ನವದೆಹಲಿ: ಇದೇ ಮೊದಲ ಬಾರಿಗೆ ಯುಎಇ(ಸಂಯುಕ್ತ ಅರಬ್ ಒಕ್ಕೂಟ)ಯಲ್ಲಿ ಭಾರತದ ಐಐಟಿಯೊಂದು ಸ್ಥಾಪನೆಯಾಗಲಿದೆ.
ಕಳೆದ ವಾರ(ಫೆ.18) ಭಾರತ ಮತ್ತು ಯುಎಇ ನಡುವೆ ನಡೆದ ವ್ಯಾಪಾರ ಒಪ್ಪಂದದ ಪ್ರಕಾರ, ಯುಎಇಯಲ್ಲಿ ಭಾರತವು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು ಸ್ಥಾಪಿಸಲಿದೆ. ದೇಶದ ಹೊರಗೆ ಐಐಟಿ ಸ್ಥಾಪನೆಯಾಗುತ್ತಿರುವುದು ಇದೇ ಮೊದಲು.
ಭಾರತದಲ್ಲಿ ಪ್ರಸ್ತುತ 23 ಐಐಟಿಗಳಿವೆ. ಒಪ್ಪಂದದ ಅನ್ವಯ, ಸಾಂಸ್ಕೃತಿಕ ಪ್ರಾಜೆಕ್ಟ್ಗಳು, ಸಾಂಸ್ಕೃತಿಕ ವಿನಿಮಯ, ಪ್ರದರ್ಶನಗಳಿಗೆ ಉತ್ತೇಜನ ನೀಡುವ ಭಾರತ-ಯುಎಇ ಸಾಂಸ್ಕೃತಿಕ ಮಂಡಳಿಯನ್ನು ಸ್ಥಾಪಿಸುವ ನಿರ್ಧಾರವನ್ನೂ ಉಭಯ ದೇಶಗಳು ಕೈಗೊಂಡಿವೆ.
ಇದನ್ನೂ ಓದಿ:ನಿದ್ದೆ-ಪಾದಯಾತ್ರೆ ಮಾಡಿದರೆ ಅಧಿಕಾರಕ್ಕೆ ಬರಲ್ಲ: ಶ್ರೀರಾಮುಲು
ಅಲ್ಲದೇ, ಸ್ವಚ್ಛ ಇಂಧನ ಯೋಜನೆಯಲ್ಲಿ ಪರಸ್ಪರ ಸಹಕಾರ, ಜಂಟಿ ಹೈಡ್ರೋಜನ್ ಕಾರ್ಯಪಡೆ ಸ್ಥಾಪನೆಗೂ ನಿರ್ಧರಿಸಲಾಗಿದೆ.