Advertisement

ಅಮೇಠಿಯಲ್ಲಿ 7.47 ಲಕ್ಷ ಕಲಾಶ್ನಿಕೋವ್‌ ಅಸಾಲ್ಟ್ ರೈಫ‌ಲ್‌ ಉತ್ಪಾದನೆ

10:39 AM Feb 14, 2019 | Team Udayavani |

ಹೊಸದಿಲ್ಲಿ : ಭಾರತ, ರಶ್ಯದ ನೆರವಿನಲ್ಲಿ, ಉತ್ತರ ಪ್ರದೇಶದ ಅಮೇಠಿ ಸಮೀಪ ನಿರ್ಮಿಸಲ್ಪಡುವ ಶಸ್ತ್ರಾಸ್ತ್ರ ಉತ್ಪಾದನೆ ಕಾರ್ಖಾನೆಯಲ್ಲಿ 7.45 ಲಕ್ಷ ಕಲಾಶ್ನಿಕೋವ್‌ ಸರಣಿಯ ಅಸಾಲ್ಟ್ ರೈಫ‌ಲ್‌ಗ‌ಳನ್ನು ಉತ್ಪಾದಿಸಲಿದೆ. 

Advertisement

ಭಾರತೀಯ ಸೇನೆಗಾಗಿ  7.47 ಲಕ್ಷ ಕಲಾಶ್ನಿಕೋವ್‌ ಅಸಾಲ್ಟ್ ರೈಫ‌ಲ್‌ಗ‌ಳನ್ನು ಉತ್ಪಾದಿಸುವ ಪ್ರಸ್ತಾವಕ್ಕೆ ಶಸ್ತ್ರಾಸ್ತ್ರ ಉತ್ಪಾದನೆ ಕಾರ್ಖಾನೆ ಮಂಡಳಿ ಮತ್ತು ರಶ್ಯದ ಜಂಟಿ ಸಹೋದ್ಯಮ ಸಂಸ್ಥೆಗೆ ಪ್ರಧಾನಿ ನರೇಂದ್ರ ಮೋದಿ ಸರಕಾರ ಅನುಮೋದನೆ ನೀಡಿದೆ. 

ನಿನ್ನೆ ಬುಧವಾರ ಪ್ರಧಾನಿ ಮೋದಿ ಸರಕಾರ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿರುವುದನ್ನು ಎಎನ್‌ಐ ಸುದ್ದಿ ಸಂಸ್ಥೆ ದೃಢೀಕರಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next