಗ್ಲೆಂಡ್‌ ಸೋತರೆ ಮನೆಯ ಹಾದಿ ತಲುಪುವುದು ಬಹುತೇಕ ಖಚಿತ.

ಇತ್ತ ಟೀಮ್‌ ಇಂಡಿಯಾದಲ್ಲಿ ರೋಹಿತ್‌, ಗಿಲ್‌, ಕೊಹ್ಲಿ, ಅಯ್ಯರ್‌, ರಾಹುಲ್‌ ಬ್ಯಾಟಿಂಗ್‌ ಲಯ ಕಂಡುಕೊಂಡಿದ್ದರಿಂದ ಹೋರಾಟದ ಮೊತ್ತವನ್ನು ಪೇರಿಸಲು ಕಷ್ಟವಾಗದು. ಕಳೆದ ಪಂದ್ಯದಲ್ಲಿ ತಂಡದಲ್ಲಿ ಸ್ಥಾನ ಪಡೆದುಕೊಂಡ ಸೂರ್ಯಕುಮಾರ್‌ ಯಾದವ್‌ ರನ್‌ ಔಟ್‌ ಆಗುವ ಮೂಲಕ ಹೆಚ್ಚು ಹೊತ್ತು ಬ್ಯಾಟ್‌ ಬೀಸಲು ಸಾಧ್ಯವಾಗಿಲ್ಲ. ಇಂದಿನ ಪಂದ್ಯ ಸೂರ್ಯಕುಮಾರ್‌ ಯಾದವ್‌ ಗೆ ಒಂದೊಳ್ಳೆ ಅವಕಾಶವೆಂದರೆ ತಪ್ಪಾಗದು.

ಬೌಲಿಂಗ್‌ ನಲ್ಲೂ ಭಾರತವೇ ಶ್ರೇಷ್ಠ..  

Advertisement

ಬೌಲಿಂಗ್‌ ವಿಭಾಗದತ್ತ ಬಂದರೆ ತವರಿನ ಲಕ್ನೋ ಟ್ರ್ಯಾಕ್‌ ಮೇಲೆ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಅಪಾಯಕಾರಿಯಾಗಿ ಗೋಚರಿಸಬಹುದು. ಹಾಗೆಯೇ ಅನುಭವಿ ಶಮಿ, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌ ಅವರ ವೇಗದ ದಾಳಿ ಕೂಡ ಪರಿಪೂರ್ಣ ಮಟ್ಟದಲ್ಲಿದೆ. ಹೀಗಾಗಿ ಇಂಗ್ಲೆಂಡ್‌ ವಿರುದ್ಧ ಭಾರತವೇ ಗೆಲ್ಲುವ ನೆಚ್ಚಿನ ತಂಡವೆನಿಸಿದೆ.

ತಂಡಗಳು:  

ಭಾರತ: ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್(ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

ಇಂಗ್ಲೆಂಡ್:‌ ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್(ನಾಯಕ/ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಆದಿಲ್ ರಶೀದ್, ಮಾರ್ಕ್ ವುಡ್

Advertisement

Udayavani is now on Telegram. Click here to join our channel and stay updated with the latest news.

Next