ಮುಂಬೈ: ಸತತ ಕ್ರಿಕೆಟ್ ನಿಂದ ಬಳಲಿರುವ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಇತರರು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ನಂತರ ಸುಮಾರು ಒಂದು ತಿಂಗಳ ಅವಧಿಯ ವಿರಾಮವನ್ನು ಪಡೆಯಲಿದ್ದಾರೆ. ಇದಕ್ಕೆ ಕಾರಣ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಸರಣಿ ತಡೆಹಿಡಿಯಲಾಗಿದ್ದು.
ಡಬ್ಲ್ಯೂಟಿಸಿ ಫೈನಲ್ ನಂತರ ವಿರಾಮ ಇರುತ್ತದೆ. ನಾವು ಇನ್ನೂ ಅಫ್ಘಾನಿಸ್ತಾನ ಸರಣಿಯನ್ನು ನಡೆಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಈ ಹಂತದಲ್ಲಿ, ಬ್ರಾಡ್‌ಕಾಸ್ಟರ್ ಒಪ್ಪಂದ ಮತ್ತು ವೆಸ್ಟ್ ಇಂಡೀಸ್ ಪ್ರವಾಸದ ಕಾರಣ ಕಷ್ಟಕರವಾಗಿದೆ. ಹಾಗಾಗಿ, ಆಟಗಾರರ ವಿಶ್ರಾಂತಿಗೆ ಇದು ಸೂಕ್ತ ಸಮಯವಾಗಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಇನ್ಸೈಡ್ ಸ್ಪೋರ್ಟ್ ವರದಿ ಮಾಡಿದೆ.
ಇದನ್ನೂ ಓದಿ:Odisha; ಸಿಕಂದರಾಬಾದ್-ಅಗರ್ತಲಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಾಣಿಸಿಕೊಂಡ ಹೊಗೆ
ಮೂರು ಪಂದ್ಯಗಳ ಏಕದಿನ ಸರಣಿಯನ್ನು ನಡೆಸಲು ಬಿಸಿಸಿಐ ಮತ್ತು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಮಾತುಕತೆ ನಡೆಸಿತ್ತು. ನಂತರ ಟಿ20 ಸರಣಿಯ ಬಗ್ಗೆಯೂ ಮಾತುಕತೆ ನಡೆದಿದೆ. ಆದರೆ, ಎರಡೂ ಯೋಜನೆಗಳು ಈಗ ಸ್ಥಗಿತಗೊಂಡಿವೆ.
ಪ್ರಸಾರಕರು ಇಲ್ಲದಿರುವುದು ಇದಕ್ಕೆ ಪ್ರಾಥಮಿಕ ಕಾರಣ. ಡಿಸ್ನಿ-ಸ್ಟಾರ್ ಜೊತೆಗಿನ ಬಿಸಿಸಿಐ ಒಪ್ಪಂದವು ಆಸ್ಟ್ರೇಲಿಯಾ ಏಕದಿನ ಸರಣಿಯೊಂದಿಗೆ ಮುಕ್ತಾಯಗೊಳ್ಳುವುದರೊಂದಿಗೆ, ಬಿಸಿಸಿಐ ಪ್ರಸಾರ ಪಾಲುದಾರನನ್ನು ಹೊಂದಿಲ್ಲ. ಬಿಸಿಸಿಐ ಮಾಧ್ಯಮ ಹಕ್ಕುಗಳಿಗಾಗಿ ಬಿಸಿಸಿಐ ಹೊಸ ಟೆಂಡರ್ ಕರೆಯ ಬೇಕಾಗಿದ್ದರೂ, ಇದು ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಹಾಗಾಗಿ ಈ ಸರಣಿಗೆ ತಾತ್ಕಾಲಿಕ ಪಾಲುದಾರರ ಕುರಿತು ಮಾತುಕತೆ ನಡೆದಿದೆ.
ಆದರೆ ಭಾರತ – ಅಫ್ಘಾನಿಸ್ತಾನ ಸರಣಿಯು ಹೆಚ್ಚಿನ ಮೌಲ್ಯವನ್ನು ಪಡೆಯುವ ಸಾಧ್ಯತೆಯಿಲ್ಲ. ಹೀಗಾಗಿ ಮಾಧ್ಯಮ ಹಕ್ಕುಗಳ ಒಪ್ಪಂದದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಪ್ರಸಾರಕರು ಅಥವಾ ಬಿಸಿಸಿಐ ತಾತ್ಕಾಲಿಕ ವ್ಯವಸ್ಥೆಯಲ್ಲಿ ಆಸಕ್ತಿ ಹೊಂದಿಲ್ಲ.