Advertisement

ಚೇತೇಶ್ವರ್‌ ಪೂಜಾರ ಸೆಂಚುರಿ ಬಾರಿಸಲಿ: ಗಾವಸ್ಕರ್‌ ಹಾರೈಕೆ

12:11 AM Feb 18, 2023 | Team Udayavani |

ಚೇತೇಶ್ವರ್‌ ಪೂಜಾರ 100ನೇ ಟೆಸ್ಟ್‌ ಪಂದ್ಯದಲ್ಲಿ ಸೆಂಚುರಿ ಬಾರಿಸಿದ ಮೊದಲ ಭಾರತೀಯ ಆಟಗಾರನಾಗಿ ಮೂಡಿಬರಲಿ ಎಂಬುದಾಗಿ ಲೆಜೆಂಡ್ರಿ ಓಪನರ್‌ ಸುನೀಲ್‌ ಗಾವಸ್ಕರ್‌ ಹೇಳಿದರು. ಅವರು 100ನೇ ಟೆಸ್ಟ್‌ ಆಡಲಿಳಿದ ಪೂಜಾರ ಅವರಿಗೆ ಕ್ಯಾಪ್‌ ನೀಡಿ ಗೌರವಿಸುವ ಸಂದರ್ಭದಲ್ಲಿ ಹಾರೈಸಿದರು.

Advertisement

“ನೂರನೇ ಟೆಸ್ಟ್‌ ಕ್ಲಬ್‌ಗ ಸ್ವಾಗತ. ನೀವು ನೂರನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಕ್ರಿಕೆಟಿಗನಾಗಬೇಕೆಂಬುದು ನನ್ನ ಹಾರೈಕೆ. ಇದರಿಂದ ಹೊಸದಿಲ್ಲಿ ಟೆಸ್ಟ್‌ನಲ್ಲಿ ಮತ್ತೂಂದು ಗೆಲುವಿಗೆ ನಿಮ್ಮಿಂದ ಬುನಾದಿ ನಿರ್ಮಾಣಗೊಳ್ಳಲಿ. ಕಠಿನ ದುಡಿಮೆ ಮತ್ತು ಅಪಾರ ಆತ್ಮವಿಶ್ವಾಸಕ್ಕೆ ನೀವೊಂದು ರೋಲ್‌ ಮಾಡೆಲ್‌…’ ಎಂದು ಗಾವಸ್ಕರ್‌ ಗುಣಗಾನಗೈದರು. ಕ್ಯಾಪ್‌ ಜತೆಗೆ “100 ಟೆಸ್ಟ್‌ ಮ್ಯಾಚಸ್‌’ ಎಂದು ಬಂಗಾರ ವರ್ಣದಲ್ಲಿ ಕೆತ್ತಿದ ಸ್ಮರಣಿಕೆಯೊಂದನ್ನು ಪೂಜಾರ ಅವರಿಗೆ ನೀಡಲಾಯಿತು.

“ನಿಮ್ಮಂಥ ಲೆಜೆಂಡ್ರಿ ಕ್ರಿಕೆಟಿಗರೇ ನನಗೆ ಸ್ಫೂರ್ತಿ. ಬಾಲ್ಯದಲ್ಲೇ ನಾನು ಭಾರತ ಪರ ಆಡುವ ಕನಸು ಕಾಣುತ್ತಿದ್ದೆ. ಆದರೆ 100 ಟೆಸ್ಟ್‌ ಪಂದ್ಯಗಳನ್ನು ಆಡುತ್ತೇನೆಂದು ಭಾವಿಸಿದವನೇ ಅಲ್ಲ. ಟೆಸ್ಟ್‌ ಕ್ರಿಕೆಟೇ ನಿಜವಾದ ಕ್ರಿಕೆಟ್‌ ಎಂದು ನಂಬಿದವನು ನಾನು. ಬದುಕು ಮತ್ತು ಟೆಸ್ಟ್‌ ಪಂದ್ಯಗಳ ನಡುವೆ ಬಹಳಷ್ಟು ಸಾಮ್ಯಗಳಿವೆ. ಕಠಿನ ಸಂದರ್ಭದಲ್ಲಿ ಹೋರಾಡಿದರೆ ಖಂಡಿತವಾಗಿಯೂ ಬಹಳ ಎತ್ತರಕ್ಕೇರಬಹುದು ಎಂಬುದು ಇಲ್ಲಿನ ಪಾಠ’ ಎಂದು ಪೂಜಾರ ಪ್ರತಿಕ್ರಿಯಿಸಿದರು.

ತನ್ನನ್ನು ಬೆಂಬಲಿಸಿದ ಕುಟುಂಬ, ಮಿತ್ರರು, ಬಿಸಿಸಿಐ, ಮಾಧ್ಯಮ, ಸಹ ಆಟಗಾರರು ಹಾಗೂ ಸಹಾಯಕ ಸಿಬಂದಿಗೆಲ್ಲ ಕೃತಜ್ಞತೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಪೂಜಾರ ಅವರ ಪತ್ನಿ, ಪುತ್ರಿ, ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next