Advertisement

ಡ್ರಾ ಆದರೂ ಟ್ರೋಫಿ ನಮ್ದೇ

12:44 AM Jan 19, 2021 | Team Udayavani |

ಬ್ರಿಸ್ಬೇನ್‌: ಭರ್ತಿ ಎರಡು ತಿಂಗಳ ಆಸ್ಟ್ರೇಲಿಯ ಕ್ರಿಕೆಟ್‌ ಪ್ರವಾಸಕ್ಕೆ ಟೀಮ್‌ ಇಂಡಿಯಾ ಮಂಗಳವಾರ ಮಂಗಲ ಹಾಡಲಿದೆ. ಪ್ರವಾಸದ ಕ್ಲೈಮ್ಯಾಕ್ಸ್‌ ಅತ್ಯಂತ ರೋಚಕ ಹಂತ ಮುಟ್ಟಿದೆ. ಭಾರತ “ಬೋರ್ಡರ್‌-ಗಾವಸ್ಕರ್‌ ಟ್ರೋಫಿ’ಯೊಂದಿಗೆ ವಿಮಾನ ಏರುವುದನ್ನು ಕಾಣಲು ಕ್ರಿಕೆಟ್‌ ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ. ಇದಕ್ಕೆ ಮಾಡಬೇಕಾದುದಿಷ್ಟೇ, ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದು, ಸಾಧ್ಯವಾದರೆ ಗೆಲ್ಲುವುದು!

Advertisement

“ಗಬ್ಟಾ’ ಅಂಗಳದಲ್ಲಿ ಪ್ರವಾಸಿ ಭಾರತದ ಗೆಲುವಿಗೆ 328 ರನ್ನುಗಳ ಕಠಿನ ಗುರಿ ಲಭಿಸಿದ್ದು, 4ನೇ ದಿನದ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 4 ರನ್‌ ಮಾಡಿದೆ. ಆದರೆ ಸೋಮವಾರ ಎರಡು ಸಲ ಕಾಡಿದ ಮಳೆ ಅಂತಿಮ ದಿನವೂ ಆಟವಾಡುವ ಸಾಧ್ಯತೆ ಇದೆ. ಆಗ ಪಂದ್ಯಕ್ಕೆ ಡ್ರಾ ಮುದ್ರೆ ಬೀಳುವ ಸಾಧ್ಯತೆಯೇ ಹೆಚ್ಚು.

ಉಳಿದ ಸಾಧ್ಯತೆ ಪ್ರಕಾರ, ಮಳೆ ಸಹಕರಿ ಸಿದರೂ ಭಾರತಕ್ಕೆ ಉಳಿದ 324 ರನ್‌ ಗಳಿಸುವುದು ಸುಲಭವಲ್ಲ. ಅಕಸ್ಮಾತ್‌ ಈ ಗುರಿ ಮುಟ್ಟಿದರೆ ಬ್ರಿಸ್ಬೇನ್‌ನಲ್ಲಿ ಸಾಲು ಸಾಲು ಇತಿಹಾಸ ನಿರ್ಮಾಣ ಗೊಳ್ಳಲಿದೆ. ಆದರೆ ಇಲ್ಲಿ ಭಾರತಕ್ಕಿಂತ ಆಸ್ಟ್ರೇ ಲಿಯಕ್ಕೆ ಗೆಲುವಿನ ಅವಕಾಶ ಹೆಚ್ಚು. ಇದಕ್ಕೆ ರಹಾನೆ ಪಡೆ ಅವಕಾಶ ಕೊಡಬಾರದು.

ಫೈವ್‌ಸ್ಟಾರ್‌ ಸಿರಾಜ್‌

ನಾಲ್ಕನೇ ದಿನ ಭಾರತದ ಬೌಲಿಂಗ್‌ ಹೀರೋಗಳಾಗಿ ಮೆರೆದವರು ಮೊಹಮ್ಮದ್‌ ಸಿರಾಜ್‌ ಮತ್ತು ಶಾರ್ದೂಲ್‌ ಠಾಕೂರ್‌. ಇವರಲ್ಲಿ ಸಿರಾಜ್‌ “ಫೈವ್‌ಸ್ಟಾರ್‌ ಹೀರೋ’ ಎನಿಸಿಕೊಂಡರು. ಇವರ ಸಾಧನೆ 73ಕ್ಕೆ 5 ವಿಕೆಟ್‌. ಟೆಸ್ಟ್‌ ಇನ್ನಿಂಗ್ಸ್‌ ಒಂದರಲ್ಲಿ ಮೊದಲ ಸಲ 5 ವಿಕೆಟ್‌ ಉಡಾಯಿಸಿದ ಸಾಹಸ ಸಿರಾಜ್‌ ಅವರದಾಗಿತ್ತು. ಠಾಕೂರ್‌ 4 ವಿಕೆಟ್‌ ಬೇಟೆಯಾಡಿದರು. ಉಳಿದೊಂದು ವಿಕೆಟ್‌  ಸುಂದರ್‌ ಪಾಲಾಯಿತು. ಆಸ್ಟ್ರೇಲಿಯ 294ಕ್ಕೆ ತನ್ನ ದ್ವಿತೀಯ ಸರದಿಯನ್ನು ಮುಗಿಸಿತು.

Advertisement

ಆಸೀಸ್‌ ಆರಂಭಿಕರ ಆಟ ಭರ್ತಿ 25 ಓವರ್‌ ತನಕ ಸಾಗಿತು. ವಾರ್ನರ್‌-ಹ್ಯಾರಿಸ್‌ ಸೇರಿಕೊಂಡು 89 ರನ್‌ ಒಟ್ಟುಗೂಡಿಸಿದರು. ಈ ಹಂತದಲ್ಲಿ ಠಾಕೂರ್‌ ಎಸೆತವನ್ನು ಪಂತ್‌ಗೆ ಕ್ಯಾಚ್‌ ನೀಡಿದ ಹ್ಯಾರಿಸ್‌ (38) ಮೊದಲಿಗರಾಗಿ ಪೆವಿಲಿಯನ್‌ ಸೇರಿಕೊಂಡರು. ಸುಂದರ್‌ ಅವರ ಮುಂದಿನ ಓವರಿನಲ್ಲೇ ವಾರ್ನರ್‌ (48) ಲೆಗ್‌ ಬಿಫೋರ್‌ ಬಲೆಗೆ ಬಿದ್ದರು. ಅವರಿಗೆ ಸರಣಿಯ ಮೊದಲ ಅರ್ಧ ಶತಕ ಕೈಕೊಟ್ಟಿತು. ಲಬುಶೇನ್‌ (25) ಮತ್ತು ವೇಡ್‌ (0) ಅವರನ್ನು ಒಂದೇ ಓವರಿನಲ್ಲಿ ಉರುಳಿಸುವ ಮೂಲಕ ಸಿರಾಜ್‌ ಕಾಂಗರೂ ಪಾಳೆಯದ ಮೇಲೆ ಅಪಾಯದ ಬಾವುಟ ಹಾರಿಸಿದರು.

ಬ್ರಿಸ್ಬೇನ್‌: ಚೇಸಿಂಗ್‌ ಸುಲಭವಲ್ಲ  :

ಬ್ರಿಸ್ಬೇನ್‌ನಲ್ಲಿ ಈ ವರೆಗೆ ಯಾವ ತಂಡವೂ 4ನೇ ಇನ್ನಿಂಗ್ಸ್‌ನಲ್ಲಿ ಮುನ್ನೂರರಾಚೆಯ ಗುರಿಯನ್ನು ಬೆನ್ನಟ್ಟಿ ಗೆಲುವು ಸಾಧಿಸಿದ್ದಿಲ್ಲ. ಇಲ್ಲಿನ ಸರ್ವಾಧಿಕ ಮೊತ್ತದ ಯಶಸ್ವಿ ಚೇಸಿಂಗ್‌ ದಾಖಲೆ ಆಸ್ಟ್ರೇಲಿಯ ಹೆಸರಲ್ಲೇ ಇದೆ. 1951ರ ವೆಸ್ಟ್‌ ಇಂಡೀಸ್‌ ಎದುರಿನ ಟೆಸ್ಟ್‌ ಪಂದ್ಯದಲ್ಲಿ ಆಸೀಸ್‌ 7ಕ್ಕೆ 236 ರನ್‌ ಬಾರಿಸಿ ಗೆದ್ದು ಬಂದಿತ್ತು.

ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದ ಅಂತಿಮ ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ರನ್‌ ಪೇರಿಸಿದ ದಾಖಲೆ ಪಾಕಿಸ್ಥಾನದ ಹೆಸರಲ್ಲಿದೆ. 2016ರ ಸರಣಿಯ ಪಂದ್ಯದಲ್ಲಿ ಪಾಕ್‌ 450 ರನ್‌ ಗಳಿಸಿತ್ತು. ಅಂದು ಮಿಸ್ಬಾ ಪಡೆಗೆ 490 ರನ್‌ ಗುರಿ ನೀಡಲಾಗಿತ್ತು.

ಇಲ್ಲಿ 4ನೇ ಸರದಿಯಲ್ಲಿ ಭಾರತದ ಅತ್ಯಧಿಕ ಗಳಿಕೆ 355 ರನ್‌. ಅದು 1968ರ ಟೆಸ್ಟ್‌ ಪಂದ್ಯವಾಗಿತ್ತು. ಅಂದು ಮನ್ಸೂರ್‌ ಅಲಿ ಖಾನ್‌ ಪಟೌಡಿ ಬಳಗಕ್ಕೆ 395 ರನ್‌ ಗುರಿ ಲಭಿಸಿತ್ತು. ಎಂ.ಎಲ್‌. ಜಯಸಿಂಹ 101 ರನ್‌, ರುಸಿ ಸುರ್ತಿ 64 ಮತ್ತು ಚಂದು ಬೋರ್ಡೆ 63 ರನ್‌ ಹೊಡೆದು  ಗೆಲುವಿಗೆ ಗರಿಷ್ಠ ಪ್ರಯತ್ನ ಮಾಡಿದ್ದರು. ಅಂತಿಮವಾಗಿ ಅಭಾರತ 39 ರನ್ನುಗಳಿಂದ ಶರಣಾಯಿತು.

ಸ್ಕೋರ್‌   ಪಟ್ಟಿ :

ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌               369

ಭಾರತ ಪ್ರಥಮ ಇನ್ನಿಂಗ್ಸ್‌      336

ಆಸ್ಟ್ರೇಲಿಯ ದ್ವಿತೀಯ ಇನ್ನಿಂಗ್ಸ್‌

ಮಾರ್ಕಸ್‌ ಹ್ಯಾರಿಸ್‌               ಸಿ ಪಂತ್‌ ಬಿ ಠಾಕೂರ್‌            38

ಡೇವಿಡ್‌ ವಾರ್ನರ್‌  ಎಲ್‌ಬಿಡಬ್ಲ್ಯು ಸುಂದರ್‌           48

ಮಾರ್ನಸ್‌ ಲಬುಶೇನ್‌           ಸಿ ರೋಹಿತ್‌ ಬಿ ಸಿರಾಜ್‌         25

ಸ್ಟೀವನ್‌ ಸ್ಮಿತ್‌        ಸಿ ರಹಾನೆ ಬಿ ಸಿರಾಜ್‌            55

ಮ್ಯಾಥ್ಯೂ ವೇಡ್‌     ಸಿ ಪಂತ್‌ ಬಿ ಸಿರಾಜ್‌               0

ಕ್ಯಾಮರಾನ್‌ ಗ್ರೀನ್‌                ಸಿ ರೋಹಿತ್‌ ಬಿ ಠಾಕೂರ್‌       37

ಟಿಮ್‌ ಪೇನ್‌           ಸಿ ಪಂತ್‌ ಬಿ ಠಾಕೂರ್‌            27

ಪ್ಯಾಟ್‌ ಕಮಿನ್ಸ್‌      ಔಟಾಗದೆ 28

ಮಿಚೆಲ್‌ ಸ್ಟಾರ್ಕ್‌     ಸಿ ಸೈನಿ ಬಿ ಸಿರಾಜ್‌ 1

ನಥನ್‌ ಲಿಯಾನ್‌    ಸಿ ಅಗರ್ವಾಲ್‌ ಬಿ ಠಾಕೂರ್‌   13

ಹ್ಯಾಝಲ್‌ವುಡ್‌      ಸಿ ಠಾಕೂರ್‌ ಬಿ ಸಿರಾಜ್‌         9

ಇತರ                      13

ಒಟ್ಟು  (ಆಲೌಟ್‌)                    294

ವಿಕೆಟ್‌ ಪತನ: 1-89, 2-91, 3-123, 4-123, 5-196, 6-227, 7-242, 8-247, 9-274.

ಬೌಲಿಂಗ್‌: ಮೊಹಮ್ಮದ್‌ ಸಿರಾಜ್‌           19.5-5-73-5

ಟಿ. ನಟರಾಜನ್‌                      14-4-41-0

ವಾಷಿಂಗ್ಟನ್‌ ಸುಂದರ್‌                            18-1-80-1

ಶಾದೂìಲ್‌ ಠಾಕೂರ್‌                              19-2-61-4

ನವದೀಪ್‌ ಸೈನಿ                      5-1-32-0

ಭಾರತ ದ್ವಿತೀಯ ಇನ್ನಿಂಗ್ಸ್‌    (ಗೆಲುವಿನ ಗುರಿ 328 ರನ್‌)

ರೋಹಿತ್‌ ಶರ್ಮ     ಬ್ಯಾಟಿಂಗ್‌               4

ಶುಭಮನ್‌ ಗಿಲ್‌      ಬ್ಯಾಟಿಂಗ್‌               0

ಇತರ                      0

ಒಟ್ಟು  (ವಿಕೆಟ್‌ ನಷ್ಟವಿಲ್ಲದೆ)    4

ಬೌಲಿಂಗ್‌: ಮಿಚೆಲ್‌ ಸ್ಟಾರ್ಕ್‌   1-0-4-0

ಜೋಶ್‌ ಹ್ಯಾಝಲ್‌ವುಡ್‌        0.5-0-0-0

Advertisement

Udayavani is now on Telegram. Click here to join our channel and stay updated with the latest news.

Next