Advertisement

ಕರ್ನಾಟಕ ಸೇರಿ ಹಲವು ಕಡೆ ಆ್ಯಕ್ಟ್ಸನ್‌ ಲಸಿಕೆ ಪ್ರಯೋಗ

08:38 PM Nov 02, 2021 | Team Udayavani |

ನವದೆಹಲಿ : ಅಮೆರಿಕದ ಆ್ಯಕ್ಟ್ಸನ್‌ ಬಯೋಸೈನ್ಸಸ್‌ (Akston biosciences)ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆಯ ಪ್ರಯೋಗಾರ್ಥ ಪರೀಕ್ಷೆ ದೇಶದಲ್ಲಿಯೂ ಶೀಘ್ರವೇ ಶುರುವಾಗಲಿದೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ರಾಜಸ್ಥಾನ, ಗುಜರಾತ್‌ನ ಪ್ರಮುಖ ಆಸ್ಪತ್ರೆಗಳಲ್ಲಿ ಅದರ ಪ್ರಯೋಗ ನಡೆಯಲಿದೆ.

Advertisement

ಪ್ರಸ್ತಾವಿತ ಲಸಿಕೆ ಅತ್ಯಂತ ಕಡಿಮೆ ದರದ ಲಸಿಕೆ ಆ್ಯಕ್ಟ್ಸನ್‌ ನದ್ದು ಎಂದು ಹೇಳಲಾಗುತ್ತಿದೆ. ಸದ್ಯ ಸಿದ್ಧಗೊಳಿಸಲಾಗಿರುವ ಲಸಿಕೆಯ ಮಾದರಿಯನ್ನು ಹಿಮಾಚಲ ಪ್ರದೇಶದ ಕಸೌಲಿಯಲ್ಲಿರುವ ಕೇಂದ್ರೀಯ ಔಷಧ ಪ್ರಯೋಗಶಾಲೆಗೆ ರವಾನಿಸಲಾಗಿದೆ. ಅಲ್ಲಿ ಅದರ ಪರೀಕ್ಷೆ ನಡೆಯಲಿದೆ. ಸದ್ಯ ಲಸಿಕೆಗೆ ಎಕೆಎಸ್‌-452 ಎಂಬ ಹೆಸರು ನೀಡಲಾಗಿದೆ. ಕನಿಷ್ಠ 6 ತಿಂಗಳ ಕಾಲ ಲಸಿಕೆಯನ್ನು 25 ಡಿಗ್ರಿ ಸೆಲ್ಸಿಯಸ್ ನಲ್ಲಿ, 1 ತಿಂಗಳ ಅವಧಿಗೆ 37 ಡಿಗ್ರಿ ಸೆಲ್ಸಿಯಸ್‌ವರೆಗೆ ಇರಿಸಲು ಅವಕಾಶ ಉಂಟು.

259 ದಿನಗಳಿಗೆ ಕನಿಷ್ಠ:
ಇದೇ ವೇಳೆ, ಸೋಮವಾರದಿಂದ ಮಂಗಳವಾರದ ಅವಧಿಯಲ್ಲಿ ದೇಶದಲ್ಲಿ 10,423 ಹೊಸ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. ಇದು 259 ದಿನಗಳಿಗೆ ಹೋಲಿಕೆ ಮಾಡಿದರೆ ಕನಿಷ್ಠದ್ದಾಗಿದೆ. 24 ಗಂಟೆಗಳಲ್ಲಿ 443 ಮಂದಿ ಸೋಂಕಿನಿಂದ ಅಸುನೀಗಿದ್ದಾರೆ. 2020 ಮಾರ್ಚ್‌ ಬಳಿಕ ದೇಶದಲ್ಲಿ ಸಕ್ರಿಯ ಸೋಂಕು ಪ್ರಕರಣ ಶೇ.0.45 ಆಗಿದೆ. ಚೇತರಿಕೆ ಪ್ರಮಾಣ ಶೇ.98.21 ಆಗಿದೆ.

ಇದನ್ನೂ ಓದಿ : ಕೋವಿಡ್ ಹಿನ್ನೆಲೆ : ಕೊಂಗಳ್ಳಿ ಬೆಟ್ಟಕ್ಕೆ ನ. 4ರಿಂದ 18ರವರೆಗೆ ಪ್ರವೇಶ ನಿರ್ಬಂಧ 

ಹೆಚ್ಚುವರಿ ದಾಖಲೆ ಸಲ್ಲಿಕೆ
ನ.3ರಂದು ವಿಶ್ವ ಆರೋಗ್ಯ ಸಂಸ್ಥೆಯ ಪರಿಣತರ ಸಭೆ ನಡೆಯಲಿದೆ. ಅದರಲ್ಲಿ ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌ ಲಸಿಕೆಗೆ ತುರ್ತು ಬಳಕೆಗೆ ಅನುಮೋದನೆ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಅದಕ್ಕಾಗಿ, ಕಂಪನಿ ಅಗತ್ಯವಿರುವ ದಾಖಲೆಗಳನ್ನು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next