ಹೊಸದಿಲ್ಲಿ: ಅರ್ಥ ವ್ಯವಸ್ಥೆಯಲ್ಲಿ ಮುನ್ನುಗ್ಗುತ್ತಿರುವ ಭಾರತ ದೇಶವು 2075ರ ವೇಳೆಗೆ ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆ ದೇಶವಾಗಲಿದೆ ಎಂದು ವರದಿ ಹೇಳಿದೆ. ಈ ವೇಳೆ ಭಾರತವು ಅಮೆರಿಕ, ಜಪಾನ್ ಮತ್ತು ಜರ್ಮನಿಯನ್ನು ಮೀರಿ ಬೆಳೆಯಲಿದೆ ಎಂದು ಇನ್ವೆಸ್ಟಮೆಂಟ್ ಬ್ಯಾಂಕ್ ಗೋಲ್ಡ್ ಮನ್ ಸ್ಯಾಕ್ಸ್ ವರದಿ ಹೇಳಿದೆ. ಭಾರದ ಸದ್ಯ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ.
ಗೋಲ್ಡಮನ್ ಸ್ಯಾಕ್ಸ್ ವರದಿಯ ಪ್ರಕಾರ, ಜನಸಂಖ್ಯೆ, ಆವಿಷ್ಕಾರ, ತಂತ್ರಜ್ಞಾನ, ಹೆಚ್ಚಿನ ಬಂಡವಾಳ ಹೂಡಿಕೆ ಮತ್ತು ಹೆಚ್ಚುತ್ತಿರುವ ಕಾರ್ಮಿಕರ ಉತ್ಪಾದಕತೆಗಳು ಭಾರತವನ್ನು ವಿಶ್ವದ ಎರಡನೇ ದೊಡ್ಡ ಆರ್ಥಿಕತೆಯನ್ನಾಗಿ ಮಾಡಬಲ್ಲವು.
ಮುಂದಿನ ಎರಡು ದಶಕಗಳಲ್ಲಿ ಭಾರತದ ಅವಲಂಬನೆ ಅನುಪಾತವು ಪ್ರಾದೇಶಿಕ ಆರ್ಥಿಕತೆಗಳಲ್ಲೇ ಅತಿ ಕಡಿಮೆಯಾಗಿರಲಿದೆ ಎಂದು ವರದಿ ತಿಳಿಸಿದೆ.
ಮುಂದಿನ ದಿನಗಳಲ್ಲಿ ಆವಿಷ್ಕಾರ, ಹೆಚ್ಚಿನ ಬಂಡವಾಳ ಹೂಡಿಕೆ ಮತ್ತು ಹೆಚ್ಚುತ್ತಿರುವ ಕಾರ್ಮಿಕರ ಉತ್ಪಾದಕತೆಗಳು ಪ್ರಮುಖ ಪಾತ್ರ ವಹಿಸಲಿದೆ ಎಂದು ಗೋಲ್ಡಮನ್ ಸ್ಯಾಕ್ಸ್ ನ ಭಾರತೀಯ ಅರ್ಥಶಾಸ್ತ್ರಜ್ಞ ಶಂತನು ಸೇನ್ ಗುಪ್ತಾ ಹೇಳಿದ್ದಾರೆ.
“ಹೌದು, ದೇಶದ ಪರವಾಗಿ ಜನಸಂಖ್ಯಾಶಾಸ್ತ್ರವನ್ನು ಹೊಂದಿದೆ, ಆದರೆ ಅದು ಜಿಡಿಪಿ ಯ ಏಕೈಕ ಪ್ರಮುಖ ಅಂಶವಾಗುವುದಿಲ್ಲ. ನಾವೀನ್ಯತೆ ಮತ್ತು ಕಾರ್ಮಿಕರ ಉತ್ಪಾದಕತೆಯನ್ನು ಹೆಚ್ಚಿಸುವುದು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಗೆ ಪ್ರಮುಖವಾಗಿದೆ. ತಾಂತ್ರಿಕ ಪರಿಭಾಷೆಯಲ್ಲಿ ಹೇಳುವುದಾದರೆ, ಭಾರತದ ಆರ್ಥಿಕತೆಯಲ್ಲಿ ಕಾರ್ಮಿಕ ಮತ್ತು ಬಂಡವಾಳದ ಪ್ರತಿಯೊಂದು ಘಟಕಕ್ಕೆ ಹೆಚ್ಚಿನ ಉತ್ಪಾದನೆ ಎಂದು ಅವರು ಹೇಳಿದರು.
“ಭಾರತದ ಉಳಿತಾಯ ದರವು ಕಡಿಮೆಯಾಗುವ ಅವಲಂಬನೆ ಅನುಪಾತಗಳು, ಹೆಚ್ಚುತ್ತಿರುವ ಆದಾಯಗಳು ಮತ್ತು ಆಳವಾದ ಆರ್ಥಿಕ ವಲಯದ ಅಭಿವೃದ್ಧಿಯೊಂದಿಗೆ ಹೆಚ್ಚಾಗುವ ಸಾಧ್ಯತೆಯಿದೆ, ಇದು ಹೆಚ್ಚಿನ ಹೂಡಿಕೆಯನ್ನು ಹೆಚ್ಚಿಸಲು ಬಂಡವಾಳದ ಪೂಲ್ ಅನ್ನು ಲಭ್ಯವಾಗುವಂತೆ ಮಾಡುವ ಸಾಧ್ಯತೆಯಿದೆ” ಎಂದು ಅವರು ಹೇಳಿದರು.