Advertisement
ಎರಡನೇ ಸೂಪರ್ ಓವರಿನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 5 ಎಸೆತಗಳಲ್ಲಿ ಎರಡು ವಿಕೆಟಿಗೆ 11 ರನ್ ಗಳಿಸಿದ್ದರೆ ಅಘಾ^ನಿಸ್ಥಾನ ತಂಡವು ಮೂರು ಎಸೆತಗಳಲ್ಲಿ 2 ವಿಕೆಟಿಗೆ ಕೇವಲ 1 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.
ಆರಂಭಿಕ ಕುಸಿತದಿಂದ ಚೇತರಿಸಿಕೊಂಡ ಭಾರತ 4 ವಿಕೆಟಿಗೆ 212 ರನ್ ಪೇರಿಸಿತು. ಇದರಲ್ಲಿ ರೋಹಿತ್ ಕೊಡುಗೆ ಅಜೇಯ 121 ರನ್. ರಿಂಕು ಸಿಂಗ್ ಔಟಾಗದೆ 69 ರನ್ ಹೊಡೆದರು. ಇವರಿಬ್ಬರು ಸೇರಿಕೊಂಡು ಅಂತಿಮ 5 ಓವರ್‌ಗಳಲ್ಲಿ 103 ರನ್, ಕೊನೆಯ ಓವರ್‌ನಲ್ಲಿ 36 ರನ್ ಸೂರೆಗೈದರು. ದಿಟ್ಟ ಜವಾಬಿತ್ತ ಅಫ್ಘಾನಿಸ್ಥಾನ 6 ವಿಕೆಟಿಗೆ 212 ರನ್ ಬಾರಿಸಿದ್ದರಿಂದ ಪಂದ್ಯ ಟೈಗೊಂಡಿತು. ಪಂದ್ಯ ಸೂಪರ್ ಓವರ್‌ನತ್ತ ಮುಖ ಮಾಡಿತು.
Related Articles
ಮೊದಲೆರಡು ಪಂದ್ಯಗಳಲ್ಲಿ ಖಾತೆಯನ್ನೇ ತೆರೆಯದಿದ್ದ ರೋಹಿತ್ ಇಲ್ಲಿ ಹಿಟ್‌ಮ್ಯಾನ್ ಅವತಾರ ಎತ್ತಿದರು. ಕೊನೆಯ ತನಕ ಕ್ರೀಸ್ ಆಕ್ರಮಿಸಿಕೊಂಡು ನಿಂತರು. ಅವರ ಶತಕ 64 ಎಸೆತಗಳಲ್ಲಿ ದಾಖಲಾಯಿತು. ಒಟ್ಟು 69 ಎಸೆತ ನಿಭಾಯಿಸಿದ ರೋಹಿತ್ 11 ಬೌಂಡರಿ ಹಾಗೂ 8 ಸಿಕ್ಸರ್ ಸಿಡಿಸಿದರು.
Advertisement
ರಿಂಕು ಸಿಂಗ್ ಅವರ 69 ರನ್ 39 ಎಸೆತಗಳಿಂದ ಬಂತು. ಇದರಲ್ಲಿ 2 ಫೋರ್, 6 ಸಿಕ್ಸರ್ ಸೇರಿತ್ತು. ಇದು ಅವರ 2ನೇ ಫಿಫ್ಟಿ. ರೋಹಿತ್-ರಿಂಕು 95 ಎಸೆತಗಳಿಂದ ಮುರಿಯದ 5ನೇ ವಿಕೆಟಿಗೆ 190 ರನ್ ಪೇರಿಸಿದರು.22ಕ್ಕೆ 4 ವಿಕೆಟ್ ಉರುಳಿದ ಬಳಿಕ ಜತೆಗೂಡಿದ ರೋಹಿತ್-ರಿಂಕು ಅಫ್ಘಾನ್ ಬೌಲರ್‌ಗಳಿಗೆ ತಿರುಗೇಟು ನೀಡಿದರು. ಈ ಜವಾಬ್ದಾರಿಯುತ ಬ್ಯಾಟಿಂಗ್ ವೇಳೆ ರೋಹಿತ್ ಶರ್ಮ ಟಿ20ಯಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತದ ನಾಯಕರೆನಿಸಿದರು. ವಿರಾಟ್ ಕೊಹ್ಲಿ ಅವರ 1,570 ರನ್ನುಗಳ ದಾಖಲೆ ಪತನಗೊಂಡಿತು. ಮೊದಲ ಓವರ್‌ನಲ್ಲೇ 11 ರನ್ ಬಿಟ್ಟುಕೊಟ್ಟ ಫರೀದ್ ಅಹ್ಮದ್, ಪವರ್ ಪ್ಲೇಯಲ್ಲೇ ಭಾರತಕ್ಕೆ ಕಂಟಕವಾಗಿ ಕಾಡಿದರು. ಸಂಕ್ಷಿಪ್ತ ಸ್ಕೋರ್
ಭಾರತ-4 ವಿಕೆಟಿಗೆ 212 (ರೋಹಿತ್ ಔಟಾಗದೆ 121, ರಿಂಕು ಔಟಾಗದೆ 69, ಫರೀದ್ 20ಕ್ಕೆ 3). ಅಫ್ಘಾನಿಸ್ಥಾನ 6 ವಿಕೆಟಿಗೆ 212 (ಗುರ್ಬಜ್ 50, ಜದ್ರಾನ್ 50, ನೈಬ್ ಔಟಾಗದೆ 55, ನಬಿ 34, ವಾಷಿಂಗ್ಟನ್ 18ಕ್ಕೆ 3).