Advertisement

ಬಡರಾಷ್ಟ್ರಗಳಿಗೆ ಭಾರತ ಲಸಿಕೆ ಸಂಗ್ರಾಹಕ ಗಿಫ್ಟ್

11:52 PM Nov 30, 2020 | mahesh |

ನವದೆಹಲಿ: ಕೋವಿಡ್ ಕಾಲಿಟ್ಟ ಆರಂಭದಲ್ಲಿ ಬಡರಾಷ್ಟ್ರಗಳಿಗೆ ಮಲೇರಿಯಾ ಗುಳಿಗೆ ರವಾನಿಸಿ ಭಾರತ ಮಾನವೀಯತೆ ಮೆರೆದಿತ್ತು. ಪ್ರಸ್ತುತ ಕನಿಷ್ಠ ಅಭಿವೃದ್ಧಿ ಹೊಂದಿದ ಜಗತ್ತಿನ 47 ರಾಷ್ಟ್ರಗಳಿಗೆ ಸೋಲಾರ್‌ ಆಧಾರಿತ, ಕೊರೊನಾ ಲಸಿಕೆ ಸಂಗ್ರಾಹಕ ಪೂರೈಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ.

Advertisement

ಕನಿಷ್ಠ ಅಭಿವೃದ್ಧಿ ಹೊಂದಿದ 47 ರಾಷ್ಟ್ರಗಳ 500 ಆಸ್ಪತ್ರೆಗಳಲ್ಲಿ ಇಂಥದ್ದೊಂದು ಯೋಜನೆ ರೂಪಿಸಲು ಗುರುಗ್ರಾಮದ “ಅಂತಾರಾಷ್ಟ್ರೀಯ ಸೋಲಾರ್‌ ಕೂಟ’ (ಐಎಸ್‌ಎ) ನಿರ್ಧರಿಸಿದೆ. ಪ್ಯಾರಿಸ್‌ ಒಪ್ಪಂದದ ಭಾಗವಾಗಿ ಪ್ರಧಾನಿ ಮೋದಿ ಮುಂದಾಳತ್ವದಲ್ಲಿ ಸ್ಥಾಪಿಸಿರುವ ಈ ಕೂಟ, ಉದ್ದೇಶಿತ ಯೋಜನೆಗೆ “ಐಎಸ್‌ಎ ಕೇರ್‌’ ಎಂದು ಹೆಸರಿಟ್ಟಿದೆ. ಆಫ್ರಿಕಾದ ಬಡರಾಷ್ಟ್ರಗಳು, ದ್ವೀಪರಾಷ್ಟ್ರಗಳು ಇದರ ಪ್ರಯೋಜನ ಪಡೆಯಲಿವೆ.

ಏನಿದು ಯೋಜನೆ?: ಕೋವಿಡ್ ಲಸಿಕೆ ಸುರಕ್ಷಿತವಾಗಿ ಸಂಗ್ರಹಿಸಿಡಲು 24/7 ವಿದ್ಯುತ್ತಿನ ಅವಶ್ಯಕತೆ ಇದೆ. ಆದರೆ, ತೀವ್ರ ವಿದ್ಯುತ್ತಿನ ಕೊರತೆ ಅನುಭವಿಸುತ್ತಿರುವ ಕನಿಷ್ಠ ಅಭಿವೃದ್ಧಿ ಹೊಂದಿದ ಬಡರಾಷ್ಟ್ರಗಳಲ್ಲಿ ಇದು ನಿಜಕ್ಕೂ ಸವಾಲು. ಇಂಥ ಪ್ರದೇಶಗಳ ಪ್ರತಿ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಸೋಲಾರ್‌ ಆಧಾರಿತ ಲಸಿಕೆ ಸಂಗ್ರಾಹಕ ಘಟಕವನ್ನು ಐಎಸ್‌ಎ ಸ್ಥಾಪಿಸಲಿದೆ. “ಅಗತ್ಯವಿರುವ ರಾಷ್ಟ್ರಗಳಿಗೆ ಲಸಿಕೆ ಸರಬರಾಜಿಗೆ ಅನುಕೂಲವಾಗುವಂಥ ಕೋಲ್ಡ್‌ ಚೈನ್‌ ಮತ್ತು ಸಂಗ್ರಾಹಕ ಸಾಮರ್ಥ್ಯ ವ್ಯವಸ್ಥೆ ಹೆಚ್ಚಿಸಲು ಭಾರತ ನೆರವಾಗಲಿದೆ’ ಎಂದು ಪ್ರಧಾನಿ ಮೋದಿ ಇತ್ತೀಚೆಗಷ್ಟೇ ಘೋಷಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next