Advertisement
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ 10 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡು ಅಘಾತಕ್ಕೆ ಸಿಲುಕಿತು. 1 ರನ್‌ಗಳಿಸಿದ್ದ ರೆನ್‌ಶಾ ಅವರನ್ನು ಉಮೇಶ್ ಯಾದವ್ ಕ್ಲೀನ್ ಬೌಲ್ಡ್ ಮಾಡಿ ಪೆವಿಲಿಯನ್‌ಗೆ ಅಟ್ಟಿದರು. ಆ ಬಳಿಕ ನೆಲಕಚ್ಚಿ ಆಟವಾಡಿದ ನಾಯಕ ಸ್ಮಿತ್ ಭರ್ಜರಿ ಶತಕ ಸಿಡಿಸಿ ತಂಡಕ್ಕೆ ನೆರವಾದರು. ಅವರು 111 ರನ್ ಗಳಿಸಿ ಔಟಾದರು. 88.3 ಓವರ್‌ಗಳ ಆಟದಲ್ಲಿ ಆಸೀಸ್ 300 ರನ್ ಗಳಿಸಿ ಆಲೌಟಾಯಿತು.
Related Articles
Advertisement
ಮಿಂಚಿದ ಕುಲ್‌ದೀಪ್
ಕೊಹ್ಲಿ ಬದಲಿ ಆಟಗಾರನಾಗಿ ಪಾದಾರ್ಪಣ ಪಂದ್ಯವನ್ನಾಡುತ್ತಿರುವ ಸ್ಪಿನ್ನರ್ ಕುಲ್‌ದೀಪ್ ಯಾದವ್ ಅವರು 4 ವಿಕೆಟ್ ಪಡೆದು ಮಿಂಚಿದ್ದಾರೆ. ಅವರು ಹ್ಯಾಂಡ್ಸ್‌ಕೂಂಬ್ ಮತ್ತು ಮ್ಯಾಕ್ಸ್‌ವೆಲ್‌ರನ್ನು ಕ್ಲೀನ್ ಬೌಲ್ಡ್ ಮಾಡಿದರು.
ಉಮೇಶ್ ಯಾದವ್ 2 ವಿಕೆಟ್ ಪಡೆದರೆ ,ಅಶ್ವಿನ್, ಜಡೇಜಾ ಮತ್ತು ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು.
ವೇಗಿ ಇಶಾಂತ್ ಶರ್ಮಾ ಬದಲಿಗೆ ಭುವನೇಶ್ವರ್ ಕುಮಾರ್‌ಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.
ಭಾರತ ತಂಡ ಇಂತಿದೆ
ಮುರಳಿ ವಿಜಯ್, ಲೋಕೇಶ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ನಾಯಕ), ಕರುಣ್ ನಾಯರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಭುವನೇಶ್ವರ ಕುಮಾರ್, ಉಮೇಶ್ ಯಾದವ್.
ಪಂದ್ಯ ಗೆದ್ದವರು ಸರಣಿ ಗೆಲ್ಲಲಿದ್ದಾರೆ. ಒಂದು ವೇಳೆ ಪಂದ್ಯ ಡ್ರಾಗೊಂಡರೆ ಆಸ್ಟ್ರೇಲಿಯಾ ಬಾರ್ಡರ್‌ಧಿಗಾವಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆ.