ಚತ್ತೋಗ್ರಾಮ್ (ಬಾಂಗ್ಲಾದೇಶ): ಜಹುರ್ ಅಹ್ಮದ್ ಚೌಧರಿ ಸ್ಟೇಡಿಯಂ’ನಲ್ಲಿ ಭಾರತ ಮತ್ತು ಆತಿಥೇಯ ಬಾಂಗ್ಲಾದೇಶದ ವಿರುದ್ಧ ಟೆಸ್ಟ್ 2 ಪಂದ್ಯಗಳ ಕಿರು ಸರಣಿಯ, ಮೊದಲ ಟೆಸ್ಟ್ ಬುಧವಾರ ಆರಂಭವಾಗಿದ್ದು, ರೋಹಿತ್ ಶರ್ಮ ಗಾಯಾಳಾದ ಕಾರಣ ಈ ಪಂದ್ಯದಲ್ಲಿ ತಂಡವನ್ನು ಕೆ.ಎಲ್.ರಾಹುಲ್ ಮುನ್ನೆಡುಸುತ್ತಿದ್ದಾರೆ.
ಟಾಸ್ ಗೆದ್ದ ರಾಹುಲ್ ಬ್ಯಾಟಿಂಗ್ ಆಯ್ಕೆ ಮಾಡಿ ಕೊಂಡರು. ಆರಂಭಿಕರಾಗಿ ಬಂದ ನಾಯಕ ರಾಹುಲ್ 22, ಶುಭಮನ್ ಗಿಲ್ 20 ರನ್ ಗಳಿಸಿ ಔಟಾದರು.
ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ 5 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಆಘಾತಕಾರಿಯಾಗಿ ಔಟಾದರು.ಬಾಂಗ್ಲಾದೇಶದ ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಂ ಅವರ ಟರ್ನಿಂಗ್ ಎಸೆತಕ್ಕೆ ಕೊಹ್ಲಿ ಲೆಗ್ ಬಿಫೋರ್ ಕ್ಯಾಚ್ ನೀಡಿ ಔಟಾದರು. ಮಾಜಿ ನಾಯಕ ಡಿಆರ್‌ಎಸ್‌ಗೆ ಹೋದರಾರು ಅದು ವ್ಯರ್ಥವಾಯಿತು.
ಕೊಹ್ಲಿ 2020 ರಿಂದ ಟೆಸ್ಟ್‌ನಲ್ಲಿ ಶತಕ ಗಳಿಸಿಲ್ಲ. ಕಡಿಮೆ ರನ್ ಗೆ ಔಟಾದ ನಂತರ ಕೊಹ್ಲಿ ಅವರನ್ನು ಮತ್ತೆ ಭಾರಿ ಟ್ರೋಲ್ ಮಾಡಲಾಗುತ್ತಿದೆ.
19 ಪಂದ್ಯಗಳನ್ನಾಡಿರುವ ಕೊಹ್ಲಿ ಅವರು 33 ಇನ್ನಿಂಗ್ಸ್ ಗಳಲ್ಲಿ 26.45 ಸರಾಸರಿಯೊಂದಿಗೆ 873 ರನ್ ಗಳನ್ನು ಗಳಿಸಿದ್ದಾರೆ, 79 ಅವರ ಅತ್ಯಧಿಕ ಸ್ಕೋರ್ ಆಗಿದೆ. 6 ಅರ್ಧಶತಕಗಳನ್ನು ಗಳಿಸಿದ್ದಾರೆ.
ರಿಷಭ್ ಪಂತ್ 46 ರನ್ ಗಳಿಸಿ ಔಟಾದರು. ಒನ್ ಡೌನ್ ಆಟಗಾರ ಚೇತೇಶ್ವರ ಪೂಜಾರ 62 ರನ್ ಗಳಿಸಿ, ಶ್ರೇಯಸ್ ಅಯ್ಯರ್ 53 ರನ್ ಗಳಿಸಿ ತಾಳ್ಮೆಯ ಆಟವಾಡುತ್ತಿದ್ದಾರೆ. ಭಾರತ 65 ಓವರ್ ಗಳಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 207 ರನ್ ಗಳಿಸಿದೆ.