Advertisement

ಚೀನಾ ವಿರುದ್ಧ ಭಾರತ ವಾಗ್ಧಾಳಿ

08:22 PM Jun 21, 2023 | sudhir |

ನವದೆಹಲಿ: 26/11ರ ಮುಂಬೈ ದಾಳಿಯ ರೂವಾರಿಗಳಲ್ಲೊಬ್ಬ, ಲಷ್ಕರ್‌ ಎ ತೊಯ್ಬಾ ಉಗ್ರ ಸಾಜೀದ್‌ ಮಿರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ಭಾರತದ ಪ್ರಸ್ತಾಪಕ್ಕೆ ಚೀನಾ ಅಡ್ಡಗಾಲು ಹಾಕುತ್ತಿದೆ. ಇದರಿಂದ ಸಿಟ್ಟಾಗಿರುವ ಭಾರತ ವಿಶ್ವಸಂಸ್ಥೆಯಲ್ಲಿ ಚೀನಾವನ್ನು ತರಾಟೆಗೆ ತೆಗೆದುಕೊಂಡಿದೆ.

Advertisement

ಭಯೋತ್ಪಾದನೆ ವಿರುದ್ಧ ಹೋರಾಡಬೇಕೆಂಬ ಜಾಗತಿಕ ಇಚ್ಛಾಶಕ್ತಿಯೇ ಚೀನಾಗೆ ಇಲ್ಲವೆಂದು ಟೀಕಿಸಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಮತ್ತು ಅಮೆರಿಕ ಜಂಟಿಯಾಗಿ ಸಾಜಿದ್‌ ವಿರುದ್ಧದ ಕ್ರಮಕ್ಕೆ ಪ್ರಸ್ತಾಪ ಸಲ್ಲಿಸಿದ್ದವು. ಆತನ ಆಸ್ತಿ ಮುಟ್ಟುಗೋಲು ಹಾಕುವುದರ ಜತೆಗೆ ಶಸ್ತ್ರಾಸ್ತ್ರ ಬಳಕೆ ಹಾಗೂ ಸಂಚಾರಕ್ಕೆ ನಿರ್ಬಂಧ ವಿಧಿಸಲು ಆಗ್ರಹಿಸಿ, ಆತನನ್ನು ಜಾಗತಿಕ ಉಗ್ರನೆಂದು ಘೋಷಿಸಲು ಕೋರಿದ್ದವು. ಆದರೆ, ಚೀನಾ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯ ಆಯೋಗದ ಕಾರ್ಯದರ್ಶಿ ಪ್ರಕಾಶ್‌ ಗುಪ್ತಾ ಮೇಲಿನಂತೆ ಪ್ರತಿಕ್ರಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next