Advertisement

ಮೊದಲ ಏಕದಿನ ಪಂದ್ಯ: ರಾಹುಲ್ ಗಿಲ್ಲ ಚಾನ್ಸ್

09:05 AM Mar 02, 2019 | Team Udayavani |

ಹೈದರಾಬಾದ್: ವಿಶ್ವಕಪ್ ಗೆ ಅಭ್ಯಾಸ ಸರಣಿ ಎಂದೇ ಹೇಳಲಾಗುತ್ತಿರುವ ಭಾರತ- ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಆಸೀಸ್ ಬ್ಯಾಟಿಂಗ್ ಆಯ್ಕೆ ಮಾಡಿದೆ.
 
ಮೊದಲ ಪಂದ್ಯ ಆಡಲಿಳಿದ ವಿರಾಟ್ ಕೊಹ್ಲಿ ನಾಯಕತ್ವದ ಭಾರತೀಯ ತಂಡದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಸ್ಥಾನ ಪಡೆದಿಲ್ಲ. ಆರಂಭಿಕರಾಗಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಕಣಕ್ಕಿಳಿದಿದ್ದರೆ, ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ, ಅಂಬಟಿ ರಾಯುಡು, ಧೋನಿ, ಕೇದಾರ್ ಜಾಧವ್ ಆಯ್ಕೆಯಾಗಿದ್ದಾರೆ. 

Advertisement

ಆಲ್ ರೌಂಡರ್ ಗಳಾಗಿ ವಿಜಯ್ ಶಂಕರ್ ಮತ್ತು ರವೀಂದ್ರ ಜಡೇಜಾ ಅಂತಿಮ ಆಡುವ ಬಳಗದಲ್ಲಿ ಸ್ಥಾನದಲ್ಲಿದ್ದಾರೆ. ಈ ಇಬ್ಬರು ಆಟಗಾರರು ವಿಶ್ವಕಪ್ ತಂಡದಲ್ಲಿ ಆಡುವ ಸಾಧ್ಯತೆ ಇರುವುದರಿಂದ ಇಬ್ಬರಿಗೂ ಈ ಸರಣಿ ನಿರ್ಣಾಯಕವಾಗಲಿದೆ.  ಬುಮ್ರಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್ ಬೌಲಿಂಗ್ ವಿಭಾಗದಲ್ಲಿ ಈ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next