Advertisement

ಮುಂದಿನ ವರ್ಷ ಇಂಗ್ಲೆಂಡ್‌ನ‌ಲ್ಲಿ ಟಿ20, ಏಕದಿನ ಆಡಲಿದೆ ಭಾರತ

09:34 PM Sep 08, 2021 | Team Udayavani |

ಲಂಡನ್‌: ಭಾರತ ಕ್ರಿಕೆಟ್‌ ತಂಡ ಮುಂದಿನ ವರ್ಷ ಮತ್ತೆ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದೆ. 2022ರ ತವರಿನ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದ ಇಂಗ್ಲೆಂಡ್‌, ಇದರಲ್ಲಿ ಭಾರತದೆದುರಿನ 6 ಪಂದ್ಯಗಳ ಸೀಮಿತ ಓವರ್‌ ಸರಣಿಯನ್ನು ಅಳವಡಿಸಿದೆ.

Advertisement

ಭಾರತ-ಇಂಗ್ಲೆಂಡ್‌ ನಡುವಿನ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿ ಜುಲೈ ಒಂದರಿಂದ ಆರಂಭವಾಗಲಿದೆ. ಅಂದು ಮ್ಯಾಂಚೆಸ್ಟರ್‌ನಲ್ಲಿ ಮೊದಲ ಪಂದ್ಯ ನಡೆಯಲಿದೆ. ಉಳಿದೆರಡು ಪಂದ್ಯಗಳ ತಾಣ ನಾಟಿಂಗ್‌ಹ್ಯಾಮ್‌ (ಜು. 3) ಮತ್ತು ಸೌಥಾಂಪ್ಟನ್‌ (ಜು. 6). ಏಕದಿನ ಪಂದ್ಯಗಳು ಎಜ್‌ಬಾಸ್ಟನ್‌ (ಜು. 9), ಓವಲ್‌ (ಜು. 12) ಮತ್ತು ಲಾರ್ಡ್ಸ್‌ನಲ್ಲಿ (ಜು. 14) ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next