Advertisement

ಇಂದಿನಿಂದ ಭಾರತ-ಇಂಗ್ಲೆಂಡ್‌ ನಡುವೆ 5 ಪಂದ್ಯಗಳ ಟೆಸ್ಟ್‌ ಸರಣಿ ಆರಂಭ

09:59 PM Aug 03, 2021 | Team Udayavani |

ನಾಟಿಂಗ್‌ಹ್ಯಾಮ್‌: ಬುಧವಾರದಿಂದ ಆತಿಥೇಯ ಇಂಗ್ಲೆಂಡ್‌ ವಿರುದ್ಧ ಭಾರತ 5 ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯನ್ನು ಆರಂಭಿಸಲಿದೆ. ಇತ್ತೀಚೆಗೆ ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ವಿಶ್ವಕಪ್‌ ಫೈನಲ್‌ನಲ್ಲಿ ಸೋತಿರುವ ಭಾರತಕ್ಕೆ ಇದು ಅತ್ಯಂತ ಮಹತ್ವದ ಸರಣಿ. ಹಾಗೆಯೇ ಕೊಹ್ಲಿ ನಾಯಕತ್ವಕ್ಕೆ, ಭಾರತದ ಕೆಲವು ಆಟಗಾರರ ಸಾಮರ್ಥ್ಯಕ್ಕೆ ಸವಾಲೂ ಹೌದು. ಒಂದುಕಡೆ ಇಂಗ್ಲೆಂಡ್‌ಗೆ ಇದು ತವರು ನೆಲ, ಇನ್ನೊಂದುಕಡೆ ಭಾರತಕ್ಕೆ ಹಲವು ಆಟಗಾರರ ಗಾಯ, ಲಯದ ಕೊರತೆಯ ಸಮಸ್ಯೆ. ಇವನ್ನೆಲ್ಲ ಮೀರಿ ನಿಲ್ಲುತ್ತದಾ ಕೊಹ್ಲಿ ಪಡೆ?

Advertisement

ಭಾರತಕ್ಕೆ ಹೇಗೆಯೋ, ಹಾಗೆ ಇಂಗ್ಲೆಂಡ್‌ಗೂ ಈ ಸರಣಿ ತನ್ನ ಸಾಮರ್ಥ್ಯದ ಪರೀಕ್ಷೆಯಾಗಿದೆ. ಟೆಸ್ಟ್‌ ವಿಶ್ವಕಪ್‌ ಫೈನಲ್‌ ನಡೆಯುವ ಮುನ್ನ ಇಂಗ್ಲೆಂಡ್‌ ಕೂಡಾ ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಸರಣಿ ಸೋತಿತ್ತು! ಆದ್ದರಿಂದ ಇಲ್ಲಿ ಭಾರತದ ವಿರುದ್ಧ ಅದು ಹೇಗೆ ಆಡಲಿದೆ ಎನ್ನುವ ಕುತೂಹಲ ಎಲ್ಲರಿಗಿದೆ. ಕಾರಣ ನ್ಯೂಜಿಲೆಂಡ್‌ ವಿರುದ್ಧ ಭಾರತ ಆಡುವಾಗ ತಂಡವಿನ್ನೂ ಪೂರ್ಣ ಸಜ್ಜಾಗಿರಲಿಲ್ಲ. ಕೊರೊನಾ ದಿಗ್ಬಂಧನ, ಐಪಿಎಲ್‌, ಇಂಗ್ಲೆಂಡ್‌ ನೆಲದಲ್ಲಿ ಅಭ್ಯಾಸದ ಕೊರತೆಯಿಂದ ನ್ಯೂಜಿಲೆಂಡಿಗರ ವಿರುದ್ಧ ಭಾರತ ಸೋತಿದ್ದು ತೀರಾ ಅನಿರೀಕ್ಷಿತವಾಗಿರಲಿಲ್ಲ. ಆದರೆ ಇಂಗ್ಲೆಂಡ್‌ ತನ್ನದೇ ನೆಲದಲ್ಲಿ ಸೋತಿದ್ದು ಪ್ರಶ್ನಾರ್ಥಕವಾಗಿತ್ತು. ಈಗ ಎರಡೂ ತಂಡಗಳು ಸಂಪೂರ್ಣ ಸಿದ್ಧವಾಗಿವೆ. ಇಲ್ಲಿ ಶಕ್ತಿಯ ನೈಜ ಅನಾವರಣವಾಗಬೇಕಿದೆ.

ಆರಂಭಿಕರು ಯಾರು?: ಶುಭಮನ್‌ ಗಿಲ್‌ ಗಾಯಗೊಂಡು ಭಾರತಕ್ಕೆ ಹಿಂತಿರುಗಿದ್ದಾರೆ, ಇನ್ನೊಬ್ಬ ಬದಲೀ ಆರಂಭಿಕ ಕರ್ನಾಟಕದ ಮಾಯಾಂಕ್‌ ಅಗರ್ವಾಲ್‌ ಕೂಡ ಗಾಯಗೊಂಡು ಮೊದಲ ಟೆಸ್ಟ್‌ಗೆ ಅಲಭ್ಯರಾಗಿದ್ದಾರೆ. ಇವರಿಬ್ಬರ ಅನುಪಸ್ಥಿತಿಯಲ್ಲಿ ರೋಹಿತ್‌ ಶರ್ಮ, ಕೆ.ಎಲ್‌.ರಾಹುಲ್‌ ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತ. ಸದ್ಯಕ್ಕೆ ಬದಲೀ ಆಯ್ಕೆಯೂ ಭಾರತಕ್ಕೆ ಇಲ್ಲ. ಇವರಿಬ್ಬರೂ ಕಚ್ಚಿಕೊಳ್ಳುವುದು ಬಹಳ ಮುಖ್ಯವಾಗಿದೆ.

ಆದರೆ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಈ ಸರಣಿಗೆ ಲಭ್ಯರಿಲ್ಲ. ಇದೂ ಭಾರತಕ್ಕೆ ಹೊಡೆತವಾಗಲಿದೆ. ಇನ್ನು ಅಶ್ವಿ‌ನ್‌, ಜಡೇಜ ಅವರಿಬ್ಬರೂ ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ಗಳಾಗಿದ್ದಾರೆ. ಇಬ್ಬರನ್ನೂ ಆಡಿಸುವುದು ಸೂಕ್ತವಾಗುತ್ತದಾ, ಈ ನೆಲದಲ್ಲಿ ಇಬ್ಬರೂ ಉಪಯೋಗಕ್ಕೆ ಬರುತ್ತಾರಾ ಎಂಬ ಪ್ರಶ್ನೆಯೂ ಇದೆ.

ಇನ್ನು ವೇಗಿಗಳಾದ ಜಸಿøàತ್‌ ಬುಮ್ರಾ, ಇಶಾಂತ್‌ ಶರ್ಮ, ಮೊಹಮ್ಮದ್‌ ಶಮಿ ಹೇಳಿಕೊಳ್ಳುವಂತಹ ಲಯ ತೋರಿಲ್ಲ. ಇವರನ್ನೇ ಇಳಿಸುವುದಾ ಮೊಹಮ್ಮದ್‌ ಸಿರಾಜ್‌, ಶಾದೂìಲ್‌ ಠಾಕೂರ್‌ಗೆ ಅವಕಾಶ ನೀಡಬೇಕಾ ಎಂದೂ ಯೋಚಿಸಬೇಕಿದೆ.

Advertisement

ತಂಡಗಳು:

ಭಾರತ (ಸಂಭಾವ್ಯ): ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ಆರ್‌.ಅಶ್ವಿ‌ನ್‌, ರವೀಂದ್ರ ಜಡೇಜ, ಜಸಿøತ್‌ ಬುಮ್ರಾ, ಇಶಾಂತ್‌ ಶರ್ಮ, ಮೊಹಮ್ಮದ್‌ ಶಮಿ.

ಇಂಗ್ಲೆಂಡ್‌: ಜೋ ರೂಟ್‌ (ನಾಯಕ), ಜೇಮ್ಸ್‌ ಆ್ಯಂಡರ್ಸನ್‌, ಜಾನಿ ಬೇರ್‌ಸ್ಟೊ, ಡೊಮಿನಿಕ್‌ ಬೆಸ್‌, ಸ್ಟುವರ್ಟ್‌ ಬ್ರಾಡ್‌, ರೋರಿ ಬರ್ನ್Õ, ಜೋಸ್‌ ಬಟ್ಲರ್‌, ಝಾÂಕ್‌ ಕ್ರಾಲೀ, ಸ್ಯಾಮ್‌ ಕರನ್‌, ಹಸೀಬ್‌ ಹಮೀದ್‌, ಡಾನ್‌ ಲಾರೆನ್ಸ್‌, ಜ್ಯಾಕ್‌ ಲೀಚ್‌, ಒಲೀ ಪೋಪ್‌, ಒಲೀ ರಾಬಿನ್ಸನ್‌, ಡೊಮಿನಿಕ್‌ ಸಿಬ್ಲೆ, ಮಾರ್ಕ್‌ ವುಡ್‌.

 

ನೇರಪ್ರಸಾರ: ಸೋನಿ ನ್ಪೋರ್ಟ್ಸ್

ಪಂದ್ಯಾರಂಭ: ಮ.3.30

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next